ಪುತ್ತೂರು: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಾತ್ಮ ಗಾಂಧೀಜಿಯವರ ಆದರ್ಶವನ್ನು ನಾವೆಲ್ಲ ಪಾಲಿಸಬೇಕು ದೇಶಕ್ಕಾಗಿ ಅವರು ಮಾಡಿದ ನಿಸ್ವಾರ್ಥ ಹೋರಾಟ ಹಾಗು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಅತ್ಯುತ್ತಮ ಪ್ರಧಾನಿ. ಅವರ ಸರಳ ಸಜ್ಜನಿಕೆ ಎಲ್ಲರೂ ಮೆಚ್ಚುವಂತದ್ದು ಎಂದರು.
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕಿರಣ್ ಕುಮಾರ್ ಕರ್ನೂರು ಮಾತನಾಡಿ ಸತ್ಯ ಅಹಿಂಸೆ ಪರೋಪಕಾರ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಜಗತ್ತೇ ಇವರನ್ನು ಮಹಾತ್ಮ ಎಂದು ಕೊಂಡಾಡಿದೆ ಎಂದರು. ಶಿಕ್ಷಕರಾದ ಉದಯ. ಎಸ್ . ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಆದರ್ಶ ನಾಯಕತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯಪಡಿಸಿದರು.
ಶಾಲಾ ಶಿಕ್ಷಣ ತಜ್ಞರಾದ ಮಹಾಬಲ ರೈ ಮಾತನಾಡಿ ದೇಶದ ಮಹಾನ್ ನಾಯಕರ ಮೌಲ್ಯಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ಮೊಹಮ್ಮದ್ ಪಲ್ಲತ್ತೂರು. ಈಶ್ವರ ನಾಯ್ಕ. ಅಬ್ದುಲ್ ಖಾದರ್ ಸುರುಳಿ ಮೂಲೆ. ಗ್ರಾಮ ಪಂಚಾಯತ ಸದಸ್ಯರಾದ ಇಬ್ರಾಹಿಂ. ವಿಕ್ರಮ್ ರೈ ಸಾಂತ್ಯ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿ,ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ ವಂದಿಸಿದರು.