ಚಾರ್ವಾಕ ಸಿ.ಎ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಮರಕ್ಕಡ ನಿಧನ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೋಳ್ಪಾಡಿ ಗ್ರಾಮದ ಮರಕ್ಕಡ ವಿಶ್ವನಾಥ ಗೌಡ (59) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆ.26ರಂದು ನಿಧನಹೊಂದಿದ್ದಾರೆ.


ದೋಳ್ಪಾಡಿ ಬಿಜೆಪಿ ಬೂತ್ ಸಮಿತಿಯಲ್ಲಿ ಸುಮಾರು 6ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಇವರು, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಆಡಳಿತ ಪಂಗಡದ ಅಧ್ಯಕ್ಷರಾಗಿ, ದೋಳ್ಪಾಡಿ ಶಾಲಾ ಎಸ್. ಡಿ. ಎಂ. ಸಿ ಸದಸ್ಯರಾಗಿ, ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದರು. ಮೃತರು ಪತ್ನಿ ವಿಮಲ, ಪುತ್ರಿ ಯಕ್ಷಿತಾ ಹಾಗೂ ಅಳಿಯ ದೀಕ್ಷಿತ್ ಅವರನ್ನು ಅಗಲಿದ್ದಾರೆ.


ಅಂತಿಮ ದರ್ಶನ: ವಿಶ್ವನಾಥ ಗೌಡರ ಪ್ರಾರ್ಥಿವ ಶರೀರವನ್ನು ಮಂಗಳೂರಿನಿಂದ ಮರಕ್ಕಡ ಮನೆಗೆ ತರುವ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ವಿಶ್ವನಾಥ ಗೌಡರ ನಿಧನದ ಹಿನ್ನಲೆಯಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಜೆ ನೀಡಿ ಸಂತಾಪ ಸೂಚಿಸಲಾಗಿತ್ತು.
ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಅನೇಕ ಗಣ್ಯರು ಮೃತ ವಿಶ್ವನಾಥ ಗೌಡರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

LEAVE A REPLY

Please enter your comment!
Please enter your name here