





ಬಡಗನ್ನೂರುಃ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು ತಾಲೂಕು ಯುವಜನ ಒಕ್ಕೂಟ , ಶ್ರೀ ಕೃಷ್ಣ ಯುವಕ ಮಂಡಲ ಹಾಗೂ ವಾಲಿ ಫ್ರೆಂಡ್ಸ್ ಪಟ್ಟೆ ನಗರ ಸಭೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ 2023-24 ದಸರಾ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ವೀರಮಂಗಲ ಪಿ ಮ್ ಶ್ರೀ ಹಿರಿಯ ಪ್ರಾಥಮಿಕ ಶಾಲಾ 4ನೇ ತರಗತಿ ವಿದ್ಯಾರ್ಥಿಗಳಾದ ವರ್ಷಾ ವಿ ಮಹಿಳೆಯರ ಕಲಾತ್ಮಕ ಹಾಗೂ ವೈಯಕ್ತಿಕ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಮತ್ತು ಶ್ರೀದೇವಿ ಕಲಾತ್ಮಕ ಹಾಗೂ ವೈಯಕ್ತಿಕ ಯೋಗ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ. ಇವರಿಗೆ ಹೇಮಾವತಿ ಅಗಳಿ ತರಬೇತಿ ನೀಡಿರುತ್ತಾರೆ.ಸೆ.30 ರಂದು ಮಂಗಳೂರು ಮಂಗಳ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.








