ಎನ್ಎಸ್ಎಸ್ ಸಾರ್ಥಕ ಬದುಕಿಗೆ ತಳಹದಿ – ಅಂಬ್ರೋಸ್ ಎಂ.ಸಿ.
ಬೆಟ್ಟಂಪಾಡಿ: ಸಾರ್ಥಕ ಬದುಕಿಗೆ ಎನ್ಎಸ್ಎಸ್ ನಂತಹ ಯೋಜನೆಗಳು ತಳಹದಿಯಾಗಿದೆ. ಇದು ಜೀವನ ಕೌಶಲ್ಯ ಬೆಳೆಸುವುದಕ್ಕಿರುವ ವೇದಿಕೆಯಾಗಿದೆ ಎಂದು ಮಂಗಳೂರಿನ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಪ್ರಾಧ್ಯಾಪಕ ಅಂಬ್ರೋಸ್ ಎಂ. ಸಿ. ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಸಸಿಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜ ಎನ್ಎಸ್ಎಸ್ ನ ಇತಿಹಾಸದ ಬಗ್ಗೆ ತಿಳಿಸಿ ನೂತನ ಸ್ವಯಂಸೇವಕರಿಗೆ ಶುಭ ಹಾರೈಸಿದರು.
ಆಂತರಿಕ ಗುಣಮಟ್ಟ ಭರವಸಾಕೋಶದ ಸಂಚಾಲಕ ಡಾ. ಕಾಂತೇಶ ಎಸ್. ರವರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಎನ್ಎಸ್ಎಸ್ ನಿಂದ ಲಭಿಸುವಂತಹ ಜೀವನ ಮೌಲ್ಯಗಳು ಪೂರಕ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಯವರು ಮಾತನಾಡಿ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿವೆ.ಹಿಂದಿನ ವರ್ಷಗಳಂತೆ ಸಕ್ರಿಯವಾಗಿ ಕಾರ್ಯಗಳನ್ನು ಮುಂದುವರಿಸುವಂತೆ ಶುಭ ಹಾರೈಸಿದರು. ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ. ಯೋಗೀಶ್ ಎಲ್.ಎನ್. ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸ್ವಯಂಸೇವಕರಾದ ಮಧುಶ್ರೀ ಕೆ.ಎಸ್. ಸ್ವಾಗತಿಸಿ, ಶ್ರಾವ್ಯ ಕೆ.ಎಸ್. ವಂದನಾರ್ಪಣೆಗೈದರು. ಹರ್ಷಿತಾ. ಕೆ ಕಾರ್ಯಕ್ರಮ ನಿರೂಪಿಸಿದರು.