ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕವು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡು ಒಂದು ವರ್ಷ ತುಂಬಿದ ಕಾರಣ ಅ.2ರಂದು ಬೆಟ್ಟoಪಾಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಅರ್ಚಕರು ವಿಪತ್ತು ನಿರ್ವಹಣಾ ಘಟಕ ಒಂದು ವರ್ಷದಲ್ಲಿ ಮಾಡಿದ ಸೇವೆ ಹಾಗೂ ಶ್ರಮದಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮುಂದೆಯು ಈ ಘಟಕವು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಯೋಜನೆಯ ಬೆಟ್ಟಂಪಾಡಿ ವಲಯದ ಮೇಲ್ವಿಚಾರಕ ಚಂದ್ರಶೇಖರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಒಂದು ವರ್ಷ ತುಂಬಿದ ಕಾರಣ ಸೌತಡ್ಕ ಶ್ರೀ ಗಣಪತಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಮಾಡಲಾಯಿತು. ಅಲ್ಲಿಂದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವರ ದರುಶನ ಮಾಡಲಾಯಿತು.ಘಟಕದ ಅಧ್ಯಕ್ಷ ಆನಂದ, ಸಂಯೋಜಕಿ ಪದ್ಮಾವತಿ.ಡಿ, ಸದಸ್ಯರಾದ ಅಶೋಕ, ಉಮೇಶ, ದಿನೇಶ, ಹರಿಪ್ರಸಾದ, ಕೃಷ್ಣ, ಪದ್ಮಾವತಿ, ಜಲಜಾಕ್ಷಿ, ಮನೋಜ್, ಗೀತಾ, ಸುಬ್ರಹ್ಮಣ್ಯ, ಶ್ರೀಮತಿ, ಹೇಮಾವತಿ, ಸತೀಶ್.ಡಿ, ಚಂದ್ರ, ಜನಾರ್ದನ, ಪ್ರವೀಣ, ಸುಂದರ ಹಾಜರಿದ್ದರು.
ಘಟಕವು ಒಂದು ವರ್ಷದಲ್ಲಿ ಅಸಹಾಯಕರ ಮುರಿದು ಬಿದ್ದ 4 ಮನೆ ದುರಸ್ತಿ, ಹಲವಾರು ರಸ್ತೆ ರಿಪೇರಿ, ಧಾರ್ಮಿಕ ಕೇಂದ್ರ ಮತ್ತು ಶಾಲೆಗಳಲ್ಲಿ ಶ್ರಮದಾನ, ಸ್ವಚ್ಚತೆ, ಶಾಲಾ ಕೈ ತೋಟ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಯೋಜನೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕಾರ, ವಿವಿಧ ದೈವಸ್ಥಾನ ಮತ್ತು ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಸ್ವಯಂಸೇವಕರಾಗಿ ಸೇವೆ, ಚೆಲ್ಯಡ್ಕ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರಮಟ್ಟುಗಳ ತೆರವು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿರುತ್ತಾರೆ.