ಕೊಯಿಲ ಗಂಡಿಬಾಗಿಲುನಲ್ಲಿ ಕಬಡ್ಡಿ ಪಂದ್ಯಾಟ

0

ಕ್ರೀಡೆಯಿಂದ ಸೌಹಾರ್ದತೆ, ಆರೋಗ್ಯ ವೃದ್ಧಿ: ಧರ್ಮಪಾಲ ರಾವ್

ರಾಮಕುಂಜ: ಕ್ರೀಡೆಯ ಮೂಲಕ ಊರಿನಲ್ಲಿ ಸೌಹಾರ್ದತೆಯನ್ನು ಪ್ರತಿಪಾದಿಸುವುದರ ಜೊತೆಗೆ ಕ್ರೀಡಾ ಪಟುಗಳಲ್ಲಿ ಆರೋಗ್ಯ ವೃದ್ಧಿಗೆ ಸಹಕಾರಿ ಆಗಲಿದೆ ಎಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಹೇಳಿದರು.


ಅವರು ಸೆ.24ರಂದು ಕೊಯಿಲ ಗ್ರಾಮದ ಗಂಡಿಬಾಗಿಲುನಲ್ಲಿ ಕೊಯಿಲ ಫ್ರೆಂಡ್ಸ್ ಮತ್ತು ಜಿ.ಬಿ. ಫ್ರೆಂಡ್ಸ್ ಆಶ್ರಯದಲ್ಲಿ ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ ನಡೆದ 65 ಕೆ.ಜಿ. ವಿಭಾಗದ ಪುರುಷರ ಮ್ಯಾಟ್ ಮುಕ್ತ ಕಬಡ್ಡಿ ಪಂದ್ಯಾಟ ಸಮಾರಂಭದಲ್ಲಿ ಮಾತನಾಡಿದರು. ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್, ಗಂಡಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜನಾರ್ದನ್ ಕೆ., ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ಮಾತನಾಡಿದರು.

ಸಮಾರಂಭದಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ, ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಕಾಂಗ್ರೆಸ್ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಕಾರ‍್ಯದರ್ಶಿ ಜಿ. ಮಹಮ್ಮದ್ ರಫೀಕ್, ವಕೀಲ ಮಹಮ್ಮದ್ ಕಬೀರ್, ಎಸ್.ಎಂ. ಫ್ರೆಂಡ್ಸ್ ಅಧ್ಯಕ್ಷ ಎಸ್.ಪಿ. ಖಲಂದರ್, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಶ್ರಫ್ ಪಿ.ಎಸ್., ರಾಮಕುಂಜ ಕಾಂಗ್ರೆಸ್ ಬೂತ್ ಅಧ್ಯಕ್ಷ ಸಿದ್ದಿಕ್ ಎನ್., ಉದ್ಯಮಿ ದೇವಿಪ್ರಸಾದ್ ನೀರಾಜೆ, ಹಿರೇಬಂಡಾಡಿ ಬೂತ್ ಅಧ್ಯಕ್ಷ ಶೌಕತ್, ವಿದ್ಯಾರ್ಥಿ ಕಾಂಗ್ರೆಸ್‌ನ ಝೈನ್ ಆತೂರು, ಅಜೀಜ್ ಅಲ್ಯಾರ, ನೌಫಲ್ ಕೊಯಿಲ, ಸಂಘಟಕರಾದ ಉಸ್ಮಾನ್, ತೌಸೀಫ್ ಗಂಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು. ಸಿದ್ದಿಕ್ ಸ್ವಾಗತಿಸಿ, ನಝೀರ್ ಕೊಯಿಲ ವಂದಿಸಿದರು. ರಫೀಕ್ ಗೋಳಿತ್ತಡಿ, ದಿನಕರ ಉಪ್ಪಳ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here