ಉಪ್ಪಿನಂಗಡಿಯ ಚಂದ್ರಯ್ಯರಿಗೆ ಒಲಿದ ಅದೃಷ್ಟ ಲಕ್ಷ್ಮೀ-ಬೊಲ್ಪು ಲಕ್ಕಿ ಲಾಟರಿಯಲ್ಲಿ 50 ಲಕ್ಷ ರೂ.ಬಹುಮಾನ

0

ಪುತ್ತೂರು: ಅದೃಷ್ಟ ಅನ್ನೋದು ಯಾರೊಬ್ಬನ ಆಸ್ತಿಯೂ ಅಲ್ಲ ಅದೃಷ್ಟ ಕೈ ಹಿಡಿದರೆ ಯಾರನ್ನೂ ಬೇಕಾದರೂ ಎತ್ತರಕ್ಕೆ ಕೊಂಡೊಯ್ಯಬಲ್ಲದು. ಕೇರಳ ರಾಜ್ಯ ಲಾಟರಿಯಲ್ಲಿ ಉಪ್ಪಿನಂಗಡಿಯ ಇಳಂತಿಲ ನಿವಾಸಿ ಚಂದ್ರಯ್ಯ ಎಂಬವರು 50 ಲಕ್ಷ ರೂ.ಬಹುಮಾನ ಗೆದ್ದುಕೊಂಡಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರೀ ಕೆಲಸ ಮಾಡಿಕೊಂಡಿರುವ ಕೂಲಿ ಕಾರ್ಮಿಕರಾಗಿರುವ ಇವರು ಕಾನತ್ತೂರು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಸರಗೋಡಿನಲ್ಲಿರುವ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಗೆ ಭೇಟಿ ಕೊಟ್ಟು ಅಲ್ಲಿಂದ 500 ಬೆಲೆಯ ಸೆ.20 ರಂದು ಡ್ರಾ ಇದ್ದ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದಾರೆ. ಇವರು ಖರೀದಿಸಿದ ಟಿಕೇಟ್‌ಗೆ ಬಂಪರ್ ಬಹುಮಾನವಾಗಿ 50ಲಕ್ಷ ರೂ. ಬಂದಿದೆ.


ಎರಡನೇ ಬಾರಿಗೆ ಉಪ್ಪಿನಂಗಡಿಗೆ ಬಹುಮಾನ
ಈ ಹಿಂದೆ ಇದೇ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯ ಮೂಲಕ ಟಿಕೆಟ್ ಖರೀದಿಸಿದ ಉಪ್ಪಿನಂಗಡಿ ಕೆಂಪಿಮಜಲು ಎಂಬಲ್ಲಿನ 72 ರ ಹರೆಯದ ಆನಂದ ಟೈಲರ್ ಎಂಬವರಿಗೆ 80 ಲಕ್ಷ ರೂ.ಬಹುಮಾನ ಬಂದಿದೆ. ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದು ಈ ಬಾರಿ ಕೂಲಿ ಕಾರ್ಮಿಕ ವ್ಯಕ್ತಿಯೊರ್ವರಿಗೆ 50 ಲಕ್ಷ ರೂ.ಬಹುಮಾನ ಒಲಿಯುವ ಮೂಲಕ ಅವರ ಬದುಕಿನಲ್ಲಿ ಹೊಸ ಬೊಲ್ಪು ಮೂಡಿಸಿದೆ.

LEAVE A REPLY

Please enter your comment!
Please enter your name here