ಕುಟ್ರುಪ್ಪಾಡಿ: ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ

0
  • ಹಸಿವು ನೀಗಿಸಲು ಆಹಾರ ಬೆಳೆಯೇ ಬೇಕು; ಯೋಜನಾಧಿಕಾರಿ ಸುಧೀರ್ ಜೈನ್
  • ಕಡಬ: ಹಸಿವು ನೀಗಿಸಲು ಆಹಾರ ಬೆಳೆಯೇ ಬೇಕು, ಹಾಗಾಗಿ ಆಹಾರ ಉತ್ಪಾದನೆಯನ್ನು ಮರೆತರೆ ಭವಿಷ್ಯದಲ್ಲಿ ಅಪಾಯವಿದೆ ಎಂದು ಧರ್ಮಸ್ಥಳ ಯೋಜನೆ ಕೇಂದ್ರ ಕಛೇರಿಯ ಯಂತ್ರಶ್ರೀ ವಿಭಾಗದ ಯೋಜನಾಧಿಕಾರಿ ಸುಧೀರ್ ಜೈನ್ ಹೇಳಿದರು.

  • ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವತಿಯಿಂದ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ನಾಲಾಜೆ ಶಿವಪ್ರಸಾದ್ ಅವರ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತಿಕ್ಷಿತೆಯನ್ನು ಉಧ್ಘಾಟಿಸಿ ಮಾತನಾಡಿದರು. ಆಹಾರ ಬೆಳೆಗಳು ನಾಶವಾಗುತ್ತಿವೆ, ವಾಣಿಜ್ಶಬೆಳೆಗಳು ತಲೆಯೇತ್ತಿನಿಂತಿವೆ. ದೇಶದ ಆಹಾರ ಬೆಳೆಗಳಲ್ಲಿ ಒಂದಾಗಿರುವ ಭತ್ತ ಬೆಸಾಯವು ಅಳಿವಿನಂಚಿನತ್ತ ಸಾಗುತ್ತಿದ್ದರೆ ಮುಂದೊಂದು ದಿನ ತಿನ್ನುವ ಅನ್ನವನ್ನೂ ಪಡೆಯಲು ಜೀವನದ ದುಡಿಮೆಯನ್ನೆ ವ್ಶಯಿಸುವ ಕಾಲ ಬರಬಹುದು., ವಾಣಿಜ್ಶ ಬೆಳೆಗಳಿಂದ ಮನು?ನ ಅವತ್ಶಕತೆಗಳನ್ನು ಖರೀದಿಸಬಹುದು. ಆದರೆ ಹಸಿವಿಗೆ ಆಹಾರ ಬೆಳೆಗಳನ್ನು ಬೆಳೆಸಿದರೆ ಮಾತ್ರ ಜೀವನ ನಡೆಸಲು ಸಾಧ್ಶ ಎಂದು ಹೇಳಿದ ಜೈನ್, ರಾಜ್ಶದಲ್ಲಿ ೫೦೦೦ಕ್ಕಿಂತ ಹೆಚ್ಚಿನ ರೈತರು ಯಾಂತ್ರೀಕೃತ ಭತ್ತ ಬೆಸಾಯ ಮಾಡಿ ಯಶಸ್ವಿಯಾಗಿದ್ದಾರೆ ಎಂದರು.

  • ಯಂತ್ರಶ್ರೀ ವಿಭಾಗದ ಯೋಜನಾಧಿಕಾರಿ ಜಯಾನಂದ, ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್, ಕುಟ್ರುಪ್ಪಾಡಿ ಒಕ್ಕೂಟದ ಅಧ್ಶಕ್ಷ ನಾಗಣ್ಣ ಗೌಡ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸಂಘದ ಸದಸ್ಶರು, ಕುಟ್ರುಪ್ಪಾಡಿ ಗ್ರಾಮದ ರೈತರು, ಕಡಬ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ವಂದಿಸಿದರು. ಯಂತ್ರಶ್ರೀ ಯಾಂತ್ರಿಕ ಭತ್ತನಾಟಿಯ ಪ್ರಾತಿಕ್ಷಿತೆಯನ್ನು ಯಂತ್ರಶ್ರೀ ಯೋಧ ರಾಜೇಶ್ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here