ಬೈತಡ್ಕ ದರ್ಗಾ ಶರೀಫ್ ಮತ್ತು ಜುಮಾ ಮಸೀದಿಯಲ್ಲಿ ಈದ್ ಮಿಲಾದ್

0

ಕಾಣಿಯೂರು:ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನಾಚರಣೆ ಪ್ರಯುಕ್ತ ಜುಮಾ ಮಸೀದಿ ಮತ್ತು ದರ್ಗಾ ಶೆರೀಫ್ ಬೈತಡ್ಕದಲ್ಲಿ ಮೀಲಾದುನ್ನೆಬಿ ಆಚರಿಸಲಾಯಿತು.ಸೆ 27 ರಂದು ಮಗ್ರಿಬ್ ನಮಾಝಿನ ಬಳಿಕ ಕೂಟು ಝಿಯಾರತಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬೈತಡ್ಕ ಮುದರ್ರಿಸ್ ಜುನೈದ್ ಸಖಾಫಿ ಕೂಟು ಝಿಯಾರತಿಗೆ ನೇತತ್ವ ನೀಡಿದರು.ಮಸೀದಿ ಅಧ್ಯಕ್ಷ ಹಮೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಬೈತಡ್ಕ ಖತೀಬ್ ಮೂಸ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮದ್ರಸ ಮಕ್ಕಳ ಮೀಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.ಸೆ 28 ರಂದು ಬೆಳಿಗ್ಗೆ ಧ್ವಜಾರೋಹಣದ ಬಳಿಕ ಬೈತಡ್ಕದಿಂದ ಕಾಣಿಯೂರು ಪೇಟೆಯ ತನಕ ಮೀಲಾದ್ ಜಾಥಾ ನಡೆಯಿತು.ಬಳಿಕ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮೌಲಿದ್ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ಸಿದ್ದೀಕ್ ಅಲೆಕ್ಕಾಡಿ,ಅಬೂಬಕರ್ ಹಾಜಿ ದಫ್,ಸಾಬು ಹಾಜಿ,ಇಕ್ಬಾಲ್ ಪಿ.ಬಿ,ಅಧ್ಯಾಪಕರಾದ ಇರ್ಫಾನ್ ಹಿಮಮಿ,ಸಿನಾನ್ ಸಅದಿ,ತಾಜುದ್ದೀನ್ ಸಖಾಫಿ,ಅಬ್ದುರ್ರಝಾಕ್ ಹಿಶಾಮಿ ಸೇರಿದಂತೆ ದಫ್ ಕಮಿಟಿ,ಕುತುಬಿಯತ್ ಕಮಿಟಿ,ಎಂ ವೈ ಎಫ್ ಕಮಿಟಿಯ ಪದಾಧಿಕಾರಿಗಳು,ಮದ್ರಸ ವಿದ್ಯಾರ್ಥಿಗಳು ಹಾಗೂ ಜಮಾಅತಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here