ದರ್ಬೆತ್ತಡ್ಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಕುಮಾರಿ,ಸಹ ಶಿಕ್ಷಕ ಚಂದ್ರಶೇಖರ ಗೌಡರಿಗೆ ಬೀಳ್ಕೊಡುಗೆ.

0

 ನಿಡ್ಪಳ್ಳಿ; ದ. ಕ. ಜಿ. ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿಯ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಕುಮಾರಿ ಹಾಗೂ ಸಹ ಶಿಕ್ಷಕ ಚಂದ್ರಶೇಖರ ಗೌಡ ಇವರಿಗೆ ಸೆ.26 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

 ದರ್ಬೆತ್ತಡ್ಕ ಶಾಲೆಯಲ್ಲಿ  ಸುಮಾರು 16 ವರ್ಷಗಳ ಕಾಲ ಸಹ ಶಿಕ್ಷಕರಾಗಿ, ಪ್ರಭಾರ ಮುಖ್ಯ ಗುರುಗಳಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಜನ ಮೆಚ್ಚಿದ ಶಿಕ್ಷಕಿ ಶೋಭಾ ಕುಮಾರಿಯವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಮುದ್ರಾಡಿ ಶಾಲೆಗೆ ವರ್ಗಾವಣೆ ಗೊಂಡಿರುವ ಕಾರಣ ಅವರನ್ನು ಚಿನ್ನದ ಉಂಗುರ ತೊಡಿಸಿ, ಸ್ಮರಣಿಕೆ, ಹಾರ ಪಲಪುಷ್ಪ ನೀಡಿ ಪತಿ ಕೃಷ್ಣಪ್ರಸಾದ್ ಭಟ್ ಉಪಸ್ಥಿತಿಯಲ್ಲಿ ಅತ್ಮೀಯವಾಗಿ ಬೀಳ್ಕೊಡಲಾಯಿತು.

 ಅಲ್ಲದೆ ನಿಯೋಜನೆ ಮೇರೆಗೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹ ಶಿಕ್ಷಕ ಚಂದ್ರಶೇಖರ ಗೌಡ ಇವರು ಪಬ್ಲಿಕ್ ಶಾಲೆ ಕೆಯ್ಯೂರು ಇಲ್ಲಿಗೆ ವರ್ಗಾವಣೆ ಗೊಂಡ ಕಾರಣ ಇವರನ್ನೂ ಇದೇ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಎಸ್, ಡಿ, ಎಂ, ಸಿ , ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ವತಿಯಿಂದ ಈ ಕಾರ್ಯಕ್ರಮ ನಡೆಸಲಾಯಿತು.

ಸ್ಥಳೀಯ ಕ್ಷೇತ್ರಗಳಾದ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಅಲ್ಲಿಂದ  ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ನಂತರ ಮಕ್ಕಳ ಪ್ರಾರ್ಥನೆ ಮತ್ತು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಆರಂಭಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಒಳಮೊಗ್ರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ತ್ರಿವೇಣಿ ಪಲ್ಲತ್ತಾರು ವಹಿಸಿದ್ದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ಬಿಜತ್ರೆ, ಶಾರದಾ ಮತ್ತು ಅರಿಯಡ್ಕ ಗ್ರಾಮ ಪಂಚಾಯತಿ ಸದಸ್ಯರಾದ ಸದಾನಂದ ಮಣಿಯಾಣಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಂಯೋಜಕರಾದ ಅಮೃತಕಲಾ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಎಸ್. ಡಿ. ಎಂ. ಸಿ ಅಧ್ಯಕ್ಷ ಕೊರಗಪ್ಪ ನಾಯ್ಕ,  ಬಾಲಕೃಷ್ಣ ರೈ ಸೇರ್ತಾಜೆ,  ತಾರಾನಾಥ ರೈ ಸೇರ್ತಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ ಹಾಗೂ ಶ್ರೀ ವಾಸು ಮಣಿಯಾಣಿ ಯವರು ಉಪಸ್ಥಿತರಿದ್ದರು. ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ  ಸಹನಾ ಸ್ವಾಗತಿಸಿದರು. ಅತಿಥಿ ಶಿಕ್ಷಕಿಯರಾದ ಕು.ಚೈತ್ರ ಮತ್ತು ಕು. ಅಶ್ವಿತಾ ಸನ್ಮಾನ ಪತ್ರ ವಾಚಿಸಿದರು.ಸಹಶಿಕ್ಷಕ ರಾಜು.ಎಸ್.ಟಿ ವಂದಿಸಿದರು.ಅತಿಥಿ ಶಿಕ್ಷಕಿ ಯೋಗಿನಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಕು.ಜ್ಯೋತಿ, ರವೀಂದ್ರ  ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here