ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆ

0

ಕಣ್ಮನ ಸೆಳೆದ ವೈವಿಧ್ಯಮಯ ಟ್ಯಾಬ್ಲೋಗಳು-ಕಣ್ತುಂಬಿಕೊಂಡ ಸಾವಿರಾರು ಭಕ್ತರು


ಪುತ್ತೂರು:ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಪೂಜಿಸಲ್ಪಟ್ಟ 57ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆಯು ಸೆ.22ರಂದು ಹಲವು ಸ್ತಬ್ದಚಿತ್ರಗಳ ಆಕರ್ಷಣೆಯೊಂದಿಗೆ ವೈಭವೋಪೇತವಾಗಿ ನಡೆಯಿತು.


ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಹೊರಟ ಶೋಭಾಯಾತ್ರೆಯ ಮೊದಲು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರು ತಂತ್ರಿಯವರು ಶ್ರೀ ಗಣೇಶನಿಗೆ ಮಂಗಳಾರತಿ ಮಾಡಿ, ತೆಂಗಿನ ಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಸಭಾ ವೇದಿಕೆ ಬಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಸೇರಿದಂತೆ ಸಮಿತಿ ಪದಾಧಿಕಾರಿಗಳು ತೆಂಗಿನ ಕಾಯಿ ಒಡೆದರು.ಮೂಷಿಕ ವಾಹನದಲ್ಲಿ ದಯಾನಂದ ಚಾಲಕರಾಗಿ ಸಹಕರಿಸಿದರು.


ಈ ಸಂದರ್ಭದಲ್ಲಿ ಗಣೇಶನ ವಿಗ್ರಹ ರಚನೆ ಮಾಡಿದ ಶ್ರೀನಿವಾಸ್ ಪೈ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಜಿಲ್ಲಾ ಧಾರ್ಮಿಕ ಪರಿಷತ್ ನಿಕಟಪೂರ್ವ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀನಿವಾಸ್, ಜತೆಕಾರ್‍ಯದರ್ಶಿ ನೀಲಂತ ಕುಮಾರ್, ಉಪಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು, ಸುಧೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಮೇಶ್ ಮುಂಡೂರು ಮತ್ತು ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾದ ಸಂತೋಷ್ ರೈ ಕೈಕಾರ, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ರಾಜೇಶ್ ಬನ್ನೂರು, ಸುರೇಂದ್ರ ಆಚಾರ್ಯ, ಅಜಿತ್ ರೈ ಹೊಸಮನೆ, ಕಿರಣ್‌ಶಂಕರ್ ಮಲ್ಯ, ಆನಂದ ನೆಕ್ಕರೆ, ಚಂದ್ರಶೇಖರ್ ಎಸ್, ಉದಯ ಹೆಚ್, ಶ್ರೀಧರ್ ಪಟ್ಲ, ದಿನೇಶ್ ಪಂಜಿಗ, ರೂಪೇಶ್ ಕೊಂಬೆಟ್ಟು, ಶೇಖರ್ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ವಾಟೆಡ್ಕ ಶ್ರೀಕೃಷ್ಣ ಭಟ್, ಜಯಶ್ರೀ ಎಸ್ ಶೆಟ್ಟಿ, ಸದಸ್ಯರಾದ ಗೋಪಾಲ್ ನಾಯ್ಕ, ಚಂದ್ರಶೇಖರ್ ಪಿ, ಗೋಪಾಲ ನಾಕ್, ಸಚಿನ್ ಶೆಣೈ, ರಂಜಿತ್ ಮಲ್ಲಾ, ಕರುಣಾಕರ್ ಶೆಟ್ಟಿ, ಉದಯ ಆದರ್ಶ, ನಾರಾಯಣ ಆದರ್ಶ, ನಿತಿನ್ ಆದರ್ಶ, ಚಂದ್ರ ಸಿಂಗ್, ಶ್ರೀಕಾಂತ್, ಅಶೋಕ್ ಬ್ರಹ್ಮನಗರ, ಪವನ್ ಕುಮಾರ್, ವಿಶ್ವನಾಥ ಕುಲಾಲ್, ನ್ಯಾಯವಾದಿ ಮಾಧವ ಪೂಜಾರಿ, ಜಯಂತಿ ನಾಯಕ್, ಸ್ಯಾಕ್ಸೋಫೋನ್ ಕಲಾವಿದ ಡಾ|ಪಿ.ಕೆ.ಗಣೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಬೆಳ್ಳಿಪ್ಪಾಡಿ, ಯುವರಾಜ್ ಪೆರಿಯತ್ತೋಡಿ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಗಣೇಶನ ವಿಗ್ರಹವನ್ನು ಹೊತ್ತಿರುವ ಮೂಷಿಕ ವಾಹನ ರಥವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟು ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರಿಗೆ ತೆರಳಿ ಅಲ್ಲಿಂದ ವೈವಿಧ್ಯಮಯ ಸ್ತಬ್ದಚಿತ್ರಗಳೊಂದಿಗೆ ಅದ್ಧೂರಿಯ ಶೋಭಾಯಾತ್ರೆ ಪ್ರಾರಂಭಗೊಂಡು ಮುಖ್ಯರಸ್ತೆಯಾಗಿ ದರ್ಬೆಗೆ ತೆರಳಿ ಅಲ್ಲಿಂದ ಪರ್ಲಡ್ಕ ಎಂ.ಟಿ.ರಸ್ತೆಯಾಗಿ ಕೋರ್ಟ್‌ರಸ್ತೆಯಾಗಿ ತೆರಳಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭನಗೊಳ್ಳುವ ಮೂಲಕ ಉತ್ಸವ ಸಂಪನ್ನಗೊಂಡಿತು.


ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯುವ ವೈವಿಧ್ಯಮಯ ಸ್ತಬ್ದ ಚಿತ್ರಗಳು ಆಕರ್ಷಣೀಯವಾಗಿತ್ತು.ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ನೃತ್ಯ, ಚೆಂಡೆ ನೃತ್ಯ, ವಯೋಲಿನ್ ಸಂಗೀತ, ನೃತ್ಯ ಭಜನೆ, ನಾಸಿಕ್ ಬ್ಯಾಂಡ್, ಯುವಕರ ನೃತ್ಯ ಶೋಭಾಯಾತ್ರೆಗೆ ಹೆಚ್ಚಿನ ಮೆರುಗು ನೀಡಿತ್ತು.ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ದಾರಿಯುದ್ದಕ್ಕೂ ಅಲ್ಲಲ್ಲಿ ಜನ ಸಾಲು ಸಾಲಾಗಿ ನಿಂತು ಶೋಭಾಯಾತ್ರೆಯ ದೃಷ್ಯಗಳನ್ನು ಕಣ್ತುಂಬಿಕೊಂಡರು.ಅಲ್ಲಲ್ಲಿ ವಿಶೇಷ ಸುಡುಮದ್ದು ಪ್ರದರ್ಶನವೂ ನಡೆಯಿತು.


ಕಣ್ಮನ ಸೆಳೆದ 13 ಟ್ಯಾಬ್ಲೋಗಳು, ನೃತ್ಯ ಸಂಗೀತ, ಚೆಂಡೆ
ಶ್ರೀ ಗಣೇಶನ ವಿಗ್ರಹದ ಜೊತೆ ಬರಿಮಾರು ಭಜನಾ ತಂಡದಿಂದ ನೃತ್ಯ ಭಜನೆ, ಹಿಂದೂ ಜಾಗರಣಾ ವೇದಿಕೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಡಾ|ಕೇಶವ ಬಲಿರಾಮ್ ಹೆಡ್ಗೇವಾರ್ ಮತ್ತು ಗುರೂಜಿ ಎಂದೇ ಕರೆಯಲ್ಪಡುವ ಮಾಧವರಾವ್ ಸದಾಶಿವರಾವ್ ಗೋಳ್ವಾಲ್ಕರ್ ಅವರ ಭಾವಚಿತ್ರವಿದ್ದ ವಾಹನ ಜೊತೆಗೆ ಯುವಕರು ಮತ್ತು ಯುವತಿಯರಿಂದ ನಾಸಿಕ್ ಬ್ಯಾಂಡ್ ಸದ್ದು, ತ್ರಿಶೂಲ್ ಫ್ರೆಂಡ್ಸ್‌ನಿಂದ ಲೈವ್ ವಾಯೋಲಿನ್ ಸಂಗೀತದೊಂದಿಗೆ ಯುವಕ, ಯವತಿಯರ ಚೆಂಡೆ ಕುಣಿತ, ಸಚಿನ್ ಕುಮಾರ್ ಶ್ರದ್ಧಾಂಜಲಿ ಚಿತ್ರ, ಶಿವಾಜಿ ಯುವಕ ಮಂಡಲ ಕಲ್ಲೇಗದಿಂದ ವಾಸುದೇವ ಶ್ರೀಕೃಷ್ಣನನ್ನು ಹೊತ್ತ ಚಿತ್ರ, ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ, ಮಾತೃ ಶಕ್ತಿ ದುರ್ಗಾವಾಹಿನಿ ಪುತ್ತೂರು ಇವರಿಂದ ಶೌರ್ಯ ಜಾಗೃತಿ ರಥ, ಗಣಪತಿ ಚಿತ್ರ, ಸಾಲ್ಮರ ಸತ್ಯನಾರಾಯಣ ಪೂಜಾ ಸಮಿತಿಯಿಂದ ಶಿವಪಾರ್ವತಿ ಅಭಿನಯ, ಪಂಚಮುಖಿ ಕೋರ್ಟು ರಸ್ತೆಯವರಿಂದ ಬಾಲಗಂಗಾಧರ ತಿಲಕರವರ ಚಿತ್ರ ಮತ್ತು ವಜ್ರಾಯುಧ ಚಿತ್ರ, ಕಬಕ ಮಹಾದೇವಿ ಯುವಕ ಮಂಡಲದ ಚಂದ್ರಯಾನ ವಿಕ್ರಂ ಲ್ಯಾಂಡರ್, ಕಾರ್ತಿಕ್
ಇಲೆಕ್ಟ್ರಾನಿಕ್ಸ್‌ನಿಂದ ಶಿವಲಿಂಗ ಪೂಜೆ, ನಡುಮುಂದಿಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಸಮಿತಿ ಬ್ರಹ್ಮನಗರದ ಡಾ.ಪ್ರಸಾದ್ ಭಂಡಾರಿ ಅಭಿಮಾನಿ ಬಳಗದವರಿಂದ ತೆಂಗಿನ ಕಾಯಿಯೊಳಗಿನಿಂದ ಹೊರ ಬಂದ ಗಣಪ, ಕ್ಯಾಂಪ್ಕೋ ಚಾಕಲೇಟು ನೌಕರರ ಸಂಘದಿಂದ ಮೂಶಿಕ ವಾಹನದಲ್ಲಿ ಶ್ರೀ ಗಣೇಶ, ಅಭಿರಾಮ್ ಫ್ರೆಂಡ್ಸ್ ಪುತ್ತೂರು ಇವರಿಂದ ಯುವಕ ಯುವತಿಯರ ನಾಸಿಕ್ ಬ್ಯಾಂಡ್ ಮತ್ತು ಸಂಗೀತ ನೃತ್ಯ, ಆದರ್ಶ ಆಸ್ಪತ್ರೆಯ ವೈದ್ಯರುಗಳು ಮತ್ತು ಸಿಬ್ಬಂದಿಗಳಿಂದ ದತ್ತ ಯಜ್ಞ ಚಿತ್ರ, ಪಡ್ನೂರು ಜನಾರ್ದನ ಯುವಕ ಮಂಡಲ ಮತ್ತು ಸರಸ್ವತಿ ಯುವತಿ ಮಂಡಲದಿಂದ ಕಾಂತಾರ ಚಿತ್ರದರ್ಶನ `ದೈವಲೀಲೆ’ವಿಶೇಷ ಮನರಂಜನೆಯಾಗಿತ್ತು.

LEAVE A REPLY

Please enter your comment!
Please enter your name here