ಡಾ.ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿ- ವರ್ಣ ಚಿತ್ರ ಕಲಾವಿದ ಪುತ್ತೂರು ಪರ್ಲಡ್ಕ ಮೂಲದ ಚಂದ್ರನಾಥ ಆಚಾರ್ಯ ಆಯ್ಕೆ

0


ಪುತ್ತೂರು: ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತ ಬಾಲವನ, ಪರ್ಲಡ್ಕ, ಸುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ, ದಿ.ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಪ್ರತಿ ವರ್ಷ ನೀಡಲ್ಪಡುವ ಬಾಲವನ ಪ್ರಶಸ್ತಿ 2023ಕ್ಕೆ ಬೆಂಗಳೂರಿನ ಖ್ಯಾತ ವರ್ಣ ಚಿತ್ರ ಕಲಾವಿದ ಪುತ್ತೂರಿನ ಪರ್ಲಡ್ಕ ಮೂಲದ ಕೆ.ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಅಧ್ಯಕ್ಷತೆಯಲ್ಲಿ ಐದು ಜನರ ಸಮಿತಿ ಆಯ್ಕೆ ಮಾಡಿದಂತೆ ಈ ಪ್ರಶಸ್ತಿಯನ್ನು ಅ.10ರಂದು ಬಾಲವನದಲ್ಲಿ ನಡೆಯುವ ಕಾರಂತ ಜನ್ಮದಿನೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ. 25 ಸಾವಿರ ನಗದು ಪುರಸ್ಕಾವನ್ನೊಳಗೊಂಡಿದೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಈ ಪ್ರಶಸ್ತಿಯು ರೂ. 25ಸಾವಿರ ನಗದು ಪುರಸ್ಕಾರ, ಕಾರಂತರ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

ಪರ್ಲಡ್ಕದ ನಿವಾಸಿಯಾಗಿದ್ದ ಕೆ.ಚಂದ್ರನಾಥ ಆಚಾರ್ಯ
ಮೂಲತಃ ಪುತ್ತೂರು ಪರ್ಲಡ್ಕ ಶಿವಪೇಟೆಯ ಬಳಿ ಅಜ್ಜ ಮಧೂರು ಮಹಾಲಿಂಗ ಆಚಾರ್ಯ ಅವರೊಂದಿಗಿದ್ದ ಕೆ.ಚಂದ್ರನಾಥ ಆಚಾರ್ಯ ಅವರು ಬಾಲ್ಯದಲ್ಲಿಯೇ ಕಲಾಸಕ್ತಿಯನ್ನು ಮೂಡಿಸಿಕೊಂಡಿದ್ದು, ಆಗಿನ ಪ್ರಸಿದ್ಧ ಪತ್ರಿಕೆ ಮಲ್ಲಿಗೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದಲ್ಲದೆ ಅನೇಕ ಪುಸ್ತಕಗಳ ಮುಖಚಿತ್ರ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ. ಇವರ ಅಜ್ಜ ಮಧೂರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಡೆಯವರ ಕಾಲದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕ್ಷೇತ್ರದ ಹಳೆಯ ಬ್ರಹ್ಮರಥ, ಬೆಳ್ಳಿಯ ರಥದ ನಿರ್ಮಾಣ ಮಾಡಿದವರು. ತಂದೆ ಮಹಾಲಿಂಗ ಆಚಾರ್ಯ ಅವರು ಬೇರೆ ಬೇರೆ ಕಡೆಗಳಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದರು. ಇವರ ತಾಯಿ ಸುಶೀಲಮ್ಮ.



ಅಧ್ಯಯನ ಹಾಗೂ ಕಲೆಗಾರಿಕೆ:
ಕೆ.ಚಂದ್ರನಾಥ ಆಚಾರ್ಯ ಅವರು ಕಲಾವಿದ ಆರ್.ಎಂ. ಹಡಪದರ ಕೆನ್ ಸ್ಕೂಲ್ ಆಫ್ ಆರ್ಟ್ ಸೇರಿ ತಮ್ಮ ಬದುಕಿನ ಬಹಳ ಮುಖ್ಯ ಅಧ್ಯಾಯ ಆರಂಭಿಸಿದ್ದರು. ಪ್ರಜವಾಣಿ ಬಳಗದ ಕಲಾವಿದರಾಗಿ ಸೇರಿ ಸುಧಾ ಮಯೂರಗಳಲ್ಲಿ ನವ್ಯದ ಜೊತೆಗೆ ಜನಪ್ರಿಯ ಕಥೆ ಕಾದಂಬರಿಗಳಿಗೆ ಚಿತ್ರ ರಚಿಸಿದ್ದಾರೆ. ಶಾಂತಿನಿಕೇತನದಲ್ಲಿ ಗ್ರಾಫಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಮತ್ತೆ ಪತ್ರಿಕಾ ಕೆಲಸಕ್ಕೆ ಸೇರಿದರು. ಚಿತ್ರರಂಗದಲ್ಲಿ ಕೆಲಸ ಮಾಡಿರುವ ಇವರು ಲಂಕೇಶರ ಪಲ್ಲವಿ ಎಲ್ಲಿಂದಲೂ ಬಂದವರು ಅನುರೂಪ ಮತ್ತು ಗಿರೀಶ್ ಕಾರ್ನಾಡರ ಘಟಶ್ರಾದ್ಧ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಖ್ಯಾತ ಚಿತ್ರ ಕಲಾವಿದ ಕೆ.ಕೆ ಹೆಬ್ಬಾರರ ಗರಡಿಯಲ್ಲಿ ಪಳಗಿದ ಇವರು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ವಿದ್ವಾಂಸ ವೇತನ ಪಡೆದು ಎರಡು ವರ್ಷ ಗ್ರಾಫಿಕ್ಸ್ನಲ್ಲಿ ಉನ್ನತ ಅಧ್ಯಯನವನ್ನು ಮಾಡಿದ್ದಾರೆ. ಇವರು ಏಳು ಬಾರಿ ರಾಷ್ಟೀಯ ಅಂತರಾಷ್ಟೀಯ ಮಟ್ಟದ ಏಕವ್ಯಕ್ತಿ ಚಿತ್ರಕಲಾ ಪ್ರರ್ಶನಗಳನ್ನು ನಡೆಸಿ ಕೊಟ್ಟಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರವು ಕೊಡ ಮಾಡುವ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪರಿಸರ ಸಂಬಂಧಿ ಚಿತ್ರಗಳಿಗೆ ಕಾರಂತರೇ ಪ್ರೇರಣೆ:

ಪುತ್ತೂರು ಕೊಂಬೆಟ್ಟು ಆಗಿನ ಜ್ಯೂನಿಯರ್ ಕಾಲೇಜು ಮತ್ತು ಮುಂದೆ ಫಿಲೋಮೀನಾ ಕಾಲೇಜಿನಲ್ಲಿ ಪಿಯುಸಿ ಕಲಿತ ಇವರಿಗೆ ಕಾರಂತರ ಪುತ್ರಿ ಕ್ಷಮಾ ಮತ್ತು ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ ಇವರ ಶಿಕ್ಷಣ ಕಲಿಕೆಯ ಸ್ನೇಹಿತರಾಗಿದ್ದಾರೆ. ಕಾರಂತರ ಒಡನಾಡಿಯಾಗಿದ್ದ ಇವರ ಪರಿಸರ ಸಂಬAಧಿಸಿ ಚಿತ್ರಗಳಿಗೆ ಕಾರಂತರೇ ಪ್ರೇರಣೆಯಾಗಿದ್ದಾರೆ.

LEAVE A REPLY

Please enter your comment!
Please enter your name here