ಸರಕಾರಿ ಪ್ರಥಮ ದರ್ಜೆ‌ ಕಾಲೇಜು ಉಪ್ಪಿನಂಗಡಿಯಲ್ಲಿ ಎನ್ ಎಸ್ ಎಸ್ ದಿನಾಚರಣೆ

0

ಎನ್ ಎಸ್ ಎಸ್ ನಲ್ಲಿನ ಯಶಸ್ಸು ಸ್ವಯಂಸೇವಕರ ಸಕ್ರಿಯ‌ ಭಾಗವಹಿಸುವಿಕೆಯನ್ನು ಅವಲಂಬಿಸಿದೆ : ಪ್ರೊ. ಸುಬ್ಬಪ್ಪ ಕೈಕಂಬ

ವಿದ್ಯಾರ್ಥಿ ಜೀವನದಲ್ಲಿ ಎನ್ನೆಸ್ಸೆಸ್ ನಲ್ಲಿನ ಯಶಸ್ಸು ಸ್ವಯಂಸೇವಕರ ಸಕ್ರಿಯ‌ ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಎನ್ ಎಸ್ ಎಸ್ ನ ಪ್ರಮುಖ ಉದ್ದೇಶಗಳಾದ ಶ್ರಮದಾನದ ಮಹತ್ವ ಅರಿಯುವುದು ಹಾಗೂ ವ್ಯಕ್ತಿತ್ವ ವಿಕಸನಗಳನ್ನು ಅರಿತುಕೊಂಡು ಆಸಕ್ತಿಯಿಂದ ಭಾಗವಹಿಸುವ ಮುಖಾಂತರ ಸ್ವಯಂಸೇವಕರು ಸಮಗ್ರ ಬೆಳವಣಿಗೆಯನ್ನು ಕಂಡುಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಹೇಳಿದರು. ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಎನ್ ಎಸ್ ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ  ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಹರಿಪ್ರಸಾದ್ ಎಸ್ ಮಾತನಾಡುತ್ತಾ ಎನ್ ಎಸ್ ಎಸ್ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅಪೂರ್ವ ಅವಕಾಶ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮುಖಾಂತರ ಸ್ವಯಂಸೇವಕರು ಔದ್ಯೋಗಿಕ ವಲಯ ನಿರೀಕ್ಷಿಸುವ ಕೌಶಲ್ಯಗಳನ್ನು ಹಾಗೂ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಇನ್ನೊರ್ವ ಯೋಜನಾಧಿಕಾರಿ ಕೇಶವ್ ಕುಮಾರ್ ಎನ್ನೆಸ್ಸೆಸ್ ಆಶಯಗಳನ್ನು ಅರಿತು ಅರ್ಥಪೂರ್ಣ ಭಾಗವಹಿಸುವಿಕೆಯ ಮುಖಾಂತರ ಯಶಸ್ಸುಕಂಡುಕೊಳ್ಳಬೇಕೆಂದು ಸ್ವಯಂಸೇವಕರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ -ವೃಂದದವರು ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.ಎನ್ ಎಸ್ ಎಸ್ ಭಿತ್ತಿಪತ್ರ ಸಮಿತಿಯ ನಾಯಕಿಯಾಗಿರುವ ಮೋನಿಷಾ.ಜೆ ಸ್ವಾಗತಿಸಿದರು , ಘಟಕ ನಾಯಕರಾಗಿರುವ ಯತೀಶ್.ಯು ವಂದಿಸಿದರು, ಕಛೇರಿ ಸಮಿತಿಯ ನಾಯಕಿಯಾಗಿರುವ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here