ಪುತ್ತೂರು: ಕೇರಳದಿಂದ ಬಂದವರಿಗೆ 2022 ರಲ್ಲಿ 2.45 ಎಕ್ರೆ ಸರಕಾರಿ ಜಾಗ ಮಂಜೂರು ಮಾಡಿದ್ದೀರಿ. ಆದರೆ ಇಲ್ಲೇ ಇರುವ ಬಡವರಿಗೆ ಡಿ ಸಿ ಮನ್ನಾ ಭೂಮಿಯಲ್ಲೂ ಮನೆ ಕಟ್ಟಲು ಅವಕಾಶ ಕೊಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿ ಸದಸ್ಯರು ಪ್ರಶ್ನಿಸಿ ಚರ್ಚಿಸಿದ ಘಟನೆ ನಡೆದಿದೆ. ಮಾತ್ರವಲ್ಲದೆ ಈ ಕುರಿತು 20 ದಿನದೊಳಗೆ ಪರಿಶೀಲಿಸುವಂತೆ ಸದಸ್ಯರು ಎಚ್ಚರಿಕೆ ನೀಡಿದ ಘಟನೆ ಪುತ್ತೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ನಡೆದಿದೆ.
ಸಭೆಯು ಸೆ.29ರಂದು ಪುತ್ತೂರು ತಾ.ಪಂ ಸಭಾಂಗಣದಲ್ಲಿ ತಹಶೀಲ್ದಾರ್ ಶಿವಶಂಕರ್ ಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ, ಯೋಜನಾ ನಿರ್ದೇಶಕಿ ಸುಖನ್ಯ, ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ ಮತ್ತು ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.