ಕಾಣಿಯೂರು -ಸವಣೂರು ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್‌ ವಾರ್ಷಿಕ ಮಹಾಸಭೆ

0

ಸವಣೂರು: ಕಾಣಿಯೂರು-ಸವಣೂರು ರೈತ ಉತ್ಪಾದಕರ ಕಂಪೆನಿ ಲಿ. ಇದರ ವಾರ್ಷಿಕ ಮಹಾಸಭೆ ಸವಣೂರು ಯುವ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವತಿಯಿಂದ ಕೈಗೊಂಡ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಗಣೇಶ್‌ ನಿಡ್ವಣ್ಣಾಯ ಅವರು, ಮುಂದಿನ ವರ್ಷ ಮಹಾಸಭೆಯನ್ನು ಸವಣೂರು ಸಹಕಾರ ಸಂಘದ ಮಹಾಸಭೆ ಮುಗಿದ ನಂತರ ಅಪರಾಹ್ನ ಅದೇ ಸಭಾಂಗಣದಲ್ಲಿ ಮಾಡಿದರೆ ಉತ್ತಮ ಎಂದರು.ಈ ಅಭಿಪ್ರಾಯಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ವಿಠಲ ರೈ ದೋಳ್ಪಾಡಿ ಮತ್ತು ಅರವಿಂದ ಕೆ.ಎಸ್‌ಅವರು ಪ್ರತೀ ವರ್ಷ ಮಣ್ಣು ಪರೀಕ್ಷೆ ಮತ್ತು ರಸಗೊಬ್ಬರ ಬಳಕೆ ಬಗ್ಗೆ ತರಬೇತಿ ನೀಡುವ ಕಾರ್ಯ ಮಾಡಬೇಕು. ಬಹುವಾರ್ಷಿಕ ಬೆಳೆಗಳಾದ ಅಡಕೆ , ತೆಂಗು, ಕಾಳು ಮೆಣಸುಗಳ ಬೆಳೆ ಸಮೀಕ್ಷೆಗಳನ್ನು ವರ್ಷದಲ್ಲಿ 2  ಬಾರಿ ಮಾಡುವ ಅವಶ್ಯಕತೆ ಇಲ್ಲ.ಇದನ್ನು  ಕನಿಷ್ಟ ಮೂರು ವರ್ಷಗಳಿಗೊಮ್ಮೆ ಮಾಡಿದರೆ ಸಾಕು ಎಂಬ ನಿಟ್ಟಿನಲ್ಲಿ ಕಾಣಿಯೂರಿನ ಎಂ.ಎನ್.ಗೌಡ ಅವರು ಸರಕಾರದ ಗಮನ ಸೆಳೆದ ಬಗ್ಗೆ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಅವರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು ವಿವರಿಸಿದಾಗ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮತ್ತು  ಎಲ್ಲಾ ಇಲಾಖೆಗಳಿಗೆ ಮಾಹಿತಿ ನೀಡಿ ಗಮನ ಸೆಳೆಯುವುದಾಗಿ ರೇಖಾ ಅವರು ಹೇಳಿದರು.

ಕೊರಗಪ್ಪ ಗೌಡ ಇಡ್ಯಡ್ಕ ಅವರು, ಬೆಳೆ ಸಮೀಕ್ಷೆ ಮಾಡುವಾಗ  ಸರ್ವೆ ನಂಬರ್‌ ಅದಲು ಬದಲಾಗಿ ಕಾಣುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ತೋಟಗಾರಿಕೆ ಇಲಾಖೆಯ ರೇಖಾ ಅವರು, ರೈತರಿಂದ ಅರ್.ಟಿ.ಸಿ. ಮತ್ತು ಸರ್ವೆ ನಂಬರ್‌ಪಡೆದು ಮಾಹಿತಿಯನ್ನು ಪಡೆದು  ಕಂದಾಯ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ವಿಜೇತ್‌ಎನ್‌.ವಿ. ಅವರು, ರೈತ ಉತ್ಪಾದಕ ಕಂಪೆನಿ ಮೂಲಕ ರೈತರ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಶಿವಪ್ರಸಾದ್‌ಕಲೂವಾಜೆ ಅವರು, ತೆಂಗು ,ಅಡಿಕೆ ಖರೀದಿ ಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾಪಿಸಿದರು. ಈ ಕುರಿತು ಮಾತನಾಡಿದ ಅಧ್ಯಕ್ಷ ಗಿರಿಶಂಕರ ಸುಲಾಯ ಅವರು, ಬಂಡವಾಳದ ಸದ್ಬಳಕೆಯ ಬಗ್ಗೆ ಯೋಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ತೆಂಗು ಕೃಷಿಯಲ್ಲಿ ಮಂಗಗಳ ಕಾಟದಿಂದ ಮುಕ್ತಿ ಪಡೆಯಲು ನೀರಾ ಅಥವಾ ಕಲ್ಪರಸ ಯೋಜನೆಗೆ ರೈತರನ್ನು ಉತ್ತೇಜಿಸುವಂತೆ ಅರವಿಂದ ಕೆ.ಎಸ್‌ ಅಭಿಪ್ರಾಯ ತಿಳಿಸಿದರು. ಆಶಾ ರೈ ಕಲಾಯಿ ಅವರು ಸಿಪಿಸಿಆರ್‌ಐ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ತೆಂಗಿನ ನಾರಿನಿಂದ ವಿನಿಗರ್‌ ಕೂಡ ತಯಾರಿಸಬಹುದು. ಅದಕ್ಕಾಗಿ ಮೌಲ್ಯ ವರ್ಧನ ಕಾರ್ಯಗಾರಗಳನ್ನು ,ಪ್ರವಾಸಗಳನ್ನು ಯೋಜಿಸಬೇಕು ಎಂದರು.

ಕಾಳುಮೆಣಸಿನ ಸುಧಾರಿತ ಕೃಷಿಯ ಬಗ್ಗೆ ಎ.ಕೃಷ್ಣ ರೈ ಪುಣ್ಚಪ್ಪಾಡಿ ಪ್ರಸ್ತಾಪಿಸಿದರು.ಹಾಗೂ ಭತ್ತದ ಬೇಸಾಯಕ್ಕೆ ಪೂರಕವಾದ ಯೋಜನೆಗಳನ್ನು ಮಾಡುವಂತೆ ಐಸಿಸಿಒಎ ಸಂಸ್ಥೆಯ ಸಂಯೋಜಕ ತಿಪ್ಪೆಸ್ವಾಮಿ ಅವರಲ್ಲಿ ಕೇಳಿಕೊಂಡರು.ಈ ಕುರಿತು ಆಸಕ್ತ ರೈತರನ್ನು ಒಟ್ಟು ಸೇರಿಸಿ ಯೋಜನೆ ಹಾಕಿಕೊಳ್ಳುವ ಬಗ್ಗೆ ತಿಪ್ಪೆ ಸ್ವಾಮಿ ಹೇಳಿದರು. ಸವಣೂರು ಸಿಎ ಬ್ಯಾಂಕಿನ ಸಿಇಓ ಚಂದ್ರಶೇಖರ ಪಿ. ಮಾತನಾಡಿ, ರೈತ ಉತ್ಪಾದಕ ಕಂಪೆನಿ ತನ್ನ ಕಡಿಮೆ ಅವಧಿಯಲ್ಲೇ ಉತ್ತಮ ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ ನೀಡುವ ಬಗ್ಗೆ ತಿಳಿಸಿದರು. ತರಕಾರಿ ಬೆಳೆಗಾರರ ಹಿತದೃಷ್ಟಿಯಿಂದ ಕೋಲ್ಡ್‌ ಸ್ಟೋರೇಜ್‌ನ ಅವಶ್ಯಕತೆಯ ಕುರಿತು ವ್ಯಕ್ತವಾದ ಅಭಿಪ್ರಾಯಕ್ಕೆ ಉತ್ತರಿಸಿದ ಅಧ್ಯಕ್ಷ ಗಿರಿಶಂಕರ್‌ ಅವರು ಇಲಾಖೆಯ ಸಹಾಯದಿಂದ ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡುವ ಬಗ್ಗೆ ತಿಳಿಸಿದರು.

ಗೇರು, ಹಲಸು, ಮಾವಿನ ಹಣ್ಣು, ಬಾಳೆಕಾಯಿಯ ಮೌಲ್ಯವರ್ಧನೆಗಾಗಿ ತರಬೇತಿ ಕಾರ್ಯಾಗಾರ ಮತ್ತು ಹಣ್ಣಿನ ಗಿಡಗಳು, ತಾಳೆ ಬೇಸಾಯದ ಕಡೆಗೂ ಕೂಡ ರೈತರು ಗಮನ ಹರಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೆಶಕಿ ರೇಖಾ ಅವರು ವಿವರಿಸಿದರು.

ಐಸಿಸಿಒಎ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ ಅವರು ಪ್ರದರ್ಶನ ಮಳಿಗೆ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಧರ್ಮೇಂದ್ರ ಗೌಡ ಕಟ್ಟತ್ತಾರು,ರಾಜೇಶ್‌ರೈ ಮೊಗರು ,ಚಂದ್ರಶೇಖರ ಮೆದು ,ಬಾಲಕೃಷ್ಣ ಗೌಡ ಇಡ್ಯಡ್ಕ , ಐಸಿಸಿಒಎ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ , ಸತೀಶ್‌ನಾಯ್ಕ ,ಗರಿಷ್ಟ ವ್ಯವಹಾರ ದಾಖಲಿಸಿದ ಸಂಸ್ಥೆಗಳ ಪರವಾಗಿ ಚಾರ್ವಾಕ ಸಿಎ ಬ್ಯಾಮಕಿನ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಸಿಇಓ ಅಶೋಕ್‌ಗೌಡ , ಸವಣೂರು ಸಿಎ ಬ್ಯಾಂಕಿನ ಅಧ್ಯಕ್ಷ ಗಣೇಶ ನಿಡ್ವಣ್ಣಾಯ ,ಸಿಇಓ ಚಂದ್ರಶೇಖರ ಪಿ., ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಹಿತಿ ಕಾರ್ಯಗಾರ

ವಾರ್ಷಿಕ ಮಹಾಸಭೆಯಲ್ಲಿ ಅಡಿಕೆ ಮತ್ತು ಕಾಳು ಮೆಣಸು ಗಿಡಗಳ ಪೋಷಣೆ ಮತ್ತು ನಿರ್ವಹಣೆಯ ಬಗ್ಗೆ ಯಾರಾ ಕಂಪೆನಿಯ ಭಾಸ್ಕರ ಅವರು, ಗೇರು ಮತ್ತು ಕಾಳುಮೆಣಸು ಗಿಡಗಳ ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ಎನ್.ಆರ್.ಸಿ.ಸಿ.ಯ ನಿವೃತ ವಿಜ್ಞಾನಿ ಯದುಕುಮಾರ್‌ಅವರು ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಸುಬ್ರಾಯ ಗೌಡ ಪಾಲ್ತಾಡಿ, ಶ್ರೀಧರ ಸುಣ್ಣಾಜೆ ಸವಣೂರು ,ಗಂಗಾಧರ ಪೆರಿಯಡ್ಕ, ಸದಾನಂದ ಸೌತೆಮಾರು ಕುದ್ಮಾರು ಯಶವಂತ ಕಳುವಾಜೆ ಕಾಯ್ಮಣ, ಸುರೇಶ್‌ ಓಡಬಾಯಿ ಕಾಣಿಯೂರು ,ಶಿವರಾಮ ಗೌಡ ದೋಳ್ಪಾಡಿ, ಕಚೇರಿ ಸಹಾಯಕ ಅಶೋಕ್‌, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಧರ್ಮೇಂದ್ರ ಗೌಡ ಕಟ್ಟತ್ತಾರು, ಮೇಲ್ವಿಚಾರಕ ಸತೀಶ್‌ನಾಯ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಂಸ್ಥೆಯ  ವಾರ್ಷಿಕ  ವರದಿ ಮತ್ತು ಲೆಕ್ಕಪರಿಶೋಧನ ತಖ್ತೆಯನ್ನು ಸಂಸ್ಥೆಯ ಸಿಇಓ ಡೀಕೆಶ್‌ಅವರು ಮಂಡಿಸಿದರು. ಸಂಸ್ಥೆಯ ನಿರ್ದೇಶಕಿ ನಿರ್ಮಲಾ ಕೇಶವ ಅಮೈ ಅವರು ಪ್ರಾರ್ಥಿಸಿದರು.2023-24ನೇ ಸಾಲಿನ ಯೋಜನೆಗಳ ಬಗ್ಗೆ ಸಂಘದ ಅಧ್ಯಕ್ಷ ಗಿರಿಶಂಕರ  ಸುಲಾಯ ಅವರು ಪ್ರಸ್ತಾಪಿಸಿದರು. ಸಂಘದ ನಿರ್ದೇಶಕ ಧನಂಜಯ ಕೇನಾಜೆ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here