ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

0

ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ವಕೀಲರಾದ ಹರಿಣಾಕ್ಷಿ ಜೆ. ಶೆಟ್ಟಿ, ಉಪಾಧ್ಯಕ್ಷರಾಗಿ ಉಲ್ಲಾಸ್‌ ಪೈ ಪಿ., ಬಿ. ಶ್ರದ್ಧಾ ಪೈ, ಕಿರಣ್‌ ಕುಮಾರ್‌ ಎಂ. ಹಾಗೂ ಬಾಲಚಂದ್ರ ಸೊರಕೆ ಅಧಿಕಾರ ಸ್ವೀಕರಿಸಿದರು.

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸೆ.23ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿ ಪಾಲ್ಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ‘ಶೈಕ್ಷಣಿಕ ಚಟುವಟಿಕೆ ಮತ್ತು ಶಿಕ್ಷಕ ರಕ್ಷಕ ಸಂಘ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ವಿದ್ಯಾವರ್ಧಕ ಸಂಘ ಒಂದು ಸಮಾಜವಾಗಿದೆ. ಇಲ್ಲಿನ ಪ್ರತಿಯೊಂದು ಯಶೋಗಾಥೆಯಲ್ಲಿ ಪೋಷಕರ, ಸಮಾಜದ ಸಹಕಾರವಿದೆ’ ಎಂದು ಹೇಳಿ ಸಂಸ್ಥೆಯ ಮುಂದಿನ ಎಲ್ಲಾ ಯೋಜನೆಗಳಿಗೂ ಸಂಘದ ಸದಸ್ಯರ ಸಹಕಾರ ಕೋರಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ರವರು ಮಾತನಾಡಿ ‘ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಶಿಕ್ಷಕ ರಕ್ಷಕ ಸಂಘದಲ್ಲಿ ಚರ್ಚೆಯಾಗುತ್ತದೆ. ನಮ್ಮ ಮಕ್ಕಳನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ಕೊಡುವಲ್ಲಿ ನಾವೆಲ್ಲಾ ಜೊತೆ ಜೊತೆಯಾಗಿ ಕಾರ್ಯನಿರ್ವಹಿಸೋಣ’ ಎಂದರು.

ಶಾಲಾ ಸಂಚಾಲಕ ರವಿನಾರಾಯಣ ರವರು ಮಾತನಾಡಿ ‘ವಾಹನದಲ್ಲಿ ಗೇರ್ ಎಷ್ಟು ಮುಖ್ಯವೋ ಶಾಲೆ ವ್ಯವಸ್ಥಿತವಾಗಿ ನಡೆಯಬೇಕಾದರೆ ಪೋಷಕರೂ ಅಷ್ಟೇ ಮುಖ್ಯವಾಗಿರುತ್ತದೆ. ಈ ಶಾಲೆ ಸಮಾಜದ ಆಸ್ತಿಯಾದುದರಿಂದ ಪಾಲಕರೇ ಇಲ್ಲಿನ ಶ್ರೇಯೋಭಿವೃದ್ಧಿಯ ಪಾಲುದಾರರಾಗಿರುತ್ತಾರೆ. ಶಾಲೆಯಲ್ಲಿ 17 ವಿಭಾಗದ ಸಹಪಠ್ಯ ಚಟುವಟಿಕೆಗಳು ನಡೆಯುತ್ತಿದೆʼ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷೆ ಶಾಂತಿ ಶೆಣೈ ರವರು ನಿಯೋಜಿತ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿಯವರು ಮಾತನಾಡಿ ಜವಾಬ್ದಾರಿ ವಹಿಸಿಕೊಂಡ ನಮ್ಮೆಲ್ಲರಿಗೂ ಜವಾಬ್ದಾರಿ ನಿರ್ವಹಣೆಯಲ್ಲಿ ಎಲ್ಲರ ಸಹಕಾರವನ್ನು ಕೇಳಿದರು. ವೇದಿಕೆಯಲ್ಲಿ ನೂತನ ಸಮಿತಿಯ ಉಪಾಧ್ಯಕ್ಷರಾದ ಉಲ್ಲಾಸ್ ಪೈ, ಶ್ರದ್ಧಾ ಪೈ, ಕಿರಣ್ ಕುಮಾರ್ ಹಾಗೂ ಬಾಲಚಂದ್ರ ಸೊರಕೆ ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಸ್ತಾವನೆಗೈದ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ರವರು ‘ಸಂಸ್ಥೆಯು ರಾಜ್ಯದಲ್ಲಿ ತನ್ನ ಸಾಧನೆಗಳಿಗಾಗಿ ಗುರುತಿಸಲ್ಪಟ್ಟಿದೆ. ಎಲ್ಲಾ ಪೋಷಕರ ಸಹಕಾರ ಯಾಚಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಂಧ್ಯಾ ಪೈ ವಂದಿಸಿದರು. ಶಾಂತಿ ಎಸ್. ನಿರೂಪಿಸಿದರು‌.

LEAVE A REPLY

Please enter your comment!
Please enter your name here