ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಶತಾಯುಷಿ ಪೊಡಿ (105ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.26 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಗುರುವ, ಕೇಶವ, ಮೋನಪ್ಪ, ಪುತ್ರಿಯರಾದ ಚೆನ್ನು, ಮಾಣಿಗ, ಕುಂಬ್ರ ಅಂಗನವಾಡಿ ಸಹಾಯಕಿ ರಾಜೀವಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೆ.27 ರಂದು ನಡೆಯಿತು. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.