ಪಳ್ಳತ್ತಾರು ಮಸೀದಿಯಲ್ಲಿ ಈದ್ ಮೀಲಾದ್ ಆಚರಣೆ

0

ಕಾಣಿಯೂರು: ಮುಹಿಯುದ್ದೀನ್ ಜುಮಾ ಮಸೀದಿ ಇದರ ವತಿಯಿಂದ ಪೈಂಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಈದ್ ಮೀಲಾದ್ ಆಚರಿಸಲಾಯಿತು. ಸೆ 27 ರಂದು ಮಗ್ರಿಬ್ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಪಳ್ಳತ್ತಾರು ಜಮಾಅತ್ ಗೌರವಾಧ್ಯಕ್ಷ ಮುಹಮ್ಮದ್ ಮದನಿ ತಂಙಳ್ ದುಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜಮಾಅತ್ ಅಧ್ಯಕ್ಷ ಉಪ್ಪುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಮದ್ರಸ ಅಧ್ಯಾಪಕ ಹಸನ್ ಝುಹ್ರಿ ಸ್ವಾಗತಿಸಿದರು. ಜಮಾಅತ್ ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ ಮೀಲಾದ್ ಸಂದೇಶ ಭಾಷಣ ಮಾಡಿದರು. ಬಳಿಕ ಮದ್ರಸ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಇಲ್ಯಾಸ್ ಅಂಜದಿ ಕೂರತ್,ಹಬೀಬ್ ತಂಬಿನಮಕ್ಕಿ ಸಹಕರಿಸಿದರು.ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಯೂಸುಫ್ ಗುಂಡಿನಾರು, ಕಾರ್ಯದರ್ಶಿ ಶಂಸುದ್ದೀನ್ ಬನಾರಿ,ಅಬೂಬಕರ್ ಹಾಜಿ,ಶೇಖ್ ಹಾಜಿ ಬನಾರಿ,ರಝಾಕ್ ಪಳ್ಳತ್ತಾರು, ನವಾಝ್ ಸಖಾಫಿ,ಇಬ್ರಾಹಿಂ ಹಾಜಿ ಕೊಡೆಂಕಿರಿ,ನಝೀರ್ ದೇವಸ್ಯ,ಸಿದ್ದೀಕ್ ಪಳ್ಳತ್ತಾರು,ಉಮ್ಮರ್ ಕೂಂಕ್ಯ,ಅಬೂಬಕರ್ ಫಾಳಿಲಿ,ಸಯ್ಯದ್ ಶಮ್ಮಾಸ್,ಅಧ್ಯಾಪಕರಾದ ಜಲೀಲ್ ಮುಈನಿ,ಶಿಹಾಬುದ್ದೀನ್ ಫಾಳಿಲಿ ಸೇರಿದಂತೆ ಜಮಾಅತಿನ ಪದಾಧಿಕಾರಿಗಳು, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಎಸ್ ಎಸ್ ಎಫ್ , ಎನ್ ಐ ಕೆ ಸಿ ಇದರ ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೆ 28 ರಂದು ಬೆಳಿಗ್ಗೆ ಪಳ್ಳತ್ತಾರು- ಬರೆಪ್ಪಾಡಿ- ಬೆಳಂದೂರು ಮಾರ್ಗವಾಗಿ ಪ್ರವಾದಿಯವರ ಗುಣಗಾನ ಮಾಡುತ್ತಾ ಕಾಲ್ನಡಿಗೆ ಜಾಥಾ ನಡೆಯಿತು.ಪಳ್ಳತ್ತಾರು ಬೆಳಂದೂರು ಪರಿಸರದ ನೂರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here