ಪುತ್ತೂರು: ಅ.15ರಿಂದ ಅ.24ರ ವರೆಗೆ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಲಿರುವ ನವರಾತ್ರಿ ಉತ್ಸವ, ಶಾರದೋತ್ಸವ ಪ್ರಯುಕ್ತ ಸಮಿತಿಯ ಸಭೆಯು ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರುರವರ ಅಧ್ಯಕ್ಷತೆಯಲ್ಲಿ ಅ.6ರಂದು ಮಂದಿರದಲ್ಲಿ ನಡೆಯಿತು.
ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಅ.12ರಂದು ಬೆಳಿಗ್ಗೆ 9ಕ್ಕೆ ಪುತ್ತೂರು ಪೇಟೆಯಲ್ಲಿ ನವರಾತ್ರಿ, ಶಾರದೋತ್ಸವದ ಆಮಂತ್ರಣ ಪತ್ರದ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ದರ್ಬೆಯಿಂದ ಹೊರಟು ಬೊಳುವಾರು ಜಂಕ್ಷನ್‌ವರೆಗೆ ವಿತರಣೆಯಾಗಲಿದೆ. ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಶೋಭಾಯಾತ್ರೆಯಂದು ಶ್ರೀದೇವಿಗೆ ಶ್ರೀಮುಡಿಯ ಅಲಂಕಾರ: ಶಾರದೋತ್ಸವ ಕುರಿತಂತೆ ಈ ವರ್ಷ ಶ್ರೀದೇವಿಗೆ ಹೊಸ ಮೆರುಗು ನೀಡುವ ಅವಕಾಶ ಭಕ್ತಾದಿಗಳ ಪಾಲಿಗಿದೆ. ಅ.24ರಂದು ನಡೆಯಲಿರುವ ಶಾರದಾ ಮಾತೆಯ ವಿಗ್ರಹದ ಶೋಭಾಯಾತ್ರೆ ಸಂದರ್ಭದಲ್ಲಿ ಶ್ರೀದೇವಿಗೆ ವಿಶೇಷ ಅಲಂಕಾರ ಮಾಡಲು ಸಮಿತಿ ನಿರ್ಧರಿಸಲಾಗಿದ್ದು, ಆ ಪ್ರಕಾರವಾಗಿ ಶ್ರೀದೇವಿಗೆ ಶ್ರೀಮುಡಿಯ (ಜಲ್ಲಿ) ಅಲಂಕಾರ ಸೇವೆ ನಡೆಯಲಿದೆ. ಇದಕ್ಕೆ ಭಕ್ತಾದಿಗಳಿಂದ ಮಲ್ಲಿಗೆ ಬಾಬ್ತು ನೀಡಿ ಸೇವೆ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉತ್ಸವ ಸಮಿತಿ ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್, ಕಾರ್ಯದರ್ಶಿ ಅಜಿತ್ ಹೊಸಮನೆ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದಿನೇಶ್ ಪಂಜಿಗ, ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮಾಜಿ ಅರ್ಚಕ ವೆಂಕಟೇಶ್ ಭಟ್, ಸಮಿತಿ ಸದಸ್ಯರಾದ ಸುಧೀರ್, ಜಯಕಿರಣ್ ಉರ್ಲಾಂಡಿ, ರಮಾನಂದ ರಾವ್, ಯಶವಂತ ಆಚಾರ್ಯ, ಯೋಗಾನಂದ ರಾವ್, ಕೃಷ್ಣ ಪಿ.ಜಿ,, ದೇವದಾಸ್, ಪಕೀರ ಗೌಡ, ಗಣೇಶ್, ಪದ್ಮನಾಭ, ಗಿರೀಶ್, ಜಲಜಾಕ್ಷಿ ಹೆಗ್ಡೆ, ವಿಜಯಲಕ್ಷ್ಮಿ, ಉಮಾ ನಾಯ್ಕ್, ಗುಲಾಬಿ, ಚಂದ್ರಕಲಾ, ಹರಿಣಿ, ಕರಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.