ಆಲಂಕಾರು: ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಪಾಯಕಾರಿ ಮರ ತೆರವಿಗೆ ಸಾರ್ವಜನಿಕರಿಂದ ಅಗ್ರಹ ಕೇಳಿಬರುತ್ತಿದೆ.
ಕೊಯಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ಅತೂರು ಎಂಬಲ್ಲಿ ತಿರುವಿನಲ್ಲೆ ಅಪಾಯಕಾರಿ ಮರವಿದ್ದು, ಇಲ್ಲಿ ಅನೇಕ ಭಾರಿ ಅಪಘಾತಗಳು ಸಂಭವಿಸಿದೆ. ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಮರದಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನಗಳು ಸ್ವಲ್ಪ ತಡಕಾಡಿದರೆ ಮರಕ್ಕೆ ಗುದ್ದಿ ಅಪಾಯ ಸಂಭವಿಸುವ ಲಕ್ಷಣಗಳಿದ್ದು ಸಂಬಂಧ ಪಟ್ಟ ಇಲಾಖೆಗಳು ಈ ಬಗ್ಗೆ ನ ಹರಿಸುವಂತೆ ಸಾರ್ವಜನಿಕ ವಲಯದಲ್ಲಿ ಅಗ್ರಹಗಳು ವ್ಯಕ್ತವಾಗುತ್ತಿದೆ.
ರಾಜ್ಯ ಹೆದ್ದಾರಿ ಯ ಬದಿಯಲ್ಲಿರುವ ಈ ಮರದಿಂದಾಗಿ ಇಲ್ಲಿ ಅನೇಕ ಭಾರಿ ಅಪಘಾತಗಳು ಸಂಭವಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಪಾಯಕಾರಿ ಮರವನ್ನು ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸುವಂತೆ ಮನವಿ ಮಾಡುತ್ತೇನೆ ಹಾಗೂ ನಮ್ಮ ಸಂಸ್ಥೆಯ ವತಿಯಿಂದ ಅನೇಕ ಬಾರಿ ಸಾರ್ವಜನಿಕ ಹಿತ ದೃಷ್ಟಿಯಿಂದ ಉಚಿತವಾಗಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಅನೇಕ ಮರಗಳ ರೆಂಬೆಕೊಂಬೆಗಳನ್ನು ಇಲಾಖೆಯ ಅನುಮತಿಯೊಂದಿಗೆ ತೆರೆವುಗೊಳಿಸಿದ್ದೇವೆ.ಈ ಅಪಾಯಕಾರಿ ಮರವನ್ನು ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ತೆರವುಗೊಳಿಸುವಂತೆ ಸಾರ್ವಜನಿಕರ ಪರವಾಗಿ ವಿನಂತಿಕೊಳ್ಳುತ್ತಿದ್ದೇನೆ.
ರಾಜೇಶ್ ಶೆಟ್ಟಿ ಸಂಪ್ಯಾಡಿ
ಕ್ಲಾಸ್ 1 ಇಲೆಕ್ಟ್ರೀಕಲ್ ಮತ್ತು ಪಿ.ಡಬ್ಲೂ.ಡಿ ಗುತ್ತಿಗೆದಾರರು