ತ್ರೋಬಾಲ್ ಪಂದ್ಯಾಟ : ಪುತ್ತೂರು ಬೆಥನಿ ಆ.ಮಾ ಶಾಲೆ ಮತ್ತು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಚಾಂಪಿಯನ್ – ಜಿಲ್ಲಾ ಮಟ್ಟಕ್ಕೆ

0

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಬೆಥನಿ ಆಂಗ್ಲ ಮಾಧ್ಯಮ ಶಾಲೆ, ದರ್ಬೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾರ್ಥಮಿಕ ಶಾಲಾ ವಿಭಾಗದ ಬಾಲಕ – ಬಾಲಕಿಯರ ತ್ರೋಬಾಲ್ ಪಂದ್ಯಾಟವು ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.20ರಂದು ನಡೆಯಿತು.

ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಪುತ್ತೂರು ಮಾಯಿದೆ ದೇವುಸ್ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂದನೀಯ ಲಾರೆನ್ಸ್ ಮಸ್ಕರೇನಸ್ ನೆರವೇರಿಸಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾ ಸಂಸ್ಥೆಯ ಸಂಚಾಲಕಿ ಪ್ರಶಾಂತಿ ಬಿ ಎಸ್ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಗೆಲುವು ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ವಿದ್ಯಾ ಆರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಪ್ರಾಥಮಿಕ ಶಾಲಾ ನೋಡಲ್ ಅಧಿಕಾರಿ ಸ್ಟ್ಯಾನಿ ಪ್ರವೀಣ್ ಮಸ್ಕರೆನಸ್, ಪ್ರೌಢ ವಿಭಾಗದ ನೋಡಲ್ ಅಧಿಕಾರಿ ಐವಿ ಗ್ರೆಟ್ಟಾ ಪಾಯ್ಸ್, ಬೆಥನಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಆಗ್ನೇಸ್ ಶಾಂತಿ ಬಿ.ಎಸ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಅಕ್ಷತಾ ಜಯಕುಮಾರ್, ಮಕ್ಕಳ ಸುರಕ್ಷಾ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸೆಲಿನ್ ಪೇತ್ರಾ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ಪುತ್ತೂರು ಬೆಥನಿ ಶಾಲೆಗೆ ಪ್ರಶಸ್ತಿ
ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಪಡೆದರೆ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯು ರನ್ನರ್ ಆಫ್ ಪ್ರಶಸ್ತಿಯನ್ನು ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ತಂಡವು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಮೂಡಿ ಬಂತು ಹಾಗೂ ಪ್ರಥಮ ಸ್ಥಾನ ಬಂದ ಈ ಎರಡೂ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.

ಬಾಲಕರ ವಿಭಾಗದಲ್ಲಿ ಉತ್ತಮ ಹಿಡಿತಗಾರನಾಗಿ ಶಿಶಿರ್, ಉತ್ತಮ ಎಸೆತಗಾರನಾಗಿ ವೈಷ್ಣವ್ ಪಿ.ಡಿ ಮತ್ತು ಸರ್ವಾಂಗೀನ ಆಟಗಾರನಾಗಿ ಆಯತುಲ್ ಸಲೀಂ ಆಯ್ಕೆಯಾದರು.
ಬಾಲಕಿಯರ ವಿಭಾಗದಲ್ಲಿ ಉತ್ತಮ ಎಸೆತಗಾರ್ತಿ ಅನುಶ್ರೀ, ಉತ್ತಮ ಹಿಡಿತಗಾರ್ತಿಯಾಗಿ ನಿರೀಕ್ಷಾ ಶೆಟ್ಟಿ ಮತ್ತು ಸರ್ವಾಂಗೀನ ಆಟಗಾರ್ತಿಯಾಗಿ ಹನಾ ನಫೀಜಾ ಆಯ್ಕೆಯಾದರು.

ಈ ಕಾರ್ಯಕ್ರಮವನ್ನು ಪ್ರಶಾಂತಿ ಬಿ ಎಸ್ ಸ್ವಾಗತಿಸಿ, ದೈಹಿಕ ಶಿಕ್ಷಕ ನಿರಂಜನ್ ವಂದಿಸಿ, ಅನಿತಾ ರೋಡ್ರಿಗಸ್, ಕ್ಲೇರಾ ಪಾಯ್ಸ್ ಮತ್ತು ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕ ಅಕ್ಷಯ್ ರವರು ತರಬೇತಿ ನೀಡಿದರು.

LEAVE A REPLY

Please enter your comment!
Please enter your name here