ಸುದ್ದಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ದಿನ-ಪ್ರಧಾನ ಕಚೇರಿಯಲ್ಲಿ ಗಣಪತಿ ಹೋಮ

0

ಪುತ್ತೂರು: ಸುಳ್ಯದಲ್ಲಿ ಶಾಖೆ ಹೊಂದಿದ್ದು ಪುತ್ತೂರಿನಲ್ಲಿ ತಾ.ಪಂ ಸಂಕೀರ್ಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುದ್ದಿ ಸೌಹಾರ್ದ ಸಹಕಾರಿ ಸಂಘದ 9ನೇ ವರ್ಷದ ಪಾದಾರ್ಪಣೆಯ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ ನಡೆಯಿತು.

ವೇ ಮೂ ಸೂರ್ಯನಾರಾಯಣ ಭಟ್ ಗಣಪತಿ ಹೋಮ ನೆರವೇರಿಸಿದರು. ಈ ಸಂದರ್ಭ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ.ಯು.ಪಿ.ಶಿವಾನಂದ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಕೆ.ಜಗನ್ನಿವಾಸ ರಾವ್, ಸ್ವಾತಿ ಮಲ್ಲಾರ ಉಪಸ್ಥಿತರಿದ್ದರು. ತಾ.ಪಂ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಅನೇಕರು ಈ ಸಂದರ್ಭ ಆಗಮಿಸಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ನರೇಂದ್ರ ಅವರು ಪೂಜೆಯಲ್ಲಿ ಪಾಲ್ಗೊಂಡರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here