ಸವಣೂರಿನಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ-ನಾಸಿಕ್‌ಬ್ಯಾಂಡ್‌, ಮಕ್ಕಳಿಂದ ಮೆರವಣಿಗೆಯುದ್ದಕ್ಕೂ ಕುಣಿತ ಭಜನೆ

0

ಪರಿಸರದಲ್ಲಿ ದೈವತ್ವವನ್ನು ಕಂಡವರು ನಾವು- ಡಾ.ಹರಿಕೃಷ್ಣ ರೈ

ಸವಣೂರು: ಸನಾತನ ಹಿಂದೂಧರ್ಮವು ಪರಿಸರದಲ್ಲಿ ದೈವತ್ವವನ್ನು ಕಂಡವರು. ಅದರಲ್ಲೂ ನಮ್ಮ  ತುಳುನಾಡಿನ ಆಚರಣೆಗೂ ನಮ್ಮ ಬದುಕಿಗೂ ಅವಿನಾಭವ ಸಂಬಂಧವಿದೆ. ನಾಗರ ಪಂಚಮಿ ಆರಂಭಗೊಳ್ಳುವ ಮೂಲಕ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ತುಳುನಾಡಿನಲ್ಲಿ ನಾಗನಿಗೆ ವಿಶೇಷವಾದ ಸ್ಥಾನವಿದೆ. ಶ್ರೀ ಗಣೇಶನ ಸೃಷ್ಟಿ ಹಾಗೂ ರೂಪವೇ ವಿಶೇಷ ಎಂದು ಬೆಂಗಳೂರು ಜೆ.ಇ.ಹೆಲ್ತ್‌ ಕೇರ್‌ ಸೀನಿಯರ್‌ ಪ್ರಾಜೆಕ್ಟ್‌ ಮ್ಯಾನೇಜರ್‌, ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಡಾ.ಹರಿಕೃಷ್ಣ ರೈ ಹೇಳಿದರು.

ಅವರು ಸವಣೂರಿನ ವಿನಾಯಕ ಸಭಾಭವನದಲ್ಲಿ ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆದ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಗಣಪನ ಸೃಷ್ಟಿಯಲ್ಲಿ ಮಾತೃಭಕ್ತಿ ,ಕರ್ತವ್ಯ ನಿಷ್ಟೆಯಿದ್ದರೆ ಗಣೇಶನ ರೂಪದಲ್ಲಿ ಸೊಂಡಿಲು, ಕಣ್ಣು , ಕಿವಿ, ಬಾಯಿ ಎಲ್ಲವೂ ಜೀವನ ಪಾಠ ಸೂಚಿಸುತ್ತದೆ. ರಾಷ್ಟ್ರೀಯತೆಯ ದೃಷ್ಟಿಕೋನದಿಂದ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ ಬಾಲಗಂಗಾಧರ ತಿಲಕ ಅವರ ವ್ಯಕ್ತಿತ್ವದ ಫಲ ಇಂದು ಸಮಾಜದಲ್ಲಿ ಎದ್ದು ಕಾಣುತ್ತಿದೆ. ಧರ್ಮ ಜಾಗೃತಿಗೆ ಉತ್ಸವಗಳು ಪೂರಕ ಎಂದರು.

ಸಕ್ಷಮದಿಂದ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ:
ಕರ್ನಾಟಕದ 17 ಜಿಲ್ಲೆಗಳನ್ನೊಳಗೊಂಡ ಸಕ್ಷಮ (ಸಮದೃಷ್ಟಿ, ಕ್ಷಮತ ವಿಕಾಸ ಅನುಸಂಧಾನ ಮಂಡಲ) ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿಯೂ ಆಗಿರುವ ಡಾ.ಹರಿಕೃಷ್ಣ ರೈ ಅವರು ಸಂಸ್ಥೆಯ ಯೋಜನೆಗಳ ಕುರಿತೂ ಮಾಹಿತಿ ನೀಡಿ, ಸಕ್ಷಮವು ಅಂಗ ಸವಾಲುಗಳಿರುವ ವಿಶೇಷ ಚೇತನರ ಸರ್ವಾಂಗೀಣ ವಿಕಾಸಕ್ಕಾಗಿ ಕಾರ್ಯಶೀಲವಾಗಿರುವ ರಾಷ್ಟ್ರೀಯ ಸಂಘಟನೆ, ವಿಶೇಷ ಚೇತನರನ್ನು ಸಂಘಟಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅವರನ್ನು ಸುನಿಶ್ಚಿತಗೊಳಿಸುವ ಧ್ಯೇಯದೊಂದಿಗೆ ಕ್ರಿಯಾಶೀಲವಾಗಿದ್ದು, 2025ರಲ್ಲಿ ದೇಶದಲ್ಲಿ ಕಾರ್ನಿಯಾ ಅಂಧತ್ವವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸಕ್ಷಮ ಹಲವು ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದರು.

ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.ಮಾತನಾಡಿ, ಹೆಚ್ಚು ಹಬ್ಬಗಳನ್ನು ಆಚರಿಸುವ ದೇಶ ನಮ್ಮ ಭಾರತ, ಆಚರಣೆಯ ಮೂಲ ಉದ್ದೇಶ ಹಾಗೂ ಮೂಲನಂಬಿಕೆಯನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಸವಣೂರು ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ.ನೂಜಾಡಿ ಮಾತನಾಡಿ, ಹಿಂದೂ ಧರ್ಮದಲ್ಲಿ ಗಣಪತಿಗೆ ವಿಶೇಷ ಸ್ಥಾನವಿದೆ. ಯಾವ ಕಾರ್ಯ ನಡೆಸುವಾಗಲೂ ಗಣಪನಿಗೆ ಮೊದಲ ಪ್ರಾರ್ಥನೆ ಸಲ್ಲಿಸುತ್ತೇವೆ. ಗಣಪತಿ ಎಲ್ಲಾ ದೇವರಿಗೂ ಅಧಿನಾಯಕ. ನಮ್ಮ ಎಲ್ಲಾ ಆಚರಣೆಗಳನ್ನು ನಾವು ಮನೆಯಲ್ಲಿ ಆಚರಿಸಬೇಕು. ಪ್ರತೀ ಮನೆಯಲ್ಲೂ ಸಂಸ್ಕಾರದ ಬೋಧನೆಯಾಗಬೇಕು. ಭಜನೆ, ಗೋಸಾಕಾಣಿಕೆ ನಿತ್ಯದ ಕಾರ್ಯವಾಗಬೇಕು. ಹೆಣ್ಮಕ್ಕಳು ಮೈ ತುಂಬಾ ಬಟ್ಟೆ ಹಾಕಬೇಕು, ಸಂಸ್ಕೃತಿಯ ದ್ಯೋತಕವಾದ ತಿಲಕವಿಡಬೇಕು ಈ ನಿಟ್ಟಿನಲ್ಲಿ ಮಕ್ಕಳ ಪೋಷಕರಾದ ನಾವೂ ಗಮನಿಸಬೇಕು ಎಂದರು.

ಅಧ್ಯಕ್ಷತೆಯನ್ನು ಸವಣೂರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸವಣೂರು ಗಣೇಶೋತ್ಸವದ ಸ್ಥಾಪಕರಾದ ಬಡಗನ್ನೂರಿನ ದಿ.ಚಂದ್ರಹಾಸ ರೈ ಅವರ ಪರವಾಗಿ ಅವರ ಪುತ್ರ ಸವಣೂರು ಆದರ್ಶ ಸಹಕಾರ ಸಂಘದ ಉದ್ಯೋಗಿ ಭವಿತ್‌ರೈ ಅವರನ್ನು ಗೌರವಿಸಲಾಯಿತು. ಸಮಿತಿಯ ಉಪಾಧ್ಯಕ್ಷ ರಾಘವ ಗೌಡ ಸವಣೂರು, ಸದಸ್ಯರಾದ ಕುಸುಮಾ ಪಿ.ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ವೈಷ್ಣವಿ ಮತ್ತು ಬಳಗ ಪ್ರಾರ್ಥಿಸಿದರು. ಸಮಿತಿ ಸದಸ್ಯ ಚೇತನ್‌ಕುಮಾರ್‌ಕೋಡಿಬೈಲು ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ರೈ ದೇವಸ್ಯ ವಂದಿಸಿದರು. ಸವಣೂರು ಸಿಎ ಬ್ಯಾಂಕ್‌ಮುಖ್ಯಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್‌ಪಿ. ಕಾರ್ಯಕ್ರಮ ನಿರೂಪಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಅರುಣ್‌ಕುಮಾರ್‌ಪುತ್ತಿಲ ಭೇಟಿ:
ಶ್ರೀ ಗಣೇಶೋತ್ಸವಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಹಿಂದೂ ಮುಖಂಡ ಅರುಣ್‌ಕುಮಾರ್‌ಪುತ್ತಿಲ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಧಾರ್ಮಿಕ ಕಾರ್ಯಕ್ರಮ, ಶೋಭಾಯಾತ್ರೆ:
ಸೆ.21ರಂದು ಬೆಳಿಗ್ಗೆ ಉಷೆ ಪಜೆ, ಗಣಹೋಮ, ಶ್ರೀವಿಷ್ಣು ಪ್ರಿಯಾ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ, ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯಿಂದ ಕುಣಿತ ಭಜನೆ ಬಳಿಕ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಬಳಿಕ ನಡೆದ ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಯೋಧ ಪುಣ್ಚಪ್ಪಾಡಿ ಪ್ರಥಮ, ವಿಷ್ಣು ಫ್ರೆಂಡ್ಸ್‌ವಿಷ್ಣುಪುರ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪದ್ಮಶ್ರೀ ಮಹಿಳಾ ಮಂಡಲ ಸವಣೂರು ಪ್ರಥಮ, ಶ್ರೀ ರಕ್ತೇಶ್ವರಿ ಸರ್ವೆ ದ್ವಿತೀಯ ಬಹುಮಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸಮಿತಿಯ  ಗೌರವಾಧ್ಯಕ್ಷ ಕೆ, ಸೀತಾರಾಮ ರೈ ಸವಣೂರು, ಅಧ್ಯಕ್ಷ ಶಿವರಾಮ ಗೌಡ ಮೆದು, ಉಪಾಧ್ಯಕ್ಷ ರಾಘೌ ಗೌಡ ಸವಣೂರು, ಕಾರ್ಯದರ್ಶಿ ಸುಧಾಕರ ರೈ ದೇವಸ್ಯ, ಜತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಸದಸ್ಯರಾದ ಯನ್.ಸುಂದರ ರೈ, ರಾಜರಾಮ ಪ್ರಭು, ಚಂದಪ್ಪ ಪೂಜಾರಿ, ಚಂದ್ರಶೇಖರ ಪಿ., ಸಂಜೀವ ಪೂಜಾರಿ ,ಕುಸುಮಾ ಪಿ.ಶೆಟ್ಟಿ, ವಿಜಯ ಈಶ್ವರ ಗೌಡ, ತಾರನಾಥ ಸವಣೂರು, ಇ.ಎಸ್.ವಾಸುದೇವ ಇಡ್ಯಾಡಿ, ಶಾರದಾ ಮಾಲೆತ್ತಾರು, ಬಾಲಚಂದ್ರ ರೈ ಕೆ., ಸುರೇಶ್‌ಸರ್ವೆ, ಗಂಗಾಧರ ಸುಣ್ಣಾಜೆ.ವೆಂಕಪ್ಪ ಅಡೀಲು, ರಾಜೇಶ್‌ಇಡ್ಯಾಡಿ, ಗಂಗಾಧರ ಪೆರಿಯಡ್ಕ, ಬೆಳಿಯಪ್ಪ ಗೌಡ, ದಿವಾಕರ ಬಸ್ತಿ,ಸತೀಶ್‌ಬಲ್ಯಾಯ, ಚೇತನ್‌ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ ಮಹಾಪೂಜೆ ನಡೆದು ಶ್ರೀಗಣಪತಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸವಣೂರು ಯುವಕ ಮಂಡಲದ ನಾಸಿಕ್‌ಬ್ಯಾಂಡ್‌ಸೇವೆ ಹಾಗೂ ಮುಗೇರು ಶ್ರೀಮಹಾವಿಷ್ಣು ಬಾಲ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು. ಬಳಿಕ ಸರ್ವೆ ಶ್ರೀಗೌರಿ ಹೊಳೆಯಲ್ಲಿ ವಿಗ್ರಹದ ಜಲಸ್ತಂಬನ ನಡೆಯಿತು. ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ವಿವಿಧ ಕಡೆ ಸಿಹಿತಿಂಡಿ, ಅವಲಕ್ಕಿ ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here