ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ , ಇಲ್ಲಿನ ಎಪಿಎಂಸಿ ಹಿಂದೂಸ್ಥಾನ್ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ ಹೆಸರಾಂತ ವಿದ್ಯಾ ಮಾತಾ ಅಕಾಡೆಮಿ ಮೂಲಕವೇ ಅತ್ಯುತ್ತಮ ತರಬೇತಿ ಪಡೆದುಕೊಂಡು , ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅಗ್ನಿಪಥ್ ಮೂಲಕ 2023ರ ಸಾಲಿನ ನೇಮಕಾತಿಯಲ್ಲಿ ಅಕಾಡೆಮಿಯ ಆರು ಅಭ್ಯರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಪ್ರಥಮವಾಗಿ ಲಿಖಿತ ಪರೀಕ್ಷೆ ಬಳಿಕ, ದೈಹಿಕ ಸದೃಢತೆಯ ಪರೀಕ್ಷೆ ನಂತರ, ವೈದ್ಯಕೀಯ ಪರೀಕ್ಷೆಗಳನ್ನೂ ಎದುರಿಸುವಲ್ಲಿ ಎಲ್ಲಾ ಆಭ್ಯರ್ಥಿಗಳು ಸಮರ್ಥರಾಗಿದ್ದಾರೆ. ಇದೀಗ ಈ ಎಲ್ಲಾ ಅಭ್ಯರ್ಥಿಗಳೂ ಕೂಡ ಆಯ್ಕೆಗೊಂಡು ಭಾರತೀಯ ಸೇನೆಗೆ ಕೆಲ ದಿನಗಳಲ್ಲಿ ಸೇರ್ಪಡೆಯಾಗಲಿದ್ದಾರೆ.
ದ.ಕ ಮತ್ತು ಕೊಡುಗು ಈ ಎರಡು ಜಿಲ್ಲೆಯ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಭವಿಷ್, ಸುಳ್ಯ ತಾಲೂಕಿನ ದೇವಚಳ್ಳ ನಿವಾಸಿಗಳಾದ ಕಾರ್ತಿಕ್ ಸಿ.ಎನ್ ಹಾಗೂ ಅಭಿಷೇಕ್ ದೇವಚಳ್ಳ, ಮುರುಳ್ಯ ನಿವಾಸಿ ಸೃಜನ್ ರೈ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ನಿವಾಸಿ ಅಭಿಷೇಕ್ ಎ ಮತ್ತು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮ ನಿವಾಸಿ ದರ್ಶನ್ ಸಿವಿ ಆಯ್ಕೆಯಾಗಿರುವಂತಹ ವಿದ್ಯಾರ್ಥಿಗಳು.
ಇವರೆಲ್ಲಾರನ್ನೂ ಸೆ.28ರಂದು ಸುಳ್ಯದಲ್ಲಿ ಶುಭಾರಂಭಗೊಳ್ಳಲಿರುವ ವಿದ್ಯಾಮಾತಾ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ವೇಳೆ ಅತಿಥಿಗಳ ಮುಖೇನ, ಸನ್ಮಾನಿಸಲಾಗುವುದು ಎಂದು ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷರಾದ ಭಾಗ್ಯೇಶ್ ರೈ ತಿಳಿಸಿದ್ದಾರೆ.
ಉದ್ಯೋಗ ಆಕಾಂಕ್ಷಿಗಳಾಗಿರುವ ಯುವ ಜನಾಂಗಕ್ಕೆ ಅಗ್ನಿಪಥ್ ಯೋಜನೆ ಉತ್ತಮ ಅವಕಾಶ. ಅಗ್ನಿವೀರರಾಗುವವರಿಗೆ 6 ತಿಂಗಳ ತರಬೇತಿ ಮೂರುವರೆ ವರ್ಷ ಕರ್ತವ್ಯ ನಿಯೋಜನೆಯಿರುತ್ತದೆ.
ಪ್ರಾರಂಭಿಕ ಹಂತದಲ್ಲಿ 21 ಸಾವಿರ ವೇತನವೂ ಇದೆ. 4 ವರುಷದ ಕರ್ತವ್ಯ ಮುಗಿಸಿ, ಹಿಂತಿರುಗುವ ವೇಳೆ ವೇತನ 22 ಲಕ್ಷ ರೂಪಾಯಿ ಸಿಗುತ್ತೆ.
ಬಳಿಕ ವಿವಿಧ ನೇಮಕಾತಿಯಲ್ಲೂ ವಿಶೇಷ ಮೀಸಲಾತಿ, 25% ಅಭ್ಯರ್ಥಿಗಳನ್ನು ಅವರ ಸೇವೆಯನ್ನು ಅವಲಂಬಿಸಿ ಕರ್ತವ್ಯದಲ್ಲಿ ಮುಂದುವರಿಸುವಿಕೆಯೂ ಇದೆ. ಯುವ ಸಮುದಾಯ ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ, ದೇಶ ಸೇವೆ ಮಾಡುವ ಮೂಲಕ ಯುವ ಜನತೆ ಬದುಕನ್ನು ಭದ್ರವಾಗಿಸಲು ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ.
ಭಾಗ್ಯೇಶ್ ರೈ
ಅಧ್ಯಕ್ಷರು ವಿದ್ಯಾಮಾತಾ ಅಕಾಡೆಮಿ.