ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ರೂ.10.5 ಲಕ್ಷ ನಿವ್ವಳ ಲಾಭ | ಶೇ.13 ಡಿವಿಡೆಂಡ್

ಪುತ್ತೂರು: ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ಕಾಮತ್ ಕಟ್ಟಡದ ಒಂದನೇ ಮಹಡಿಯಲ್ಲಿ ವ್ಯವಹರಿಸುತ್ತಿರುವ ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ನಿಯಮಿತದ 14ನೇ ವಾರ್ಷಿಕ ಮಹಾಸಭೆಯು ಸೆ.24 ರಂದು ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಜರಗಿತು.


ಸಂಘವು ಪ್ರಸಕ್ತ ವರ್ಷದಲ್ಲಿ ರೂ.10.5 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇ.13 ಡಿವಿಡೆಂಡ್ ನೀಡಲಾಗುವುದು. ಸಂಘದ ಅಭಿವೃದ್ಧಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಸದಸ್ಯರಿಗೆ ನಿರ್ದೇಶಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಜೋಸೆಫ್ ವಿ.ಎಂದು ಸ್ವಾಗತಿಸಿ ಹೇಳಿದರು. ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. 18 ಮಂದಿ ಫಲಾನುಭವಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವನ್ನು ವಿತರಿಸಲಾಯಿತು. ಓರ್ವ ಫಲಾನುಭವಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಮಾರ್ಸೆಲ್ ವೇಗಸ್, ರೊನಾಲ್ಡ್ ಪಿಂಟೊ, ಜೊಸ್ಸಿ ಸ್ಟೀವನ್ ಮೊಂತೇರೊ, ಬ್ಯಾಪ್ಟಿಸ್ಟ್ ಪಾಯ್ಸ್, ಶಾಲೆಟ್ ವಾಸ್, ಮೆರ್ಸಿನ್ ಡಿ’ಸೋಜ ಉಪಸ್ಥಿತರಿದ್ದರು.


ನಿರ್ದೇಶಕ ಜೋನ್ ಫೆರ್ನಾಂಡೀಸ್ ವಂದಿಸಿದರು. ಶಾಖೆಯ ಸಿಬ್ಬಂದಿಗಳಾದ ಸಪ್ನ ರೋಸ್ ಮಿನೇಜಸ್, ಜೋಯ್ಸನ್ ಗ್ರೀಶನ್ ಬ್ರ್ಯಾಗ್ಸ್, ನೆಲ್ಯಾಡಿ ಶಾಖೆಯ ಸಿಬ್ಬಂದಿ ಪ್ರೆಸಿಲ್ಲ ಡಿ’ಸೋಜರವರು ತಖ್ತೆಗಳನ್ನು ಓದಿದರು. ಕಾರ್ಯದರ್ಶಿ ಲ್ಯಾನ್ಸಿ ಡಿ’ಸೋಜ ವರದಿ ವಾಚಿಸಿದರು. ಸಭೆಯಲ್ಲಿ ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here