ನೆಲ್ಯಾಡಿ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಉಪ್ಪಿನಂಗಡಿ ಇಲ್ಲಿನ ಸಮಾಜ ಕಾರ್ಯ ವಿಭಾಗ ಮತ್ತು ಗ್ರಾಮ ಪಂಚಾಯತ್ ನೆಲ್ಯಾಡಿ ಇವರ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅ.4ರಂದು ನೆಲ್ಯಾಡಿ ಎಲೈಟ್ ಹಾಲ್ ನಲ್ಲಿ ನಡೆಯಿತು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಗಂಗಾಧರ ಶೆಟ್ಟಿಯವರು ರಕ್ತದಾನ ಮಾಡಿದ ಬಳಿಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಇದೊಂದು ಸಮಾಜಕ್ಕೆ ಉಪಯುಕ್ತವಾದ ಶಿಬಿರ ಆಗಿದೆ. ನಾವು ಕೊಡುವ ರಕ್ತ ಮೂರು ಜನರ ಜೀವ ಉಳಿಸಬಲ್ಲದು. ರಕ್ತದಾನವು ಸಾಮಾಜಿಕ ಸಾಮರಸ್ಯ ವನ್ನು ಕಾಪಾಡುತ್ತದೆ ಎಂದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ,ಜಿಲ್ಲಾ ಸಂಯೋಜಕ ಪ್ರವೀಣ್ ರವರು ಮಾತನಾಡಿ ಇಲ್ಲಿ ಸಂಗ್ರಹಗೊಂಡ ರಕ್ತವನ್ನು ಉಚಿತವಾಗಿ ಪೂರೈಕೆ ಮಾಡುತ್ತೇವೆ. ದೇಶದ ಏಕತೆ, ಸಾಮರಸ್ಯಗೆ ರಕ್ತದಾನ ಶಿಬಿರ ನಡೆಯಬೇಕು ಎಂದರು. ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ ಆರೋಗ್ಯವಂತ ಪುರುಷ ವರ್ಷದಲ್ಲಿ ನಾಲ್ಕು ಸಲ ಹಾಗೂ ಮಹಿಳೆ ಮೂರು ಸಲ ರಕ್ತದಾನ ಮಾಡಬಹುದು. ರಕ್ತದಾನ ದಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಆಗಿ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದರು. ನೆಲ್ಯಾಡಿ ಗ್ರಾಮ ಪಂಚಾಯತ್ ಪಿಡಿಒ ಆನಂದ ಗೌಡ, ನೆಲ್ಯಾಡಿ ಎಲೈಟ್ ಇಂಡಸ್ಟ್ರೀಸ್ ನಾ ಶಾಜಿ ವರ್ಗೀಸ್ , ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ನಂದೀಶ್ ವೈ.ಡಿ. ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಾನಂದ ಬಂಟ್ರಿಯಾಲ್, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ, ನೆಲ್ಯಾಡಿ ಜೇಸಿಐ ಅಧ್ಯಕ್ಷ ದಯಾಕರ ರೈ, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಷ್ಮಾ ಶಶಿ, ಪಡುಬೆಟ್ಟು ವಿಷ್ಣುಮೂರ್ತಿ ಗೆಳೆಯರ ಬಳಗ ಅಧ್ಯಕ್ಷ ಶಿವಪ್ರಸಾದ್, ಸದಸ್ಯ ಸೋಮಶೇಖರ, ರಕ್ತದಾನಿ , ನೆಲ್ಯಾಡಿ ಸಿಟಿ ಫ್ರೆಂಡ್ಸ್ ಗೌರವಾಧ್ಯಕ್ಷ ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅಧ್ಯಕ್ಷತೆ ವಹಿಸಿದ್ದರು. ವಿಧ್ಯಾರ್ಥಿನಿ ಸ್ವಾತಿ ಸ್ವಾಗತಿಸಿದರು. ವಿದ್ಯಾರ್ಥಿ ನಿ ಅಶ್ವಿತಾ ವಂದಿಸಿದರು. ಅಶ್ವಿತಾ ಮತ್ತು ಸ್ವಾತಿ ಪ್ರಾರ್ಥಿಸಿದರು. ಅನ್ವಿತಾ ನಿರೂಪಿಸಿದರು.ಪಿಡಬ್ಲ್ಯುಡಿ ಗುತ್ತಿಗೆದಾರ ಶಿವಪ್ರಕಾಶ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರಾದ ರವಿಪ್ರಸಾದ್ ಶೆಟ್ಟಿ, ಮೊಹಮ್ಮದ್ ಇಕ್ಬಾಲ್ , ಲೆಕ್ಕ ಸಹಾಯಕ ಅಂಗು ಮತ್ತಿತರರು ಉಪಸ್ಥಿತರಿದ್ದರು.