ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ – 330.31 ಕೋಟಿ ರೂ. ವ್ಯವಹಾರ, 83.52 ಲಕ್ಷ ಲಾಭ

0

ಗರಿಷ್ಠ 12% ಡಿವಿಡೆಂಡ್ ಘೋಷಣೆ
25 ವರ್ಷಗಳ ಹಿಂದೆ ಸಂಘವು ನಾನಾ ಕಾರಣಗಳಿಂದಾಗಿ ಅರಾಜಕತೆಗೆ ಒಳಗಾಗಿತ್ತು. ಅದರ ಬಳಿಕ ಹಿರಿಯ ಸದಸ್ಯರ ಶ್ರಮದಿಂದಾಗಿ ಸಂಘವು ಪ್ರಗತಿಯ ಹಾದಿಯಲ್ಲಿ ನಡೆಯಿತು. ಈಗ ಅದ್ಭುತವಾದ ಪ್ರಗತಿಯಿಂದಾಗಿ ಈ ವರ್ಷ 83.5 ಲಕ್ಷ ರೂ. ಲಾಭ ಗಳಿಸಿದ್ದು, 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ 12% ಡಿವಿಡೆಂಡ್ ನೀಡಲಿದ್ದೇವೆ ಎಂದು ಪದ್ಮನಾಭ ಬೋರ್ಕರ್ ಹೇಳಿದರು.

ಪಾಣಾಜೆ: ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 36.16 ಕೋಟಿ ಠೇವಣಿ ಸಂಗ್ರಹಿಸಿ, 330.31 ಕೋಟಿ ವ್ಯವಹಾರ ಮಾಡಿ, 54.37 ಸಾಲ ನೀಡಿ, 83,52,493 ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಗರಿಷ್ಠ 12% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ ಹೇಳಿದರು.
ಸೆ. 23 ರಂದು ಸಂಘದ ಸಭಾಂಗಣದಲ್ಲಿ ನಡೆದ ಸಂಘದ 88ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಕಾರ್ಯವ್ಯಾಪ್ತಿಯಲ್ಲಿ ನೀಡಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದಿರುತ್ತೇವೆ. ಅಲ್ಲದೇ ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ರಾಸಾಯನಿಕ ಗೊಬ್ಬರ ಗೋದಾಮು ನಿರ್ಮಿಸಿ, ಸಂಘದ ಆವರಣದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಕೆ ವ್ಯವಸ್ಥೆ ಮಾಡಲಾಗಿದ್ದು, ಸಂಘವು ಎಲ್ಲಾ ಸದಸ್ಯರ ಸಹಕಾರದಿಂದಾಗಿ ವರ್ಷದಿಂದ ವರ್ಷಕ್ಕೆ ಉನ್ನತಿಯನ್ನು ಹೊಂದುತ್ತಿದೆ ಎಂದವರು ಹೇಳಿದರು.
ಮುಂದಿನ ಗುರಿ:
ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಅವಕಾಶಗಳು ಬರುತ್ತಿವೆ. ಬರುವ ವರ್ಷಕ್ಕೆ 40 ಕೋಟಿ ವ್ಯವಹಾರ, 60 ಕೋಟಿ ಸಾಲದ ಗುರಿ, ಶೇ. 100 ವಸೂಲಾತಿ, 1 ಕೋಟಿ ರೂ. ಲಾಭ ಗಳಿಸುವ ಗುರಿಯನ್ನು ಹೊಂದಿದ್ದೇವೆ. ಸಂಘದ ಸದಸ್ಯರು ಆರ್ಥಿಕ ಸಾಮಾಜಿಕವಾಗಿ ಅಭಿವೃದ್ದಿಯಾಗುವಲ್ಲಿ ಏನೆಲ್ಲಾ ಸರಕಾರದ ಸವಲತ್ತುಗಳು ಬರುತ್ತವೆಯೋ ಅವೆಲ್ಲವನ್ನೂ ಸಂಘದ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೇವೆ. ಗ್ಯಾಸ್ ಏಜೆನ್ಸಿ, ಮೌಲ್ಯವರ್ಧಿತ ಘಟಕಗಳನ್ನು ಸ್ಥಾಪಿಸುವ ಅವಕಾಶಗಳು ಇವೆ. ಮುಂದಿನ ದಿನಗಳಲ್ಲಿ ಇವೆಲ್ಲವನ್ನೂ ಸಂಘದ ಮೂಲಕ ಅಳವಡಿಸಿಕೊಳ್ಳಲಾಗುವುದು ಎಂದು ಬೋರ್ಕರ್ ಹೇಳಿದರು.
ಸಂಘವು ಅರಾಜಕತೆಯ ಕಾಲದಿಂದ ಸುಮಾರು 25 ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುತ್ತಿದೆ. ಸಂಸ್ಥೆಯೇ ಜೀವಾಳ ಎಂಬಂತಿದ್ದ ನಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ್ರವರ ಅಕಾಲಿಕ ಮರಣದ ಆಘಾತದಿಂದ ಸಂಘದ ನಿರ್ವಹಣೆ, ವಸೂಲಾತಿಯಲ್ಲಿ ಒಂದಷ್ಟು ವ್ಯತ್ಯಾಸಗಳಾದರೂ ಮುಂದಿನ ದಿನಗಳಲ್ಲಿ ನೂತನ ಸಿಇಒ ಹರೀಶ್‌ರವರ ನೇತೃತ್ವದಲ್ಲಿ ಸಿಬಂದಿಗಳ ದಕ್ಷ ಕಾರ್ಯನಿರ್ವಹಣೆಯಿಂದಾಗಿ ಸಂಘವು ಬೆಳೆಯಲಿದೆ ಎಂಬ ವಿಶ್ವಾಸ ನಮಗಿದೆʼ ಎಂದರು. ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆಯನ್ನು ಈ ವರ್ಷ ಅನಿವಾರ್ಯ ಕಾರಣಗಳಿಂದಾಗಿ ಮಾಡಲಾಗಿಲ್ಲ. ಮುಂದಿನ ವರ್ಷ ಮಾಡಲಿದ್ದೇವೆʼ ಎಂದು ಬೋರ್ಕರ್ ಹೇಳಿದರು.
ಲೆಕ್ಕ ಪರಿಶೋಧಕರ ನೇಮಕಾತಿಯಲ್ಲಿ ಬದಲಾವಣೆ ತರುವ ಬಗ್ಗೆ ಸದಸ್ಯರಿಂದ ಸಲಹೆ ಪಡೆದುಕೊಳ್ಳಲಾಯಿತು.
ʻಗ್ರಾಮಕ್ಕೊಂದು ಸಹಕಾರ ಸಂಘʼ ಚರ್ಚೆ:
ಕೇಂದ್ರ ಸರಕಾರದ ಹೊಸ ಯೋಜನೆಯಂತೆ ಗ್ರಾಮಕ್ಕೊಂದು ಸಹಕಾರ ಸಂಘʼ ವಿಷಯದಲ್ಲಿ ಸಭೆಯಲ್ಲಿ ಅಭಿಪ್ರಾಯ ಕೇಳಲಾಯಿತು. ಈಗಾಗಲೇ ನಿಡ್ಪಳ್ಳಿ ಪಾಣಾಜೆ ಗ್ರಾಮದಿಂದ ಬೇರ್ಪಟ್ಟು ಪ್ರತ್ಯೇಕ ಪಂಚಾಯತ್ ರಚನೆಯಾಗಿದೆ. ಸಹಕಾರ ಸಂಘವೂ ಬೇರ್ಪಟ್ಟಾಗ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಸರಕಾರದ ಅಧಿಕೃತ ಆದೇಶ ಬಂದಾಗ ಸಾಧಕ ಬಾಧಕಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುವುದೆಂದು ತೀರ್ಮಾನಕ್ಕೆ ಬರಲಾಯಿತು. ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಹರೀಶ್ ಬೋರ್ಕರ್, ಅಲಿ, ಬಾಲಕೃಷ್ಣ ಭಟ್ ಭರಣ್ಯ, ನ್ಯಾಯವಾದಿ ಕೃಪಾಶಂಕರ್, ಪಿ.ಜಿ. ಭಟ್, ವೆಂಕಟ್ರಮಣ ಬೋರ್ಕರ್, ನಾಗೇಶ್ ಗೌಡ ಮತ್ತಿತರರು ಅಭಿಪ್ರಾಯ ಹಂಚಿಕೊAಡರು.
ಸನ್ಮಾನ:
ಸಂಘದ ಗೋದಾಮು ನಿರ್ಮಾಣದ ವೇಳೆ ಸರ್ವ ರೀತಿಯಲ್ಲಿ ಸಹಕರಿಸಿದ ಪಿಡಬ್ಲ್ಯುಡಿ ನಿವೃತ್ತ ಇಂಜಿನಿಯರ್ ಬಾಲಕೃಷ್ಣ ಭಟ್ ನೆಲ್ಲಿತ್ತಿಮಾರ್‌ರವರನ್ನು ಇದೇ ವೇಳೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮೌನಪ್ರಾರ್ಥನೆ:
ವರದಿ ವರ್ಷದಲ್ಲಿ ಅಗಲಿದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಕೋಟೆ ಹಾಗೂ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್ ಪಿ.ಎಂ. ಅರ್ಧಮೂಲೆ, ನಿರ್ದೇಶಕರಾದ ನಾರಾಯಣ ರೈ ಕೊಪ್ಪಳ, ತಿಮ್ಮಣ್ಣ ರೈ ಆನಾಜೆ, ರವೀಂದ್ರ ಭಂಡಾರಿ ಬೈಂಕ್ರೋಡು, ಕುಮಾರ ನರಸಿಂಹ ಬುಳೆನಡ್ಕ, ರವಿಶಂಕರ ಶರ್ಮ ಬೊಳ್ಳುಕಲ್ಲು, ರಾಮ ನಾಯ್ಕ ಜರಿಮೂಲೆ, ಪ್ರೇಮ, ಗೀತಾ ಆರ್. ರೈ ಪಡ್ಯಂಬೆಟ್ಟು, ಗುಣಶ್ರೀ ಜಿ. ಪರಾರಿ, ಸಂಜೀವ ಕೀಲಂಪಾಡಿ, ಸಿಇಒ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಸಿಇಒ ಹರೀಶ್ ಕುಮಾರ್ ಕೆ. ಲೆಕ್ಕಪತ್ರ ವರದಿ ಮಂಡಿಸಿದರು. ನಿಡ್ಪಳ್ಳಿ ಶಾಖಾ ವ್ಯವಸ್ಥಾಪಕ ಸಂದೇಶ್ ಬಿ. ಸ್ವಾಗತಿಸಿ, ಲೆಕ್ಕಿಗ ಪ್ರದೀಪ್ ರೈ ಎಸ್. ವಂದಿಸಿದರು. ಗುಮಾಸ್ತೆ ತೃಪ್ತಿ ಪ್ರಾರ್ಥಿಸಿದರು. ಸಿಬಂದಿಗಳಾದ ಎಂ. ಕೃಷ್ಣಕುಮಾರ್, ಅನುರಾಧ ಕೆ., ಬಿ. ಸುಧಾಕರ ಭಟ್, ಪದ್ಮನಾಭ ಮೂಲ್ಯ, ರಮೇಶ್ ನಾಯ್ಕ, ಚಿತ್ರಕುಮಾರ್, ಪಿಗ್ಮಿ ಸಂಗ್ರಾಹಕಿ ಶ್ರೀಮತಿ ಸುಮಿತ್ರ ವಿ.ಎಂ. ಸಹಕರಿಸಿದರು.

LEAVE A REPLY

Please enter your comment!
Please enter your name here