ಮೂಡಬಿದಿರೆ ಜೈನಮಠದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಮೂಡಬಿದಿರೆ ಜೈನ ಮಠದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರ ದೊಂದಿಗೆ ಸ್ವಸ್ತಿಶ್ರೀ ಜಗದ್ಗುರು ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗಣೇಶ ಕೊಲೆಕಾಡಿ ವಿರಚಿತ “ಸಮರ ಸೌಗಂಧಿಕಾ” ಆಖ್ಯಾನವು ಜರುಗಿತು. ಕಲಾವಿದರಾಗಿ ಹಿಮ್ಮೇಳದಲ್ಲಿ ಭಾಗವತರಾಗಿ ಡಾ. ಸುಬ್ರಹ್ಮಣ್ಯ ಭಟ್ ಪದ್ಯಾಣ, ಸಂಪಿಗೆ ಮಾಧವ ಆಚಾರ್ಯ, ಚೆಂಡೆ – ಮದ್ದಲೆಗಳಲ್ಲಿ ಪುರುಷೋತ್ತಮ ತುಳುಪುಳೆ , ರವಿಪ್ರಸಾದ್ ಶೆಟ್ಟಿ, ಪ್ರಥಮ್, ತುಳುಪುಳೆ ಸಹಕರಿಸಿದರು. ಮುಮ್ಮೇಳದಲ್ಲಿ ಕುಬೇರನಾಗಿ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ಭೀಮಸೇನನಾಗಿ ಪದ್ಮಾ ಕೆ ಆರ್ ಆಚಾರ್ಯ, ದ್ರೌಪದಿಯಾಗಿ ಜಯಲಕ್ಷ್ಮಿ ವಿ ಭಟ್,ಹನುಮಂತನಾಗಿ ಪ್ರೇಮಾ ಕಿಶೋರ್,ವನಪಾಲಕನಾಗಿ ಸಂಗೀತಾ ಪ್ರಭು ಭಾಗವಹಿಸಿದ್ದರು. ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಸ್ವಾಮೀಜಿಯವರು ಕಲಾವಿದರಿಗೆ ವಿಶಿಷ್ಟ ಮಣಿಯುಕ್ತ ಉಂಗುರಗಳನ್ನು ನೀಡಿ ಶಾಲು ಹೊದಿಸಿ, ಗೌರವಿಸಿ, ಆಶೀರ್ವಚನಗಳನ್ನಾಡಿದರು. ಶಾಂತಾರಾಮ ಕುಡ್ವ ಮೂಡಬಿದಿರೆ ಪಾತ್ರ ಪರಿಚಯದೊಂದಿಗೆ ಸ್ವಾಗತಿಸಿದರು. ಗಾಳಿಮನೆ ವಿನಾಯಕ ಭಟ್ ರವರು ವಂದಿಸಿದರು.

LEAVE A REPLY

Please enter your comment!
Please enter your name here