ಪುತ್ತೂರು:ಹೆಚ್‌ಪಿರ್ ನರ್ಸಿಂಗ್ ಮತ್ತು ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ಮಾಹಿತಿ ಕಾರ್ಯಗಾರ ಸೆ.27ರಂದು ನಡೆಯಿತು.ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪುತ್ತೂರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳಿಂದ ಮತ್ತು ಸಾಮಾಜಿಕ ಜಾಲತಾಣಗಳಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು ,ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧಗಳಿಂದ ದೂರವಿರಬೇಕು ಮತ್ತು ಯಾವ ರೀತಿ ತಡೆಗಟ್ಟಬಹುದು ಎಂಬ ಸಾಮಾಜಿಕ ಸಂದೇಶ ನೀಡಿದರು.
ಬಸವರಾಜ್,ಕಾಲೇಜಿನ ಪ್ರಾಂಶುಪಾಲೆ ಇವ್ನೀಸ್ ಡಿ”ಸೋಜಾ, ಉಪನ್ಯಾಸಕಿ ಶ್ರೀಮತಿ ಉಪಸ್ಥಿತರಿದ್ದರು.ಆಯಿಷತ್ ಅಸ್ಪನಾ ಸ್ವಾಗತಿಸಿ,ಉಪನ್ಯಾಸಕಿ ಅನುಷಾ ವಂದಿಸಿ, ಉಪನ್ಯಾಸಕಿ ಜಲಜ ಎಸ್ ಎ ನಿರೂಪಿಸಿದರು.