ನಾಳೆ(ಸೆ.29): ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಕ್ಯಾಮರಾ ಸೆಂಟರ್ ಶುಭಾರಂಭ

0

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಕ್ಯಾಮರಾ ಸೆಂಟರ್ ಸೆ.29ರಂದು ಶುಭಾರಂಭಗೊಳ್ಳಲಿದೆ. 1987ರಲ್ಲಿ ಪ್ರಾರಂಭಗೊಂಡ ಕಂಪೆನಿಯು ಕಳೆದ 36 ವರ್ಷಗಳಿಂದ ಮಂಗಳೂರಿನ ಕೆ.ಎಸ್.ರಾವ್ ರೋಡ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು 5ನೇ ಶಾಖೆ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ.

ಪುತ್ತೂರಿನ ಫೊಟೋ ಗ್ರಾಫರ್ ವಿಡಿಯೋ ಗ್ರಾಫರ್‌ಗಳ ಅಪೇಕ್ಷೆ ಮೇರೆಗೆ ಪುತ್ತೂರಿನಲ್ಲಿ ಪ್ರಾರಂಭಗೊಳ್ಳುತ್ತಿದ್ದು ಕ್ಯಾಮರಾ ಸೇಲ್ಸ್ ಸರ್ವೀಸ್, ಆಕ್ಸಸರೀಸ್ ಸರ್ವಿಸ್ ದೊರೆಯುತ್ತದೆ. ದಕ್ಷಿಣಕನ್ನಡದಲ್ಲಿ ಮಾತ್ರವಲ್ಲದೆ ಕೇರಳದ ಕ್ಯಾಲಿಕಟ್‌ನಲ್ಲಿಯೂ ಸಂಸ್ಥೆಗೆ ಶಾಖೆ ಇದೆ. ಕ್ಯಾಮರಾ ಖರೀದಿಗೆ ಉಪ್ಪಿನಂಗಡಿ, ಸುಳ್ಯ ಹಾಗೂ ಪುತ್ತೂರಿಗೆ ಹತ್ತಿರದಲ್ಲಿರುವವರಿಗೆ ಮಂಗಳೂರಿಗೆ ಹೋಗುವ ಬದಲು ಪುತ್ತೂರಿನಲ್ಲೇ ಕ್ಯಾಮರಾಗಳನ್ನು ಸರ್ವಿಸ್ ನೀಡಬಹುದು. ಬಿಡಿಭಾಗಗಳು ಬೇಕಾದರೆ, ಕ್ಯಾಮರಾ ಹಾಳಾದರೆ ಸರಿಪಡಿಸಲು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here