ಪುತ್ತೂರು: ಪುತ್ತೂರು ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ ಸೆ.26ರಂದು ಮುಕ್ರಂಪಾಡಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್ ಬೊಳ್ಳಾಡಿ 2022-23ನೇ ಸಾಲಿನ ವರದಿ ವಾಚಿಸಿದರು. ಖಜಾಂಜಿ ಗಣೇಶ್ ಶೆಟ್ಟಿ ಲೆಕ್ಕಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಬಳಿಕ ಸಭೆಯ ಅನುಮೋದನೆ ಪಡೆಯಲಾಯಿತು.
ಸಂಘದ ಅಧ್ಯಕ್ಷ ಶಿವಶಂಕರ ಭಟ್ ಸ್ವಾಗತಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸುಮಾರು 8 ವರ್ಷಗಳ ಸತತ ನಮ್ಮ ಪ್ರಯತ್ನದಿಂದ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ 5 ಎಕ್ರೆ ಸರಕಾರಿ ಜಾಗವು ಕೈಗಾರಿಕಾ ವಲಯಕ್ಕೆ ಮಂಜೂರಾಗಿರುತ್ತದೆ ಎಂದು ತಿಳಿಸಿದರು. ಅಧ್ಯಕ್ಷರ ಅನುಮತಿ ಮೇರೆಗೆ ಕೈಗಾರಿಕಾ ಸಂಘದ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸುದ್ದಿ ಕೃಷಿ ವಿಭಾಗದ ವತಿಯಿಂದ ಸೋಲಾರ್ ಗ್ರಿಡ್ ಮಾಹಿತಿ ನೀಡಲಾಯಿತು. ಉಮೇಶ್ ರೈರವರು ಮಾಹಿತಿ ನೀಡಿದರು.
2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಶಂಕರ ಭಟ್, ಉಪಾದ್ಯಕ್ಷರಾಗಿ ಕೇಶವ ಎಸ್‌ಆರ್‌ಕೆ, ಕಾರ್ಯದರ್ಶಿಯಾಗಿ ಮೋಹನ್ ಕುಮಾರ್, ಜತೆ ಕಾರ್ಯಕಾರ್ಯದರ್ಶಿಯಾಗಿ ರೂಪೇಶ್ ನಾಕ್, ಖಜಾಂಜಿಯಾಗಿ ಗಣೇಶ್ ಶೆಟ್ಟಿರವರು ಪುನರಾಯ್ಕೆಯಾದರು. ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಯೂನಿಕ್, ಕೆ.ಪಿ.ಮಹಮ್ಮದ್ ಸಾದಿಕ್, ಟಿ.ವಿ.ರವಿಂದ್ರನ್, ಕೇಶವ ಭಟ್ ಕಮ್ಮಾಜೆ, ವಿಶ್ವಪ್ರಸಾದ್ ಸೇಡಿಯಾಪು, ಕೃಷ್ಣವೇಣಿ, ಸುರೇಖ ಡಿ. ಶೆಟ್ಟಿ, ಪ್ರಸನ್ನ ಕುಮಾರ್ ಕೆ., ಜೇಕಬ್ ಡಿ.ಸೋಜ, ಲಿಯೋ ಮಾರ್ಟಿಸ್, ಕೃಷ್ಣಮೋಹನ್, ಸೂರ್ಯನಾಥ ಆಳ್ವ, ಪದ್ಮನಾಭ ಶೆಟ್ಟಿ, ಮಾಧವ ಪೂಜಾರಿ ಮತ್ತು ನಿತಿನ್ ಪಕ್ಕಳರವರನ್ನು ಆಯ್ಕೆ ಮಾಡಲಾಯಿತು. ವಿಶ್ವಪ್ರಸಾದ್ ಸೇಡಿಯಾಪು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಟಿ.ವಿ.ರವೀಂದ್ರನ್ ಪ್ರಾರ್ಥಿಸಿದರು. ಮೋಹನ್ ಕುಮಾರ್ ಬೊಳ್ಳಾಡಿ ವಂದಿಸಿದರು.