ಬನ್ನೂರು ಚರ್ಚ್‌ನಲ್ಲಿ ಶಾಸಕ ಅಶೋಕ್ ರೈಯವರಿಗೆ ಸನ್ಮಾನ

0

ಶಾಂತಿಯುತ ಸಮಾಜಕ್ಕೆ ಮನಸ್ಸನ್ನು ಬದಲಾವಣೆಗೊಳಿಸಬೇಕಾಗಿದೆ-ಅಶೋಕ್ ರೈ

ಪುತ್ತೂರು: ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಜಾತಿ-ಜಾತಿ ಮಧ್ಯೆ ಕಂದಕ ಸೃಷ್ಟಿಸಿದ್ದು ಬಿಟ್ರೆ ಬೇರೆ ಏನೂ ಮಾಡಿಲ್ಲ ಜೊತೆಗೆ ಮಾಡಿದ್ದು ಭ್ರಷ್ಟಾಚಾರ ಮಾತ್ರ. ಜನರ ಮನಸ್ಸಿನಲ್ಲಿ ಬಿಜೆಪಿಗರು ವಿಷಬೀಜ ಭಿತ್ತಿ ಬಾಳು ನರಕವಾಗುವಂತೆ ಮಾಡಿದ್ದು ಈ ನಿಟ್ಟಿನಲ್ಲಿ ನಾವು ಮೊದಲಿಗೆ ಜನರ ಮನಸ್ಸನ್ನು ಬದಲಾವಣೆಗೊಳಿಸಿದಾಗ ಮಾನವ ಅಭಿವೃದ್ಧಿ ಜೊತೆಗೆ ಸಮಾಜವು ಶಾಂತಿ ಹೊಂದುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಸೆ.26 ರಂದು ಸಂಜೆ ಬನ್ನೂರು ಸಂತ ಅಂತೋನಿ ಚರ್ಚ್‌ಗೆ ಶಾಸಕ ಅಶೋಕ್ ಕುಮಾರ್ ರೈಯವರು ಭೇಟಿ ನೀಡಿ ಮಾತನಾಡಿದರು. ಬಿಜೆಪಿಯಿಂದ ವಲಸೆ ಬಂದವ ನಾನಾದರೂ ಬಿಜೆಪಿಯಲ್ಲಿದ್ದಾಗ ನಾನು ಎಂದಿಗೂ ಜಾತಿ-ಧರ್ಮದ ಬಗ್ಗೆ ಮಾತನಾಡಿದವನಲ್ಲ. ಯಾಕೆಂದರೆ ನನ್ನ ಟ್ರಸ್ಟ್‌ನಲ್ಲಿ ಎಲ್ಲ ಜಾತಿ-ಧರ್ಮದವರು ಇದ್ದಾರೆ. ಸರಕಾರ ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಒಮ್ಮೆ ಭಯ ಆಗಿತ್ತು ನನಗೆ. ಆದರೆ ಇಂದು ಆ ಗ್ಯಾರಂಟಿಗಳು ಯಶಸ್ಸು ಪಡೆದಿರುವುದು ನೋಡಿದಾಗ ನಾವು ಜನರ ಮನಸ್ಸನ್ನು ನಿಜಕ್ಕೂ ಗೆದ್ದಿದ್ದೇವೆ. ಸರಕಾರ ಜನರ ಆರ್ಥಿಕ ಪರಿಸ್ಥಿತಿ ನೋಡಿ ಮಹಿಳೆಯರಿಗೆ ಎರಡು ಸಾವಿರ ನೀಡಿದೆ. ಮಹಿಳೆಯರಿಗೆ ಹಣ ಕೊಟ್ರೆ ಅದು ಹಾಳಾಗೋದಿಲ್ಲ, ಯಾಕೆಂದರೆ ಮಹಿಳೆಯರು ಮನೆಯ ಗೌರವವನ್ನು ಕಾಪಾಡುವವರು ಎಂದರು.


ಮನಸ್ಸಿನ ಚಿಂತನೆಗೆ ಸ್ಪರ್ಶ ಕೊಡುವ ವ್ಯಕ್ತಿ ಅಶೋಕ್ ರೈ-ಎಂ.ಬಿ ವಿಶ್ವನಾಥ್ ರೈ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಸಂಘಟಿತ ಪ್ರಯತ್ನ, ಒಗ್ಗಟ್ಟಿನಿಂದ ಇಂದು ನಮ್ಮ ಪಕ್ಷದ ಶಾಸಕ ಆಯ್ಕೆಯಾಗುವಂತಾಯಿತು. ಇನ್ನು ಮುಂದಿನ 25 ವರ್ಷ ಅಶೋಕ್ ರೈಯವರೇ ಶಾಸಕ. ಯಾಕೆಂದರೆ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಕನಸು ಅಂಥವುದಾಗಿದೆ. ಒಂದರ್ಥದಲ್ಲಿ ಮನಸ್ಸಿನ ಚಿಂತನೆಗೆ ಸ್ಪರ್ಶ ಕೊಡುವ ವ್ಯಕ್ತಿ ನಮ್ಮ ಶಾಸಕರು ಆಗಿದ್ದಾರೆ ಎಂದರು.


ನಿಮ್ಮ ನಾಯಕತ್ವದಲ್ಲಿ ನಮ್ಮ ಬೇಡಿಕೆಗಳಿಗೆ ಸರಕಾರದಿಂದ ಅನುದಾನ ಒದಗಿಸುವಂತಾಗಲಿ-ವಂ|ಬಾಲ್ತಜಾರ್:
ಅಧ್ಯಕ್ಷತೆ ವಹಿಸಿದ ಬನ್ನೂರು ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋರವರು ಚರ್ಚ್ ಧರ್ಮಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುವ ಮನವಿ ಪತ್ರವನ್ನು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜರವರೊಂದಿಗೆ ಜೊತೆಗೂಡಿ ಶಾಸಕ ಅಶೋಕ್ ರೈಯವರಿಗೆ ಹಸ್ತಾಂತರಿಸಿ ಮಾತನಾಡಿ, ಬನ್ನೂರು ಚರ್ಚ್ ಅಸ್ತಿತ್ವಕ್ಕೆ ಬಂದು ಸುಮಾರು 24 ವರ್ಷಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ಚರ್ಚ್ ಬೆಳ್ಳಿಹಬ್ಬವನ್ನು ಆಚರಿಸಲಿದ್ದು ಈ ಸಂದರ್ಭದಲ್ಲಿ ಚರ್ಚ್ ಆಡಳಿತ ಮಂಡಳಿ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಈ ಯೋಜನೆಗಳನ್ನು ಪೂರೈಸಲು ಚರ್ಚ್ ಆಡಳಿತ ಮಂಡಳಿ, ಕ್ರೈಸ್ತ ಬಾಂಧವರ ಪರವಾಗಿ ಬೇಡಿಕೆಗಳನ್ನು ಮುಂದಿಡುತ್ತಿದ್ದು, ನಮ್ಮ ಬೇಡಿಕೆಗಳನ್ನು ತಾವು ಸರಕಾರದಿಂದ ನಿಮ್ಮ ನಾಯಕತ್ವದಲ್ಲಿ ಅನುದಾನ ಒದಗಿಸಬೇಕು ಎಂದರು.


ಬಿಜೆಪಿಗರ ಭ್ರಷ್ಟಾಚಾರದಿಂದ ಅಶೋಕ್ ರೈಯವರೇ ಪಕ್ಷ ಬಿಟ್ಟದ್ದು-ಈಶ್ವರ್ ಭಟ್:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸಾಮಾಜಿಕ ಧುರೀಣರಾದ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಕಾರಣಿಕ ಶಕ್ತಿ ಹೊಂದಿರುವ ಈ ಬನ್ನೂರು ಚರ್ಚ್‌ಗೂ ನನಗೂ ವಿಶೇಷ ನಂಟು. ಯಾಕೆಂದರೆ ಕೊರೋನಾ ಸಮಯದಲ್ಲಿ ಅನಾರೋಗ್ಯದಲ್ಲಿದ್ದ ಸಂದರ್ಭದಲ್ಲಿ ಡೆನ್ನಿಸ್ ಮಸ್ಕರೇನ್ಹಸ್, ವಾಲ್ಟರ್ ಡಿ’ಸೋಜ ಮುಂತಾದವರು ಇದೇ ಚರ್ಚ್‌ನಲ್ಲಿ ನನ್ನ ಆರೋಗ್ಯ ಸುಧಾರಿಸಲು ಪ್ರಾರ್ಥನೆ ಸಲ್ಲಿಸಿದ್ದರಿಂದ ಇಂದು ನಾನಿದ್ದೇನೆ ಅಲ್ಲದೆ ಅಶೋಕ್ ರೈಯವರು ಶಾಸಕರಾಗಲಿ ಎಂದು ಇದೇ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವು. ಅಶೋಕ್ ರೈಯವರು ಯಾವುದೇ ಜಾತಿ-ಪಕ್ಷ ನೋಡದೆ ಕೇವಲ ಮನುಷ್ಯ ಜಾತಿ ಒಂದೇ ಎಂದು ತಿಳಿದು ಫಲಾನುಭವಿಗಳ ಕೆಲಸ ಮಾಡಿ ಕೊಟ್ಟಿರುತ್ತಾರೆ. ಅಶೋಕ್ ರೈಯವರನ್ನು ಬಿಜೆಪಿ ಪಕ್ಷ ಬಿಟ್ಟದ್ದಲ್ಲ, ಬಿಜೆಪಿಗರ ಭ್ರಷ್ಟಾಚಾರ ನೋಡಿ ಅಶೋಕ್ ರೈಯವರೇ ಪಕ್ಷ ಬಿಟ್ಟದ್ದು ಎಂದರು.


ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಕೆಲಸ ಮಾಡುವ ಮೂಲಕ ನಮ್ಮ ಕನಸುಗಳು ನನಸು-ಡಾ.ರಾಜಾರಾಂ:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ|ರಾಜಾರಾಮ್ ಕೆ.ಬಿ ಮಾತನಾಡಿ, ಶಾಸಕ ಅಶೋಕ್ ರೈಯವರನ್ನು ಚರ್ಚ್ ವತಿಯಿಂದ ಅಭಿಮಾನದಿಂದ, ಪ್ರೀತಿಯಿಂದ ಸನ್ಮಾನಿಸಿ ಅವರಿಗೆ ಮುಂದಿನ ಐದು ವರ್ಷ ಉತ್ತಮವಾಗಿ ಕೆಲಸ ಮಾಡಲು ದೇವರು ಶಕ್ತಿ ಕೊಡಲಿ. ಸರ್ವರ ಒಮ್ಮತದ, ಒಗ್ಗಟ್ಟಿನ ಮೂಲಕ ಮತಗಳಾಗಿ ಮಾರ್ಪಾಡು ಹೊಂದಿ ಇಂದು ಅಶೋಕ್ ರೈಯವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪುತ್ತೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು ಖಂಡಿತಾ ಕೆಲಸ ಮಾಡುತ್ತಾರೆ ಮಾತ್ರವಲ್ಲ ನಮ್ಮ ಕನಸುಗಳು ನನಸಾಗಲಿವೆ ಎಂದರು.


ಚರ್ಚ್ ಸ್ಥಾಪಕ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಕರ್ನಾಟಕ ತುಳು ಅಕಾಡೆಮಿ ಮಾಜಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದಾಲಿ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ಕಾಂಗ್ರೆಸ್ ಮುಖಂಡರಾದ ಉಲ್ಲಾಸ್ ಕೋಟ್ಯಾನ್, ವಲೇರಿಯನ್ ಡಾಯಸ್, ವಿಕ್ಟರ್ ಪಾಯ್ಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ, ಸಾಮಾಜಿಕ ಕಾರ್ಯಕರ್ತ ವಿಕ್ರಂ ಶೆಟ್ಟಿ ಅಂತರ,ಪೆರ್ನೆ ಗ್ರಾ.ಪಂ ಮಾಜಿ ಅಧ್ಯಕ್ಷ ಸುನಿಲ್ ಪಿಂಟೋ, ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಆಚಾರ್ಯ, ಪ್ರಮುಖರಾದ ನಿಹಾಲ್ ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಯ್ಸ್, ಸುಭಾಶ್ ರೈ ಕೌಡಿಚ್ಚಾರು ಸಹಿತ ಬನ್ನೂರು ಚರ್ಚ್‌ನ ಕ್ರೈಸ್ತ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚ್ ಗಾಯನ ಮಂಡಳಿ ಪ್ರಾರ್ಥಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್ ಸ್ವಾಗತಿಸಿ, ಚರ್ಚ್ ೨೧ ಆಯೋಗಗಳ ಸಂಚಾಲಕ ಜೆರಿ ಪಾಯ್ಸ್ ವಂದಿಸಿದರು. ಚರ್ಚ್ ಸದಸ್ಯ ಡೆನ್ನಿಸ್ ಮಸ್ಕರೇನ್ಹಸ್ ಸೇಡಿಯಾಪುರವರು ಆಗಮಿಸಿದ ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜರವರು ಶಾಸಕರನ್ನು ಪರಿಚಯಿಸಿದರು. ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ಮ್ಯಾಕ್ಸಿಂ ಡಿ’ಸೋಜ ಸಿದ್ಯಾಳ, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ವಾಲ್ಟರ್ ಡಿ’ಸೋಜ ಸಿದ್ಯಾಳ, ಸೈಮನ್ ಗೊನ್ಸಾಲ್ವಿಸ್ ಕೃಷ್ಣನಗರ, ಐವನ್ ಡಿ’ಸೋಜ ಕೃಷ್ಣನಗರ, ಮೆಲ್ವಿನ್ ಮಸ್ಕರೇನ್ಹಸ್ ಸೇಡಿಯಾಪು, ಆಂಬ್ರೋಸ್ ಮಸ್ಕರೇನ್ಹಸ್ ಕೆಮ್ಮಾಯಿ, ವಿಲ್ಮಾ ಗೊನ್ಸಾಲ್ವಿಸ್ ಪಡೀಲು, ಪ್ರಶಾಂತ್ ಮಿನೇಜಸ್, ವಿಲ್ಲಿ ಗಲ್ಬಾವೋ ಹಾರಾಡಿ, ವಿಶ್ವಾಸ್ ಲೋಬೊ ಕೃಷ್ಣನಗರ, ನಮ್ಮ ಸ್ಟುಡಿಯೋದ ತೋಮಸ್ ಗೊನ್ಸಾಲ್ವಿಸ್‌ರವರು ಸಹಕರಿಸಿದರು.

ರೂ.3.50 ಕೋಟಿ ವೆಚ್ಚದ 4 ಯೋಜನೆಗಳ ಅನುದಾನಕ್ಕೆ ಮನವಿ..
ಚರ್ಚ್ ಈಗಾಗಲೇ 24 ವರ್ಷಗಳನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲಿ ಚರ್ಚ್ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು ಚರ್ಚ್ ಅಭಿವೃದ್ಧಿಗೆ ಮನವಿ ಸಲ್ಲಿಸಲಾಯಿತು.
1)ಹೆಚ್ಚಿನ ಭಕ್ತಾಧಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಚರ್ಚ್ ಕಟ್ಟಡದ ವಿಸ್ತಾರಗೊಳಿಸಲು ಮನವಿ
2)ಚರ್ಚಿಗೆ ಸುಸಜ್ಜಿತ ಗೋಪುರದ ನಿರ್ಮಾಣ
3)ಹಬ್ಬ ಹರಿದಿನಗಳಲ್ಲಿ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆಗೆ ಭೋಜನಾ ಕಟ್ಟಡ
4)ಆನೆಮಜಲಿನಲ್ಲಿರುವ ದಫನ ಭೂಮಿಗೆ ಸಂಪರ್ಕಿಸುವ ರಸ್ತೆಯ ಕಾಂಕ್ರೀಟೀಕರಣ

5 ಶಾಸಕರ ಮೆಗಾ ಪ್ಲ್ಯಾನ್..
ಪುತ್ತೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕೊಯಿಲದಲ್ಲಿನ ಪಶು ವೈದ್ಯಕೀಯ ಕಾಲೇಜಿನ ಅಭಿವೃದ್ಧಿ, ಡ್ರೈನೇಜ್ ವ್ಯವಸ್ಥೆ, ಕೆ.ಎಂ.ಎಫ್ ಕೇಂದ್ರದ ಸ್ಫಾಪನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಬೇಕು ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎನ್ನುವ ಐದು ಮೆಗಾ ಪ್ಲ್ಯಾನ್ ಕಾರ್ಯಗತವಾದರೆ ಪುತ್ತೂರಿನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಬಲ್ಲುದು. ಅಲ್ಲದೆ ಬನ್ನೂರು ಚರ್ಚ್‌ನ ಅಭಿವೃದ್ಧಿ ಮನವಿಗೆ ನಾನು ನಿಮ್ಮ ಮನೆಮಗನಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಚರ್ಚ್‌ನಲ್ಲಿ ಪ್ರಾರ್ಥನೆ..
ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಅಶೋಕ್ ರೈಯವರನ್ನು ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೋರವರು ಹೂಹಾರ ಹಾಕುವ ಮೂಲಕ ಸ್ವಾಗತಿಸಿದರು. ಬಳಿಕ ಶಾಸಕ ಅಶೋಕ್ ರೈಯವರು ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ ಹಾಗೂ ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್‌ರವರು ಶಾಸಕ ಅಶೋಕ್ ರೈಯವರನ್ನು ಆಶೀರ್ವದಿಸಿದರು.

LEAVE A REPLY

Please enter your comment!
Please enter your name here