ಸಾರೆಪುಣಿಯಲ್ಲಿ ನೂತನ ಮದರಸ ಕಟ್ಟಡ ಉದ್ಘಾಟನೆ-ಮಸೀದಿಗೆ ಶಿಲಾನ್ಯಾಸ

0

ಸಂಸ್ಕಾರಯುತ ಶಿಕ್ಷಣಕ್ಕೆ ಮದರಸಗಳು ಅವಶ್ಯಕ-ಅಹ್ಮದ್ ಪೂಕೋಯ ತಂಙಳ್

ಪುತ್ತೂರು: ದಾರುಲ್ ಉಲೂಮ್ ಮದರಸ ಸಾರೆಪುಣೆ ಇದರ ನೂತನ ಮದರಸ ಕಟ್ಟಡ ಉದ್ಘಾಟನೆ ಮತ್ತು ನೂತನ ಮಸೀದಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಸಯ್ಯದ್ ಅಹ್ಮದ್ ಪೋಕೋಯ ತಂಙಳ್ ಪುತ್ತೂರು ಅವರು ಅ.1ರಂದು ನೆರವೇರಿಸಿದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಂಙಳ್ರವರು ಮದರಸಗಳು ಸತ್ಪ್ರಜೆಗಳನ್ನು ರೂಪಿಸುವ ಕೇಂದ್ರವಾಗಿದ್ದು ನೈತಿಕ ಮೌಲ್ಯ ಹಾಗೂ ಸಂಸ್ಕಾರಯುತ ಶಿಕ್ಷಣ ಮದರಸಗಳಿಂದ ಸಿಗುತ್ತಿದ್ದು ಮಕ್ಕಳು ಉತ್ತಮ ಹಾದಿಯಲ್ಲಿ ಮುನ್ನಡೆಯಲು ಇದು ಕಾರಣವಾಗಿದೆ, ಸಾರೆಪುಣಿಯ ಯುವಕರು, ಹಿರಿಯರು ಧಾರ್ಮಿಕ ವಿಚಾರದಲ್ಲಿ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುವ ಕಾರಣ ಇಲ್ಲಿ ಸುಂದರ ಮದರಸ ನಿರ್ಮಾಣವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿಯವರು ಮಸೀದಿ, ಮದರಸಗಳು ಊರಿನ ಶಾಂತಿ, ಸಮಾಧಾನ, ಸೌಹಾರ್ದತೆಯ ಕೇಂದ್ರವಾಗಿದೆ ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕಾರ್ಯದರ್ಶಿ ಅಮಳ ರಾಮಚಂದ್ರ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮೊದಲಾದವರು ಮಾತನಾಡಿದರು.
ಗಟ್ಟಮನೆ ಮಸೀದಿ ಖತೀಬ್ ಖಾಲಿದ್ ಫೈಝಿ, ಗಟ್ಟಮನೆ ಮಸೀದಿ ಜಮಾಅತ್ ಕಮಿಟಿ ಅಧ್ಯಕ್ಷ ಅರಬ್ಬಿಕುಂಞಿ ಸಾರೆಪುಣಿ, ಮಜೀದ್ ದಾರಿಮಿ ಗಟ್ಟಮನೆ, ಅಬ್ದುಲ್ ಶಕೂರ್ ದಾರಿಮಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್.ಎಂ ಬಶೀರ್ ಹಾಜಿ ಶೇಖಮಲೆ, ರಝಾಕ್ ಕೆಎಂಕೆ, ಅಬ್ದುಲ್ ಹಮೀದ್ ಫ್ಯಾಮಿಲಿ, ಯು ಅಬ್ಬಾಸ್ ಚೆನ್ನಾರ್, ತಾಜ್ ಮುಹಮ್ಮದ್ ಸಂಪಾಜೆ, ಹಮೀದ್ ಹಾಜಿ ಸುಳ್ಯ, ಫಾರೂಕ್ ಸಂಟ್ಯಾರ್, ಶರೀಫ್ ಮುಕ್ರಂಪಾಡಿ, ಇಸ್ಮಾಯಿಲ್ ಗಟ್ಟಮನೆ, ಸಾರೆಪುಣಿ ಮದರಸದ ಅಧ್ಯಕ್ಷ ಎಸ್ ಎನ್ ಅಬ್ದುಲ್ಲ, ಸಾಬು ಹಾಜಿ ಗಟ್ಟಮನೆ, ಕುಂಞಿಪ್ಪ ಸಾರೆಪುಣಿ, ಅಶ್ರಫ್ ಕುಕ್ಕಾಜೆ, ಎ.ಎಸ್ ಅಬೂಬಕ್ಕರ್ ಸಾರೆಪುಣಿ ಬಶೀರ್ ತಲಕ್ಕಿ, ಪಿ.ಕೆ ಮುಹಮ್ಮದ್ ಕೂಡುರಸ್ತೆ, ರಫೀಕ್ ಇಂಜಿನಿಯರ್ ವಿಟ್ಲ, ಮುನೀರ್ ನ್ಯಾಶನಲ್, ಅಬ್ದುಲ್ ಅಝೀಝ್ ಕಟ್ಟತ್ತಾರು, ವಿಜಯ ಕುಮಾರ್ ರೈ ಕೋರಂಗ, ಐ ಸಿ ಕೈಲಾಸ್, ಮೆಲ್ವಿನ್ ಮೊಂತೆರೋ, ಮೋಹನದಾಸ ರೈ, ಕೆದಂಬಾಡಿ ಗ್ರಾ.ಪಂ ಪಿಡಿಓ ಅಜಿತ್ ಜಿ.ಕೆ, ಸರ್ಪುದ್ದೀನ್ ಕುಂಬ್ರ, ಇಮ್ರಾನ್ ಮಲ್ನಾಡ್, ಶರೀಫ್ ಸವಣೂರು, ಅಶ್ರಫ್ ಕೆ.ಜಿ.ಎನ್, ನಝೀರ್ ಶಾಂತಿನಗರ, ಹನೀಫ್ ಹಾಜಿ ಮಾಡಾವು, ಅಬ್ದುಲ್ ಅಝೀಝ್ ರೆಂಜಲಾಡಿ, ನಿಸಾರ್ ಮೊಟ್ಟೆತ್ತಡ್ಕ, ಸಾದಿಕ್ ಮಗಿರೆ, ಅಶ್ರಫ್ ಸನ್ಶೈನ್, ಅಬ್ದುಲ್ ಖಾದರ್ ಮೇರ್ಲ, ಪಿ.ವೈ ಮಹಮ್ಮದ್, ಇಬ್ರಾಹಿಂ ಹಾಜಿ ದರ್ಬೆ ಮೊದಲಾದವರು ಉಪಸ್ಥಿತರಿದ್ದರು.
ಈ ಹಿಂದೆ ಮದರಸ ಕಟ್ಟಡಕ್ಕೆ ನೆರವು ನೀಡಿದ ಹಿರಿಯರನ್ನು, ನೂತನ ಮದರಸ ಕಟ್ಟಡಕ್ಕೆ ನೆರವು ನೀಡಿದ ದಾನಿಗಳನ್ನು, ನೂತನ ಮದರಸ ಕಟ್ಟಡದ ಉಸ್ತುವಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಸ್ತುವಾರಿ ಸಮಿತಿಗೆ ಮೆಚ್ಚುಗೆ:
ಒಂದು ವರ್ಷಗಳ ಹಿಂದೆ ಮದರಸ ಕಟ್ಟಡ ನಿರ್ಮಾಣಕ್ಕೆ ಉಸ್ತುವಾರಿಗಳನ್ನಾಗಿ ಅಶ್ರಫ್ ಸಾರೆಪುಣಿ, ರಫೀಕ್ ಸಾರೆಪುಣಿ, ಎಚ್.ಎ ಇಕ್ಬಾಲ್ ಸಾರೆಪುಣಿ, ಎಸ್ ಇಬ್ರಾಹಿಂ ಸಾರೆಪುಣಿ, ಉಸ್ಮಾನ್ ಸಾರೆಪುಣಿ ಹಾಗೂ ತಾಜುದ್ದೀನ್ ಸಾರೆಪುಣಿ ಅವರನ್ನು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ನೇತೃತ್ವದಲ್ಲಿ ನೇಮಿಸಲಾಗಿತ್ತು. ಇದೀಗ ಉಸ್ತುವಾರಿಗಳ ನೇತೃತ್ವದಲ್ಲಿ ಒಂದು ವರ್ಷದ ಅವಧಿಯಲ್ಲಿ ಮದರಸ ಕಟ್ಟಡದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಲಾಗಿದ್ದು ಅದಕ್ಕಾಗಿ ಪುತ್ತೂರು ತಂಙಳ್ ಸಹಿತ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಬ್ಬಾಸ್ ಮದನಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಸಾರೆಪುಣಿ ಶಂಸುಲ್ ಉಲಮಾ ಯಂಗ್’ಮೆನ್ಸ್ ನ ಪದಾಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here