ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ದ್ವಿದಶಮ ಆಚರಣೆ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪಧೆಗೆ ಆಹ್ವಾನ

0

ಮಂಗಳೂರು: ಇಲ್ಲಿನ ಪಡೀಲ್ ಆತ್ಮಶಕ್ತಿ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಸಂಸ್ಥೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರಾರಂಭವಾಗಿ 20 ವರುಷ ತುಂಬುತ್ತಿರುವ ಸಂದರ್ಭದಲ್ಲಿ ದ್ವಿದಶಮ ಆಚರಣೆ ನಿಮಿತ್ತ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪಧೆಯನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಎ4 ಶೀಟ್‌ನಲ್ಲಿ ಪ್ರಬಂಧವನ್ನು ಮೂರು ಪುಟಕ್ಕೆ ಮೀರದಂತೆ ಬರೆದು ಅ.15ರ ಒಳಗಡೆ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಆತ್ಮಶಕ್ತಿ ಸೌಧ, ಬೈರಾಡಿಕೆರೆ ಬಳಿ, ಪಡೀಲ್, ಮಂಗಳೂರು ಇವರಿಗೆ ಸಲ್ಲುವಂತೆ ಕಳುಹಿಸಿಕೊಡಲು ಕೇಳಿಕೊಳ್ಳಲಾಗಿದೆ.

ಪ್ರಬಂಧ ವಿಷಯ: ಸಮಾಜ ಸೇವೆ ಇಂದಿನ ಅಗತ್ಯತೆ
ವಿದ್ಯಾರ್ಥಿಗಳು ತಮ್ಮ ಪ್ರಬಂಧದೊಂದಿಗೆ ಶಾಲಾ ಪ್ರಾಚಾರ್ಯರಿಂದ ಕಲಿಕೆ ದೃಢೀಕೃತ ಪತ್ರವನ್ನು ಲಗತ್ತಿಸಲು ಹಾಗೂ ಶಾಲಾ ವಿಳಾಸ ಹಾಗೂ ತಮ್ಮ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಲು ಸೂಚಿಸಲಾಗಿದೆ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ನಂಬ್ರ: 9880051038, 9164229115, 9900487611 ವನ್ನು ಸಂಪರ್ಕಿಸಬಹುದು ಎಂದು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ವಾಮನ್ ಕೆ. ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here