ಕಟ್ಟಡದ ಮೇಲಂತಸ್ತಿನಲ್ಲಿ ಅನಧಿಕೃತ ಕಟ್ಟಡ ಕಾಮಗಾರಿ: ದೂರು-ಪುತ್ತೂರು ನಗರಸಭೆಯಿಂದ ನೋಟೀಸ್

0

ಪುತ್ತೂರು:ಪುತ್ತೂರು ಮುಖ್ಯರಸ್ತೆಯ ವಾಣಿಜ್ಯ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತ ಕಟ್ಟಡ ಕಾಮಗಾರಿ ನಡೆಯುತ್ತಿರುವುದಾಗಿ ಸಲ್ಲಿಸಲಾದ ದೂರಿಗೆ ಸಂಬಂಧಿಸಿ ನಗರಸಭೆ ಕಟ್ಟಡದ ಮಾಲಕರಿಗೆ ನೋಟೀಸ್ ಜಾರಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.


ನಗರಸಭೆ ವಾರ್ಡ್ 13ರ ಮುಖ್ಯರಸ್ತೆಯಲ್ಲಿರುವ ಮಿನಾರ್ ಕಾಂಪ್ಲೆಕ್ಸ್‌ನಲ್ಲಿ ಅನಧಿಕೃತವಾಗಿ ಕಾಮಗಾರಿ ನಡೆಯುತ್ತಿದೆ ಎಂದು ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ನಗರಸಭೆಗೆ ದೂರು ನೀಡಿದ್ದರು.ಈ ಕುರಿತು ನಗರಸಭೆ ಅಧಿಕಾರಿಗಳು ಪರಿಶೀಲಿಸಿ, ಮಳೆ ನೀರು ಹರಿಯುವ ರಾಜಕಾಲುವೆಯ ಬಳಿ ಕಟ್ಟಡದ ನೆಲ ಮಹಡಿಯಲ್ಲಿನ ಕಾಲಮ್‌ಗಳಲ್ಲಿ ಬಿರುಕು ಬಂದಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡ ಪರವಾನಿಗೆಯನ್ನು ರದ್ದುಪಡಿಸಲು ಮತ್ತು ಕಟ್ಟಡದ ಭದ್ರತೆ ಪರಿಶೀಲಿಸಿ ಪರವಾನಿಗೆಗೆ ನಿಯಮಾನುಸಾರ ಅರ್ಜಿ ಸಲ್ಲಿಸುವಂತೆ ವರದಿ ನೀಡಿದ್ದು ಪರವಾನಿಗೆ ನವೀಕರಣ ನಡಾವಳಿಯನ್ನು ರದ್ದುಗೊಳಿಸಿ ಕಟ್ಟಡದ ಭದ್ರತೆಗೆ ಸಂಬಂಧಿಸಿ ಇಲಾಖೆಯಿಂದ ದೃಢೀಕರಣ ಪಡೆದು ನಿಯಮಾನುಸಾರ ಮರು ಪರವಾನಿಗೆ ಅರ್ಜಿ ಸಲ್ಲಿಸುವಂತೆ ಪೌರಾಯುಕ್ತರು ನೋಟೀಸ್‌ನಲ್ಲಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here