ಸ್ಟ್ ನಲ್ಲಿ ರಾಜಕೀಯಕ್ಕೆ ಅವಕಾಶ ಕೊಡುವುದಿಲ್ಲ: ಅಶೋಕ್ ರೈ
ಪುತ್ತೂರು: ಪುತ್ತೂರಿನ ಉದಯಗಿರಿ ಸಭಾಂಗಣದಲ್ಲಿ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್, ಜನಸೇವಾ ಕೇಂದ್ರ ವತಿಯಿಂದ ಟ್ರಸ್ಟ್ ಸದಸ್ಯರ ಸಭೆ ಮತ್ತು ವೈದ್ಯಕೀಯ ಶಿಬಿರಗಳ ಮಾಹಿತಿ ಕಾರ್ಯಕ್ರಮ ನಡೆಯಿತು. ಶಾಸಕರಾದ ಅಶೋಕ್ ರೈ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶಾಸಕರಾದ ಅಶೋಕ್ ರೈ ವಹಿಸಿ ಮಾತನಾಡಿ ನಾನು ನಡೆಸಿಕೊಂಡು ಬರುತ್ತಿರುವ ರೈ ಚಾರಿಟೇಬಲ್ ಟ್ರಸ್ಟಿನಲ್ಲಿ ರಾಜಕೀಯ ಇಲ್ಲ ,ಇದರಲ್ಲಿ ರಾಜಕೀಯ ಎಂಟ್ರಿಯಾಗಲು ಅವಕಾಶವೇ ಇಲ್ಲ ಎಂದರು. ಸಮಾಜ ಸೇವೆ ಹಾಗೂ ಬಡವರ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಟ್ರಸ್ಟ್ ಆರಂಭ ಮಾಡಿದ್ದೇನೆ. ಸುಮಾರು 22 ಸಾವಿರ ಕುಟುಂಬಗಳಿಗೆ ನನ್ನಿಂದಾದ ನೆರವು ನೀಡಿದ್ದೇನೆ. ಯಾವತ್ತೂ ಟ್ರಸ್ಟನ್ನು ರಾಜಕೀಯಕ್ಮೆ ಬಳಸಿಕೊಂಡಿಲ್ಲ,ಬಳಸುವುದೂ ಇಲ್ಲ ಎಂದು ಹೇಳಿದರು.
10 ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಟ್ರಸ್ಟ್ ವತಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಮೇಳ, ಉದ್ಯೋಗ ಮೇಳ, ಶಿಕ್ಷಣ ಸೇರಿದಂತೆ ಹಲವು ವಿಚಾರಗಳಲ್ಲಿ ಸಮುದಾಯಕ್ಕೆ ಪ್ರಯೋಜನವಾಗುವ ಕೆಲಸವನ್ನು ಮಾಡಲಿದ್ದೇವೆ. ಸಾರ್ವಜನಿಕರ ಸೇವೆಗಾಗಿ ಶಾಸಕರ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾನು ಎಲ್ಲರಿಗೂ ಶಾಸಕನಾಗಿದ್ದು ಎಲ್ಲರೂ ನನ್ನ ಕಚೇರಿಗೆ ಬಂದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು, ಸಾಮಾಜಿಕ ಜಾಲತಾಣದ ಕೃಷ್ಣಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು. ಟ್ರಸ್ಟ್ ನ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ,ರಾಜೇಂದ್ರ ರೈ, ಲಿಂಗಪ್ಪ ರೈ ಕಾರ್ಯಕ್ರಮ ನಿರೂಪಿಸಿದರು.