ಬಡಗನ್ನೂರುಃ ಬಡಗನ್ನೂರು ಗ್ರಾಮ ಪಂಚಾಯತ್ ಇದರ ಪ್ರಾಯೋಜಕತ್ವದಲ್ಲಿ ನ್ಯೂ ವಿಷನ್ ಜನರಲ್ ಪ್ರೋಗ್ರಾಂ ಕಾರ್ಯಕ್ರಮದಡಿಯಲ್ಲಿ 2.5 NVG ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಸೆ.26 ರಂದು ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ನ್ಯೂ ವಿಷನ್ ಜನರಲ್ ಪ್ರೋಗ್ರಾಂ 2.5 NVG ಸುರತ್ಕಲ್ ಇದರ ಮೇನೆಜರ್ ಡಾ ಹೇಮಚಂದ್ರ ಉಪಸ್ಥಿತರಿದ್ದರು.ಡಾ ಹೇಮಚಂದ್ರ ತಂಡದವರಿಂದ ಕಣ್ಣಿನ ತಪಾಸಣೆ ನಡೆಸಿಕೊಟ್ಟರು.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬಿ.ಪಿ, ಹಾಗೂ ಸುಗರ್ ತಪಾಸಣೆ ನಡೆಯಿತು.ಕಾರ್ಯಕ್ರಮದಲ್ಲಿ ಸಮುದಾಯ ಅರೋಗ್ಯ ಅಧಿಕಾರಿ ಪ್ರಜ್ಞಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ನಂದಿನಿ ಕೆ,ಹಾಗೂ ವನಿತಾ ಉಪಸ್ಥಿತರಿದ್ದರು.ಬೆಳಗ್ಗೆ ಗಂಟೆ 10.00 ರಿಂದ ಸಂಜೆ 3.00ರ ತನಕ ನಡೆಯಿತು. ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದು ಕೊಂಡರು.ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಕೃಷಿ ಸಂತೆ ನಡೆಯಿತು.