ಮರ್ದಾಳ: ಕಾರು, ಬೈಕ್ ಡಿಕ್ಕಿ-ಬೈಕ್ ಸವಾರರಿಗೆ ಗಾಯ

0

ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಸೆ.28ರಂದು ಸಂಜೆ ಮರ್ದಾಳ ಸಮೀಪದ ಕೆಂಚಭಟ್ರೆ ಎಂಬಲ್ಲಿ ನಡೆದಿದೆ.
ನೆಕ್ಕಿತ್ತಡ್ಕ ನಿವಾಸಿ ಜಗನ್ನಾಥ ರೈ ಎಂಬವರು ತನ್ನ ಕಾರಿನಲ್ಲಿ (ಕೆಎ 21ಸಿ 0902) ಕಡಬದಿಂದ ಮರ್ದಾಳಕ್ಕೆ ಹೋಗುತ್ತಿದ್ದ ವೇಳೆ ಮರ್ದಾಳದಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್ (ಕೆಎ 21 ವಿ 3429)ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆತನ ತಪ್ಪು ಬದಿಯಾದ ಬಲಬದಿಗೆ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಯುಂಟುಮಾಡಿದ್ದು, ಕಾರು ಚಾಲಕ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆಯ ತೀರಾ ಎಡಬದಿಗೆ ಹೋಗಿ ವಿದ್ಯುತ್ ಕಂಬಕ್ಕೆ ಕಾರು ತಾಗಿ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ಕಾರು ಜಖಂಗೊಂಡಿದೆ. ಬೈಕ್ ಮಗುಚಿ ಬಿದ್ದು ಬೈಕ್ ಸವಾರ ಅಫ್ರಾನ್ ಹಾಗೂ ಸಹಸವಾರ ಸೈಯ್ಯದ್ ರುವನ್ ಎಂಬವರು ಗಾಯಗೊಂಡಿದ್ದಾರೆ. ಘಟನೆ ಕುರಿತು ಕಾರು ಚಾಲಕ ಜಗನ್ನಾಥ ರೈಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here