ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟನೆ, ಶಾಸಕರಿಗೆ ಸನ್ಮಾನ

0

ಮಹಿಳೆಯರೇ ಕಾಂಗ್ರೆಸ್‌ಗೆ ಶಕ್ತಿ ತುಂಬಲಿದ್ದಾರೆ: ಅಶೋಕ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕರ ಅಸ್ತಿತ್ವಕ್ಕೆ ಬಂದ ಬಳಿಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರೇ ಕಾಂಗ್ರೆಸ್ ಗೆ ಶಕ್ತಿ ತುಂಬಲಿದ್ದಾರೆ ಎಂದು ಪುತ್ತೂರು ಸಾಸಕರಾದ ಅಶೋಕ್ ರೈ ಹೇಳಿದರು.
ಅವರು ಕಾಂಗ್ರೆಸ್ ಮುಖಂಡರಾದ ಸಂತೋಷ್ ರೈ ಇಳಂತಜೆ ಅವರ ನಿವಾಸದಲ್ಲಿ ನಡೆದ ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಐದು ಗ್ಯಾರಂಟಿಗಳನ್ನು ಸರಕಾರ ಜಾರಿಗೆ ತಂದಿದೆ, ಈ ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರನ್ನೇ ಮುಂದಿಟ್ಟುಕೊಂಡು ಮಾಡಿದೆ, ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಉಚಿತ ವಿದ್ಯುತ್ ಬಿಲ್ ಮತ್ತು ಗೃಹಲಕ್ಷ್ಮೀ ಯೋಜನೆಯಿಂದ ಪ್ರತೀಯೊಂದು ಕುಟುಂಬಕ್ಕೂ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ, ಮುಂದಿನ ದಿನಗಳಲ್ಲಿ ಪ್ರತೀ ಬೂತ್ ಗಳಲ್ಲಿ ಮಹಿಳಾ ಘಟಕವನ್ನು ನಿರ್ಮಾಣ ಮಾಡುವ ಮೂಲಕ ಮಹಿಳೆಯರೇ ಮುಂಚೂಣಿಯಲ್ಲಿ ನಿಂತು ಸರಕಾರದ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಿದರು.

೬ ತಿಂಗಳ ಬಳಿಕ ಬೃಹತ್ ಮಹಿಳಾ ಸಮಾವೇಶ
ಪ್ರತೀ ಬೂತ್‌ಗಳಲ್ಲಿ ಮಹಿಳಾ ಘಟಕ ನಿರ್ಮಾಣವಾದ ಬಳಿಕ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ ನಡೆಯಲಿದೆ ಈ ಸಮಾವೇಶದಲ್ಲಿ ಸಾವಿರಾರು ಮಂದಿ ಮಹಿಳಯರೇ ಭಾಗವಹಿಸಲಿದ್ದಾರೆ. ಸರಕಾರದ ಯವುದೇ ಯೋಜನೆ ಪ್ರಚಾರ ಪಡೆಯಬೇಕು ಮತ್ತು ಅದು ಕಟ್ಟಕಡೇಯ ಕುಟುಂಬಕ್ಕೂ ತಲುಪಬೇಕಾದರೆ ಮಹಿಳೆಯರೇ ಕಾರನಕರ್ತರಾಗಲಿದ್ದಾರೆ. ಕಾಂಗ್ರೆಸ್ ಈ ಬರಿ ಐದು ಗ್ಯಾರಂಟಿ ಕೊಟ್ಟಿದ್ದು ಮುಂದಿನ ೫ ವರ್ಷಗಳ ಬಳಿಕ ಇನ್ನೊಂದು ಐದು ಗ್ಯಾರಂಟಿಯನ್ನು ನೀಡಲಿದೆ, ಬಡವರು ಬಡವರಾಗಿಯೇ ಉಳಿಯಬಾರದು ಬಡವರಿಗೂ ಸಂತೃಪ್ತಿ ಜೀವನ ನಡೆಸುವಂತಾಗಬೇಕು ಎಂಬುದೇ ಸರಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಬಿಜೆಪಿಯವರು ನಯಾ ಪೈಸೆ ಕೊಟ್ಟಿದ್ದಾರ?
ಹಲವು ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರಕಾರ ಈ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಭೃಷ್ಟಾಚಾರ ಮಾಡಿ ಸರಕಾರದ ಖಜಾನೆ ಖಾಲಿ ಮಾಡಿದ್ದೇ ವಿನ ಬಡವರಿಗೆ ನಯಾ ಪೈಸೆ ಕೊಟ್ಟಿದ್ದಾರ ಎಂದು ಪ್ರಶ್ನಿಸಿದ ಶಾಸಕರು ಬಿಜೆಪಿಗರಿಗೆ ಲೂಟಿ ಮಾಡಲು ಮಾತ್ರ ಸರಕಾರ ಬೇಕಾಗಿದೆ ಅವರಿಗೆ ಬಡವರ ಪರ ಕಾಳಕಿ ಇಲ್ಲವೇ ಇಲ್ಲ ಎಂದು ಹೇಳಿದರು. ಕೇಂದ್ರ ಸರಕಾರ ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಬಡವರು ಖರೀದಿಸುವ ಪ್ರತೀಯೊಂದು ವಸ್ತುವಿಗೂ ಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ವ ಸೂಲಿ ಮಾಡಿ ಆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಬಡವರ, ಹಸಿದವನ ಹಸಿವು ನೀಗಿಸುವ ಕೆಲಸವನ್ನು ಬಿಜೆಪಿ ಎಂದಿಗೂ ಮಾಡಿಲ್ಲ ಮಾಡುವುದೂ ಇಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.

ಹಣ ಎಲ್ಲರಿಗೂ ಬರುತ್ತದೆ
ಕೆಲವರಿಗೆ ರೇಶನ್ ಹಣ ಮತ್ತು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂಬ ದೂರುಗಳಿವೆ, ಹಣ ಎಲ್ಲರಿಗೂ ಬರುತ್ತದೆ. ಕೆಲವರ ಖಾತೆ ಮತ್ತು ರೇಶನ್ ಕಾರ್ಡು ಗಳ ತಾಂತ್ರಿಕ ದೋಷದಿಂದ ವಿಳಂಬವಾಗಿದೆ. ಹಣ ಬಾರದೇ ಇರುವವರು ನನ್ನ ಕಚೇರಿಗೆ ಬಂದು ಕಾರಣ ತಿಳಿದು ಸರಿಮಾಡಿಕೊಳ್ಳಬಹುದು. ಶಾಸಕರ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಜನತೆಗೆ ಕೊಡುವುದೆಲ್ಲವನ್ನೂ ಕೊಡುತ್ತಿದೆ ಮುಂದೆ ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಅಭಿವೃದ್ದಿಯೇ ನಮ್ಮ ಧ್ಯೇಯ: ಎಂ ಬಿ ವಿಶ್ವನಾಥ
ಕಾಂಗ್ರೆಸ್ ಅಂದ್ರೆ ಅಭಿವೃದ್ದಿ ಮಾತ್ರ. ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಅಧಿಕಾರಕ್ಕೆ ಬಂದ ಬಳಿಕ ಸಂಪತ್ತನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಿಲ್ಲ. ೪೦ ಶೇ. ಕಮಿಷನ್ ಪಡೆದು ಜನರ ಹಣವನ್ನು ತಿಂದು ತೇಗಿದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಜನರ ನಡುವೆ ಕೋಮು ವಿಷ ಬೀಜವನ್ನು ಬಿತ್ತಿ ಅಧಿಕಾರ ಪಡೆದ ಬಿಜೆಪಿ ಜನರ ಶಾಪದಿಂದಲೇ ಅದು ಅವನತಿಯತ್ತ ಸಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನರಲ್ಲಿ ನೆಮ್ಮದಿಯ ಮನೋಭಾವ ಇದೆ, ಸರಕಾರದ ಗ್ಯಾರಂಟಿ ಯೋಜನೆಗಳು ಲಕ್ಷಚಾಂತರ ಕುಟುಂಬಕ್ಕೆ ಬದುಕು ಕೊಟ್ಟಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಬೂತ್‌ಗಳಲ್ಲಿ ಮಹಿಳಾ ಘಟಕವನ್ನು ರಚನೆ ಮಾಡಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ನಡೆಯಲಿದ್ದು ಎಲ್ಲರ ಸಹಕಾರ ಕೋರಿದರು.

ಪುತ್ತೂರು ಬದಲಾಗುತ್ತಿದೆ: ಹೇಮನಾಥ ಶೆಟ್ಟಿ
ಮುಂದಿನ ಕೆಲವೇ ತಿಂಗಳಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಗಟ್ಸ್ ಇರುವ ಶಾಸಕರು ನಮ್ಮಲ್ಲಿದ್ದಾರೆ. ಭೃಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಜನರ ಹಣ ಕೊಳ್ಳೆ ಹೋಗದಂತೆ ಶಾಸಕರು ವ್ಯವಸ್ಥೆಯನ್ನು ಮಾಡಿದ್ದು ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕೆಎಂಎಫ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕೆಲವೊಂದು ಬೃಹತ್ ಯೋಜನೆಗಳು ಪುತ್ತೂರಿನಲ್ಲಿ ಆರಂಭವಾಗಲಿರುವ ಕಾರಣ ಸಾವಿರಾರು ಮಂದಿಗೆ ಉದ್ಯೋಗ ದೊರೆಯಲಿದೆ. ವಿದ್ಯೆ ಕಲಿತ ನಮ್ಮ ಮಕ್ಕಳಿಗೆ ಉದ್ಯೋಗವನ್ನು ಕೊಡಿಸುವ ಕೆಲಸವನ್ನು ಸಸಕರು ಮಾಡಲಿದ್ದಾರೆ. ಸದಾ ಸುಳ್ಳು ಹೇಳುವ ಬಿಜೆಪಿ ಜನರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಅಧಿಕಾರ ಪಡೆಯುತ್ತಿದೆ. ಇಲ್ಲಿ ಹಿಂಸೆಗೆ ಬೆಲೆಯಿಲ್ಲ, ಸದಾ ಗಲಭೆ, ಕೋಮು ಗಲಭೆ ಆಗುವುದೇ ಬಿಜೆಪಿಗೆ ಇಷ್ಟವಾದ ಸಂಗತಿ. ಬಡವರ ಮಕ್ಕಳು ಉದ್ದಾರವಾಗದೇ ಇದ್ದರೆ ಪರವಾಗಿಲ್ಲ ನಮಗೆ ಅಧಿಕಾರ ಸಿಗಬೇಕು ಎಂಬುದೇ ಬಿಜೆಪಿ ಧ್ಯೇಯವಾಗಿದೆ. ಬಿಜೆಪಿ ಅಜೆಂಡಾ ಜನರಿಗೆ ಅರ್ಥವಾಗತೊಡಗಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಜನ ಮಣ್ಣು ಮುಕ್ಕಿಸಿದ್ದಾರೆ ಎಂದು ಹೇಳಿದರು. ಮುಂದಿನ ಕೆಲವೇ ತಿಂಗಳಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ, ಜನರಿಗೆ ಉದ್ಯೋಗ, ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ರಮಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಯವರು ಕಾಂಗ್ರೆಸ್ ಸರಕಾರದ ಅಭಿವೃದ್ದಿ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಸಕರಿಗೆ ಸನ್ಮಾನ ನಡೆಯಿತು.
ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎ ಕೆ ಜಯರಾಮ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂತೋಷ್ ರೈ ಇಳಂತಾಜೆ, ಕೆಯ್ಯೂರು ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಕೆ ಎಂ ಹನೀಫ್ ಮಾಡಾವು, ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ, ಕಾಂಗ್ರೆಸ್ ವಕ್ತಾರ ಅಮಲ ರಾಮಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ಮಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾರದಾ ಅರಸ್, ವಿಶಾಲಾಕ್ಷಿ ಬನ್ನೂರು ,ಜಯಂತಪೂಜಾರಿ ಕೆಂಗುಡೇಲು ,ದಾಮೋದರ ಪೂಜಾರಿ ಚಂಂದ್ರ ಶೇಖರ ಕಣಿಯಾರು , ಕೆಯ್ಯೂರು ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಗಂಗಾಧರ್ ,ಭವಾನಿ ಪಲ್ಲತ್ತಡ್ಕ,ಗೋಪಾಲ ಪೂಜಾರಿ ಕಣಿಯಾರು,ಹರಿನಾಥ ಕೂಡೇಲು ,ಗೀತಾ ಕಣಿಯಾರು, ನೆಬಿಸಾ,ಅನ್ನತ್, ಧರಣಿ ಪಕೀರ ,ಹೇಮಲತಾ,ಲಲಿತಾ, ಬೇಬಿ ಪೂಜಾರಿ
ಸೇತು ಮಾಧವನ್,ಲೀಲಾವತಿ ಸುವರ್ಣ ,ಪದ್ಮನಾಭ ಬೊಳಿಕ್ಕಲ , ಅಶೋಕ್ ದೇರ್ಲ ,ಸೇಸಪ್ಪ ದೇರ್ಲ ,ಭಟ್ಯಪ್ಪ ರೈ ದೇರ್ಲ ,ಚಂದ್ರಶೇಕರ ಇಲಂತಾಜೆ, ಲೀಲಾ ಬಿ ಆರ್,ಮಮತಾ,ಶಾರದಾ ಮೊದಲದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here