ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ 47ನೇ ವರ್ಷದ ಶ್ರೀ ಗಣೇಶೋತ್ಸವ

0

ಐಕ್ಯತೆಯ ಹಬ್ಬಾಚರಣೆಯಿಂದ ಸಾಮರಸ್ಯ ಸಾಧ್ಯ: ಕೇಶವ ಭಟ್
ಉಪ್ಪಿನಂಗಡಿ: ಹಬ್ಬಗಳ ಆಚರಣೆಯ ಹಿಂದೆ ಸಂತೋಷದ ಹಿನ್ನೆಲೆ ಇದೆ. ಪರಸ್ಪರ ಒಗ್ಗೂಡಿ ನಡೆಸುವ ಹಬ್ಬಗಳು ಸಮಾಜದಲ್ಲಿ ಸಾಮರಸ್ಯದ ಜೊತೆಗೆ ಸಂತಸಮಯ ವಾತಾವರಣವನ್ನು ಮೂಡಿಸುತ್ತದೆ ಎಂದು ಧಾರ್ಮಿಕ ಚಿಂತಕ ವೇದಮೂರ್ತಿ ಕೇಶವ ಭಟ್ ಕೇಕನಾಜೆ ತಿಳಿಸಿದರು.
ಅವರು ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬುಧವಾರ ರಾತ್ರಿ ನಡೆದ 47ನೇ ವರ್ಷದ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿಂದೂ ಧರ್ಮ ಸಂಸ್ಕೃತಿಗಳ ಜೀವಂತಿಕೆಗೆ ಹಬ್ಬಗಳೂ ಪ್ರಮುಖ ಕಾರಣವಾಗಿದ್ದು, ಎಳೆ ವಯಸ್ಸಿನ ಮಕ್ಕಳಿಗೆ ಹಬ್ಬಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯ ಎಲ್ಲೆಡೆಯಲ್ಲಿಯೂ ನಡೆಯಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಕಬಡ್ಡಿ ತಂಡದ ನಾಯಕ ಪ್ರಶಾಂತ್ ಕುಮಾರ್ ರೈ ಕೈಕಾರ ಮಾತನಾಡಿ, ಯಾವುದೇ ಹಬ್ಬಗಳನ್ನು ಸಮಾಜದ ಎಲ್ಲರೂ ಒಗ್ಗೂಡಿ ಆಚರಿಸುವುದರಿಂದ ಸಮಾಜವೂ ಸಂಘಟಿತಗೊಳ್ಳುತ್ತದೆ. ಭಗವಂತನೂ ಸಂತೃಪ್ತನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಟೀಮ್ ದಕ್ಷಿಣ ಕಾಶಿ ಅಂಬುಲೆನ್ಸ್ ಚಾಲಕ, ಜೀವ ರಕ್ಷಕ ಕಿಶೋರ್ ನೀರಕಟ್ಟೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೇನಾಧಿಕಾರಿ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪುರುಷೋತ್ತಮ ಮುಂಗ್ಲಿಮನೆ, ಹರೀಶ್ ಪೈ, ಐ. ಚಿದಾನಂದ ನಾಯಕ್, ಶ್ರೀನಿವಾಸ್ ಪ್ರಭು, ಅನಂತರಾಯ ಕಿಣಿ, ಎನ್ ಗೋಪಾಲ ಹೆಗ್ಡೆ, ರಾಮಚಂದ್ರ ಮಣಿಯಾಣಿ, ಕೆ. ಜಗದೀಶ್ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಎನ್. ಉಮೇಶ್ ಶೆಣೈ, ಜಯಪ್ರಕಾಶ್ ಶೆಟ್ಟಿ , ಚಂದ್ರಹಾಸ್ ಹೆಗ್ಡೆ, ಜಯಂತ ಪೊರೋಳಿ, ಕೀರ್ತನ್ ಶೆಟ್ಟಿ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಜಾತ ಕೃಷ್ಣ ಆಚಾರ್ಯ, ಉಷಾ ಮುಳಿಯ , ಕಾಮಾಕ್ಷಿ ಜಿ. ಹೆಗ್ಡೆ ಮೊದಲಾದ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿ, ಹರೀಶ್ ನಾಯಕ್ ನಟ್ಟಿಬೈಲ್ ವಂದಿಸಿದರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕುಮಾರ್ ಜೋಗಿ, ರವೀಶ್ ಎಚ್. ಟಿ. ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಲ್.ಕೆ. ಧರಣ್ ಮಾಣಿ ತಂಡದಿಂದ ಶ್ರೀ ಗಣೇಶ ಪುಷ್ಪಂಜಾಲಿ ಕಾರ್ಯಕ್ರಮ ಜರಗಿತು. ದೇವರಿಗೆ ರಂಗ ಪೂಜೆ ಜರುಗಿತು.

LEAVE A REPLY

Please enter your comment!
Please enter your name here