ಪುತ್ತೂರು: ಪುತ್ತೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯದ ಪುತ್ತೂರು ಕ್ಲಸ್ಟರ್ ಶಾಖೆಗಳ ವತಿಯಿಂದ ಪುತ್ತೂರು ತಾಲೂಕಿನ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮ ಬೊಳುವಾರು ಮಹಾವೀರ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು.
ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಕಛೇರಿಯ ಮಹಾ ಪ್ರಬಂಧಕ ರೇಣು ಕೆ. ನಾಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಏಳಿಗೆಗಾಗಿ ನೀಡಲಾಗುವ ಸಾಲ ಹಾಗೂ ಸ್ವಸಹಾಯ ಸಂಘಗಳ ಪ್ರಾಮುಖ್ಯತೆ ತಿಳಿಸಿದರು. ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಉಪ ಮಹಾಪ್ರಬಂಧಕ ಮಹೇಶ ಜೆ. ಮಾತನಾಡಿ ಸಂಘಗಳ ಸದಸ್ಯರು ಬ್ಯಾಂಕ್‌ನ ಸೌಲಭ್ಯಗನ್ನು ಪಡೆಯುವ ಬಗ್ಗೆ ತಿಳಿಸಿದರು. ಸಹಾಯಕ ಮಹಾ ಪ್ರಬಂಧಕ ಖುರೇಶಿ ಯೂನಿಯನ್ ಬ್ಯಾಂಕ್‌ನೊಂದಿಗೆ ಕೈಜೋಡಿಸಿ ಸ್ವಸಹಾಯ ಸಂಘಗಳು ಅಭಿವೃದ್ಧಿ ಹೊಂದಲಿ ಎಂದರು. ಸುಮಾರು 35 ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಲಾಯಿತು. 200ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದರು. ಪ್ರಾದೇಶಿಕ ಕಚೇರಿಯ ಕೃಷಿ ವಿಭಾಗದ ಪ್ರಬಂಧಕ ದಿನೇಶ್ ಎಚ್.ಕೆ. ಹಾಗೂ ಕಡಬ, ಪುತ್ತೂರು, ಉಪ್ಪಿನಂಗಡಿ ಹಾಗೂ ಸುಳ್ಯ ಶಾಖೆಗಳ ಪ್ರಬಂಧಕರು, ಸಿಬಂದಿಗಳು ಉಪಸ್ಥಿತರಿದ್ದರು.
ಇಂದು ಮೂಡಬಿದಿರೆಯಲ್ಲಿ ಸಾಲ ವಿತರಣೆ
ಪುತ್ತೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯದ ಮೂಡಬಿದಿರೆ ಕ್ಲಸ್ಟರ್ ಶಾಖೆಗಳ ವತಿಯಿಂದ ಸಾಲ ವಿತರಣೆ ಮೂಡಬಿದಿರೆಯಲ್ಲಿ ನಡೆಯಲಿದೆ ಎಂದು ಯೂನಿಯನ್ ಬ್ಯಾಂಕ್ ಪುತ್ತೂರು ಶಾಖಾ ಪ್ರಬಂಧಕ ಸುರೇಶ್ ನಾಯ್ಕ ತಿಳಿಸಿದ್ದಾರೆ.