ಈಶ್ವರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ರೂ.1.49 ಲಕ್ಷ ನಿವ್ವಳ ಲಾಭ , ಶೇ 10 ಡಿವಿಡೆಂಡ್‌, 51 ಪೈಸೆ ಬೋನಸ್‌

ಈಶ್ವರಮಂಗಲ: ನೆಟ್ಟನಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘವು 2022-23 ನೇ ಸಾಲಿನಲ್ಲಿ 2,03,30,551.21 ವ್ಯವಹಾರ ನಡೆಸಿ ರೂ 148661.28 ನಿವ್ವಳ ಲಾಭ ಗಳಿಸಿದೆ .ಸಂಘ ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್‌ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ ಗೆ 0.51 ಪೈಸೆಯಂತೆ  ಬೋನಸ್ಸು ನೀಡಲಾಗುವುದು ಎಂದು ಅಧ್ಯಕ್ಷರಾದ ವಿಶ್ವನಾಥ ಗೌಡ ಎ ರವರು ವಾರ್ಷಿಕ ಸಾಮಾನ್ಯ ಸಬೆಯಲ್ಲಿ ಘೋಷಣೆ ಮಾಡಿದರು.

 ಸ.23ರಂದು ಸಂಘದ ಸಭಾಂಗಣದಲ್ಲಿ ನಡೆದ ಸರ್ವಸದಸ್ಯರ  ವಾರ್ಷಿಕ ಸಾಮಾನ್ಯ ಸಬೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನೇ ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ  ಮನವಿ ಮಾಡಿದರು.

  ಸಂಘದ ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ ಯಂ ರವರು ವರದಿ ವಾಚಿಸಿ ಸಂಘದಲ್ಲಿ ವರ್ಷಾಂತ್ಯಕ್ಕೆ 436 ಮಂದಿ ಸದಸ್ಯರಿದ್ದು 93242.00 ಪಾಲು ಬಂಡವಾಳವಿದೆ 139750 ಲೀಟರ್‌ ಹಾಲನ್ನು ಉತ್ಪಾದಕರಿಂದ ಖರೀದಿಸಿ 124963 ಲೀಟರ್‌ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 14787 ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ ರೂ 5,06,701.47 ರೂ ಆದಾಯ ಹಾಗೂ ಇತರ ಆದಾಯ 192264.35 ರೂ ಬಂದಿರುತ್ತದೆ ಎಂದರು.

 ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಿರಂಜನ್‌ ಬಿ. ಎಸ್‌ ಮಾತನಾಡಿ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಆಹಾರವನ್ನು ನೀಡುದರಿಂದ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಬಹುದು ಪ್ರತಿಯೊಬ್ಬರು ಕಡ್ಡಾಯವಾಗಿ ಜಾನುವಾರು ಗಳಿಗೆ ವಿಮೆ ಮಾಡಿಸಬೇಕು ಎಂದರು. ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮತ್ತು ಮಹಾತ್ಮಾಗಾಂಧಿ ರಾಷ್ರ್ಟೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

 ಬಹುಮಾನ ವಿತರಣೆ :
ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಶಶಿಕಲಾ ಪ್ರಥಮ , ಕೃಷ್ಣಪ್ರಶಾಂತ (ದ್ವಿತೀಯಾ), ವಸಂತಿ( ತೃತೀಯಾ) ಬಹುಮಾನ ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು.

  ವೇದಿಕೆಯಲ್ಲಿ ಉಪಾಧ್ಯಕ್ಷರಾದ ದಿನೇಶ್‌ ಕೆ  ನಿರ್ದೇಶಕರಾದ  ರಾಧಾಕೃಷ್ಣ ರೈ ಡಿ.ಪಿ, ಜಗನ್ಮೋಹನ ಶೆಟ್ಟಿ, ಪ್ರದೀಪ ಕುಮಾರ್‌ ರೈ ಯಂ , ಕೃಷ್ಣ ನಾಯ್ಕ, ಸರ್ವಾಣಿ ,ನೀಲಾವತಿ ಉಪಸ್ಥಿತರಿದ್ದರು.ಸದಸ್ಯರಾದ ಶ್ರೀಯುತ ಪ್ರವೀಣ್‌ ಕುಮಾರ್‌ ರೈ ಮೇನಾಲ ರವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪುಟಾಣಿ ಧೃತಿ ರೈಯವರು ಪ್ರಾರ್ಥಿಸಿದರು.ಅತೀ ಹೆಚ್ಚು ಹಾಲು ಖರೀದಿಸಿದ ಮಣಿಕಂಠ ಕೋಲ್ಡ್‌ ಹೌಸ್‌ನ ಮಾಲಕರಾದ ರಾಜೇಶ್ ರಾವ್‌ ಪಿ  ಯವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಈಶ್ವರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲಿನ ಗುಣಮಟ್ಟ ಪರೀಕ್ಷಾ ಯಂತ್ರದ  ಉದ್ಘಾಟನೆ
ಈಶ್ವರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ  ಸಾಮಾನ್ಯ ಸಭೆಯಲ್ಲಿ ನೂತನವಾಗಿ ಖರೀದಿಸಿರುವ ಹಾಲಿನ ಗುಣಮಟ್ಟ ಪರೀಕ್ಷಾ ಯಂತ್ರವನ್ನುದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ  ನಿರಂಜನ್ ಬಿ.ಎಸ್‌ ರವರು ಅನಾವರಣಗೊಳಿಸಿದರು. ಈ ಯಂತ್ರವು  ಹಾಲಿಗೆ ನೀರನ್ನು ಅಥವಾ ಯಾವುದೇ ಕಲಬೆರಕೆಯನ್ನು ಮಾಡಿದ್ದಲ್ಲಿ  ಪತ್ತೆ ಹಚ್ಚುವ ಯಂತ್ರವಾಗಿದ್ದು ಇದರಿಂದಾಗಿ ಗುಣಮಟ್ಟದ  ಹಾಲನ್ನು ಮಾತ್ರ ಖರೀದಿಸಿ ಒಕ್ಕೂಟಕ್ಕೆ ಕಳುಹಿಸಲು ಸಹಕಾರಿಯಾಗುವುದೆಂದು ತಿಳಿಸಿದರು.ಈ ಸಂದರ್ಭ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಎ ಹಾಗೂ ನಿರ್ದೇಶಕರುಗಳು, ಸಂಘದ ಮುಖ್ಯ ಕಾರ್ಯನಿರ್ವಾಹಕರು, ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here