





ಪುತ್ತೂರು: ಅಂಗವೈಕಲ್ಯ ಹೊಂದಿರುವ ವಿಶೇಷಚೇತನ ಹನೀಫ್ ಎಂಬರಿಗೆ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತುವಿನಿಂದ ವೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡಲಾಯಿತು ಮತ್ತು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸ್ಥಾಪನೆಗೆ ಕಾರಣಕರ್ತರಾದ ಕಾವು ಹೇಮನಾಥ್ ಶೆಟ್ಟಿಯವರು ನೀಡಿದ ರೂ.5000 ವನ್ನು ವಿಶೇಷಚೇತನ ಹನೀಫ್ ರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ, ಕ್ಲಬ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಫಾರೂಕ್ ಬಾಯಬೆ, ಅನ್ವರ್ ಖಾಸಿಂ, ಹನೀಫ್ ಬಗ್ಗುಮೂಲೆ ಉಪಸ್ಥಿತರಿದ್ದರು.











