ನರಿಮೊಗರು ಸಮೀಪದ ಪಾಪೆತ್ತಡ್ಕದಲ್ಲಿ ಅಪಘಾತ – ಟ್ಯಾಕ್ಟರ್‌ಗೆ ಸಂಪೂರ್ಣ ಹಾನಿ- ಚಾಲಕ ಸೇಫ್

0

ಪುತ್ತೂರು: ಕಾರು ಮತ್ತು ಟ್ಯಾಕ್ಟರ್ ನಡುವೆ ನರಿಮೊಗರು ಸಮೀಪದ ಪಾಪೆತ್ತಡ್ಕದಲ್ಲಿ ಬೆಳ್ಳಂಬೆಳಗ್ಗೆ ಅಪಘಾತ ಸಂಭವಿಸಿದ ಘಟನೆ ಅ.1ರಂದು ನಡೆದಿದ್ದು, ಅಪಘಾತದ ತೀವ್ರತೆಗೆ ಟ್ಯಾಕ್ಟರ್ ತನ್ನೆಲ್ಲಾ ಬಿಡಿಭಾಗಳನ್ನು ಕಳಚಿಕೊಂಡು ಸಂಪೂರ್ಣ ಹಾನಿಗೊಂಡಿದೆ. ಅದರ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ನರಿಮೊಗರು ಸಮೀಪದ ಪಾಪೆತ್ತಡ್ಕ ಸಮೀಪ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಚಾಲಕ ಸಹಿ ಐವರು ಪ್ರಯಾಣಿಕರಿದ್ದು, ಟ್ಯಾಕ್ಟರ್‌ನಲ್ಲಿ ಚಾಲಕ ಮಾತ್ರ ಇದ್ದರು. ಅಪಘಾತದ ತೀವ್ರತೆಗೆ ಟ್ಯಾಕ್ಟರ್ ಚಾಲಕನ ಹತೋಟಿ ತಪ್ಪಿ ತನ್ನೆಲ್ಲಾ ಬಿಡಿಭಾಗಳನ್ನು ಕಳಚಿಕೊಂಡು ಪಕ್ಕದ ಬಿದ್ದಿದೆ. ಕಾರಿನ ಮುಂದಿನ ಭಾಗಕ್ಕೆ ಹಾನಿಯಾಗಿದ್ದು, ತದ್ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದೆ. ಅಪಘಾತದಿಂದ ಗಾಯಗೊಂಡ ಕಾರಿನಲ್ಲಿದ್ದವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ.

ನೆರವಿಗೆ ಬಂದ ಅರುಣ್ ಕುಮಾರ್ ಪುತ್ತಿಲ:
ಅಪಘಾತ ಸಂಭವಿಸಿದ ಬಳಿಯೇ ಅರುಣ್ ಕುಮಾರ್ ಪುತ್ತಿಲ ಅವರ ಮನೆಯಿದ್ದು, ಮಾಹಿತಿ ಪಡೆದ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿದ್ದ ಮತ್ತು ಟ್ಯಾಕ್ಟರ್ ಚಾಲಕನನ್ನು ತನ್ನ ಕಾರಿನಲ್ಲೇ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here