ಉಪ್ಪಿನಂಗಡಿ: ಕಠಿಣ ಪರಿಶ್ರಮದ ಬದುಕು ನಮ್ಮದಾದಾಗ ಜೀವನದಲ್ಲಿ ಯಶಸ್ಸು ನಮ್ಮದಾಗಿ, ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಮಂಗಳೂರು ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಕೆ.ಸಿ. ನಾೖಕ್ ಹೇಳಿದರು.
ಉಪ್ಪಿನಂಗಡಿ ಸಮೀಪದ ಪೆದಮಲೆಯಲ್ಲಿ ನಿರ್ಮಾಣಗೊಂಡ ಅನ್ನಪೂರ್ಣ ರೆಸಿಡೆನ್ಸಿ ವಸತಿ ಸಮುಚ್ಛಯವನ್ನು ಸೆ.21ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕೂಡಿದ ಪರೋಪಕಾರದ ಮೂಲಕ ಇತರರಿಗೆ ಮಾದರಿಯಾದ ಜೀವನ ಶೈಲಿ ನಮ್ಮದಾಗಬೇಕು. ಹಸಿವನ್ನು ನೀಗಿಸುವ ಜೊತೆಯಲ್ಲಿ ವಾಸಿಸುವುದಕ್ಕೆ ಆಶ್ರಯ ನೀಡುವ ಕೆಲಸ ಅನ್ನಪೂರ್ಣ ರೆಸಿಡೆನ್ಸಿ ಸಂಸ್ಥೆಯವರಿಂದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಹಿರಿಯರು ಯುವ ಪೀಳಿಗೆಗೆ ಪ್ರೇರಣಾ ಶಕ್ತಿಯಾಗಿ, ಉದ್ಯೋಗ ಸೃಷಿಸುವಲ್ಲಿ ಒತ್ತು ಕೊಡಬೇಕಾದ ಅನಿವಾರ್ಯತೆ ಇದೆ. ಸಮುಚ್ಛಯದ ಮಾಲೀಕರ ನಿರಂತರ ಪರಿಶ್ರಮವೇ ಇಂದು ಇಂತಹ ಸಾಧನೆಗೆ ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಇಳಂತಿಲ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಉದ್ಯಮಿ ಯು.ರಾಮ, ಸಮುಚ್ಛಯದ ಮಾಲಕ ಜಯರಾಮ ನಾಕ್ ಉಪಸ್ಥಿತರಿದ್ದರು. ಕಟ್ಟಡದ ಗುತ್ತಿಗೆದಾರ ಧರ್ಮರಾಜ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ. ರಾಧಾಕೃಷ್ಣ ನಾೖಕ್, ವಸಂತ ಮಜಲು, ಈಸುಬು ಪೆದಮಲೆ, ರವಿ ಶಿಲ್ಪಾ, ಜಲೀಲ್, ಸದಾನಂದ ಸಾಲಿಯಾನ್, ಉಮೇಶ್ ಶೆಣೈ, ಶಶಿಕಲಾ, ಸುಧಾಕರ ಕೆ., ನಿತೇಶ್ ಕೆ., ಶರಣ್ಯ, ಭಾವನಾ, ಧೀರಜ್ ನಾೖಕ್, ಅನನ್ಯ ಎ.ಎಸ್., ಅಮೃತಾ ಎ.ಎಸ್., ಸತೀಶ್ ಕುಮಾರ್, ಗುಲಾಬಿ, ಕು. ಸ್ಥನಿಕ, ಮಾ. ಸ್ನಿತಿಕ್ ಉಪಸ್ಥಿತರಿದ್ದರು. ಉದ್ಯಮಿ ಹರೀಶ್ ಕೆ. ಸ್ವಾಗತಿಸಿದರು. ಸೌಹಾರ್ದ ಹರೀಶ್ ಕೆ.ಎಸ್. ವಂದಿಸಿದರು. ಸುರೇಶ್ ಕುಮಾರ್ ಆರ್.ಎನ್. ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.