ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

0

*ರೂ.45,08,452.81 ವಾರ್ಷಿಕ ವ್ಯವಹಾರ ,1,88,700.21 ನಿವ್ವಳ ಲಾಭ
*ಲೀ.ಗೆ 69 ಪೈಸೆ ಬೋನಸ್‌,10% ಡೆವಿಡೆಂಟ್‌

ಪುತ್ತೂರು: ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.23ರಂದು ಮಣಿಕ್ಕಾರ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಪಿ.ವಿನೋದ್‌ ರೈ ಮಾತನಾಡಿ, ಸಂಘವು ಸದಸ್ಯರ ಸಹಕಾರದಲ್ಲಿ ಅಭಿವೃದ್ದಿಯಾಗುತ್ತಿದ್ದು,ಸದಸ್ಯರು ಸಂಘಕ್ಕೆ ಹೆಚ್ಚು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದ ಅವರು ಸದಸ್ಯರಿಗೆ ಪ್ರತೀ ಲೀಟರ್‌ಗೆ 69 ಪೈಸೆ ಬೋನಸ್‌ನೀಡಲಾಗುವುದು ಹಾಗೂ 10% ಡೆವಿಡೆಂಟ್‌ನೀಡುವುದಾಗಿ ಘೋಷಿಸಿದರು. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಕುರಿತಂತೆ ನಿವೇಶನ ದಾಖಲೆ ಪತ್ರದ ಕುರಿತು ಕೆಲಸ ಕಾರ್ಯಗಳಾಗುತ್ತಿದ್ದು,ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್‌ರಾಜ್‌ಶೆಟ್ಟಿ ಅವರೂ ಸಹಕಾರ ನೀಡುತ್ತಿದ್ದಾರೆ ಎಂದರು. ಸಂಘದ ಕಾರ್ಯದರ್ಶಿ ಮೋಹನ ಗೌಡ ವರದಿ ವಾಚಿಸಿ , ರೂ.45,08,452.81 ವಾರ್ಷಿಕ ವ್ಯವಹಾರ ನಡೆಸಿ ,4,70,629.45 ರೂ ಒಟ್ಟು ಆದಾಯ ಬಂದಿದ್ದು, ಆಡಳಿತಾತ್ಮಕ ಖರ್ಚು 2,81,929.24  ಆಗಿದ್ದು ,ವರದಿ ಸಾಲಿನಲ್ಲಿ1,88,700.21 ನಿವ್ವಳ ಲಾಭ ಬಂದಿದೆ ಎಂದರು.

ಸಂಘದ ಆದಾಯದಲ್ಲಿ ರಾಸು ಅಭಿವೃದ್ದಿಗೆ  2%  ಮೊತ್ತ ವಿನಿಯೋಗಿಸಲಾಗುತ್ತಿದ್ದು,ಇದರಲ್ಲಿ ಸಂಘದ ಸದಸ್ಯರ ಜಾನುವಾರುಗಳ ವಿಮೆಗೆ 10% ನೀಡುವಂತೆ ಸದಸ್ಯರು ಹೇಳಿದರು.ಇದಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದವರಲ್ಲಿ ಸಂಘದ ಉಪಾಧ್ಯಕ್ಷ ಎನ್. ಎಸ್.ವೆಂಕಪ್ಪ ಗೌಡ ನಾರ್ಕೋಡು ಪೆರ್ಜಿ ಪ್ರಥಮ ,ನಿರ್ದೇಶಕ ಸೈಯ್ಯದ್‌ಮೊಯ್ದಿನ್‌ಅವರು ದ್ವಿತೀಯ ಬಹುಮಾನ ಪಡೆದುಕೊಂಡರು. ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ಮಾತನಾಡಿ, ಸಂಘಕ್ಕೆ ಸದಸ್ಯರು ಗುಣಮಟ್ಟದ ಹಾಲು ಪೂರೈಸಬೇಕು.ಸಂಘವು ಆಹಾರ ಭದ್ರತಾ ಮತ್ತು ಸುರಕ್ಷಾ ಕಾಯ್ದೆಯಡಿ ನೊಂದಾವಣೆಯಾಗಿದ್ದು, ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಎಲ್ಲಾ ಜಾನುವಾರುಗಳಿಗೆ ವಿಮೆ ಮಾಡಿಸಿಕೊಳ್ಳುವುದು ಆವಶ್ಯಕ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್ೆಸ್.ವೆಂಕಪ್ಪ ಗೌಡ , ನಿರ್ದೇಶಕರಾದ ಪ್ರವೀಣ್‌ ಕುಮಾರ್‌ರೈ ನಳೀಲು, ಸದಾಶಿವ ರೈ ಬಾಕಿಜಾಲು, ಸುಬ್ಬಣ್ಣ ದಾಸ್‌ಚೆನ್ನಾವರ , ಸುಂದರ ಪಾಲ್ತಾಡು, ಸೈಯ್ಯದ್‌ ಮೊಯ್ದೀನದ ಚೆನ್ನಾವರ, ಇಬ್ರಾಹಿಂ ಅಂಬಟೆಗದ್ದೆ, ಸಿ.ಪಿ.ಪ್ರೇಮಲತಾ ರೈ ಚೆನ್ನಾವರ ಪಟ್ಟೆ, ಪ್ರೇಮ ಕೆ.ಜಿ. ಕೊಲ್ಯ , ನೀಲಮ್ಮ ಕಾಪುತಮೂಲೆ , ಮಣಿಕ್ಕರ ಪ್ರೌಢಶಾಲಾ ಮುಖ್ಯಶಿಕ್ಷಕಿ ಉಮಾವತಿ ಉಪಸ್ಥಿತರಿದ್ದರು. ಸಭೆಯಲ್ಲಿ ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್‌ರಾಜ್‌ಶೆಟ್ಟಿ ಪೆರುವಾಜೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಮೋಹನ ಗೌಡ ಬಿ.ಸ್ವಾಗತಿಸಿ ,ಹಾಲು ಪರೀಕ್ಷಕಿ ವನಜ ಬಿ. ವಂದಿಸಿದರು. ಸೈಯ್ಯದ್‌ ಗಫೂರ್‌ ಸಾಹೇಬ್‌ ಕಾರ್ಯಕ್ರಮ ನಿರೂಪಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘದ ಬೆಳವಣಿಗೆಗೆ ವಿವಿಧ ಸಲಹೆ ಸೂಚನೆಗಳನ್ನು ನೀಡುವಂತೆ ಸಂಘದ ಕಾರ್ಯದರ್ಶಿ ಮೋಹನ ಗೌಡ ಬಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here