ಪುತ್ತೂರು: ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ಟಿವಿ ಮಾದ್ಯಮದಲ್ಲಿ ಸಿಐಡಿ ದಾರವಾಹಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಮುಂಬಯಿಯಲ್ಲಿರುವ ಕಾರ್ಕಳ ಮೂಲದ ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರವು ಸೆ.22ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗುವುದರೊಂದಿಗೆ ಪುತ್ತೂರಿನಲ್ಲಿ ಜಿ.ಎಲ್.ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ದೀಪ ಪ್ರಜ್ವಲಿಸುವ ಮೂಲಕ ಚಲನ ಚಿತ್ರ ಬಿಡುಗಡೆಗೊಳಿಸಿದರು. ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ,
ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ , ಚಲನ ಚಿತ್ರದ ನಿರ್ದೇಶಕ ರಾಮ್ ಶೆಟ್ಟಿಯವರ ಸಹೋದರ ರಾಜ್ ಕುಮಾರ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಆಲಿ, ಶಿವರಾಮ ಅಳ್ವ, ಪುತ್ತಿಲ ಪರಿವಾರದ ಪ್ರವೀಣ್ ಭಂಡಾರಿ, ಭಾರತ್ ಸಿನಿಮಾದ ಮ್ಯಾನೇಜರ್ ಜಯರಾಮ್ ವಿಟ್ಲ ಉಪಸ್ಥಿತರಿದ್ದರು. ಚಿತ್ರ ವಿತರಕ ಬಾಲಕೃಷ್ಣ ಕುಕ್ಕಾಡಿ ಅತಿಥಿಗಳನ್ನು ಗೌರವಿಸಿದರು. ಸಹ ಶಿಕ್ಷಕ ಬಾಲಕೃಷ್ಣ ಪರ್ದಾಲ್ ಕಾರ್ಯಕ್ರಮ ನಿರೂಪಿಸಿದರು.