ಉಪಾಧ್ಯಕ್ಷ ಕೆ.ಪಿ ಅಹಮದ್ ಹಾಜಿ, ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ, ಸಂಘಟನಾ ಕಾರ್ಯದರ್ಶಿ ಆಜಾದ್ ಅಬ್ದುಲ್ ರಹಿಮಾನ್ ನೇಮಕ
ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ, ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಉಪಾಧ್ಯಕ್ಷರಾಗಿ ಕೆ ಪಿ ಅಹಮದ್ ಹಾಜಿ, ಕಾರ್ಯದರ್ಶಿಯಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಗೂ ನೂತನ ಸಂಘಟನಾ ಕಾರ್ಯದರ್ಶಿಯಾಗಿ ದರ್ಬೆ ಅಬ್ದುಲ್ ರಹಿಮಾನ್ ಅಜಾದ್ ರವರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿರುವ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ನೇಮಕಗೊಳಿಸಿ ಆದೇಶಿಸಿರುತ್ತಾರೆ.
ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ನ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಪಿ ಅಹಮದ್ ಹಾಜಿಯವರು ಉಪಾಧ್ಯಕ್ಷರಾಗಿ ನಾಲ್ಕನೇ ಬಾರಿಗೆ ನೇಮಕಗೊಂಡಿರುತ್ತಾರೆ.
ಕಾರ್ಯದರ್ಶಿಯಾಗಿ ಸತತ ಐದನೇ ಬಾರಿ ಮರು ನೇಮಕಗೊಂಡ ನೂರುದ್ದೀನ್ ಸಾಲ್ಮರವರು, ಪುತ್ತೂರಿನಲ್ಲಿ ನ್ಯಾಯವಾದಿ ಮತ್ತು ನೋಟರಿಯಾಗಿ ಸೇವೆ ಸಲ್ಲಿಸುತ್ತಾ, ಕೆಪಿಸಿಸಿಯ ಸಂಯೋಜಕರಾಗಿ, ಪುತ್ತೂರು ತಾಲೂಕು ಅಹಿಂದದ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಅಬ್ದುಲ್ ರಹಿಮಾನ್ ಆಜಾದ್ ರವರು, ದರ್ಬೆ ಮಸ್ಜಿದ್ ಅಧ್ಯಕ್ಷರಾಗಿ, ಸೀರತ್ ಕಮಿಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.