ಮೂಡಬಿದಿರೆ ಜೈನ ಮಠದಲ್ಲಿ ಪುತ್ತೂರು ಆಂಜನೇಯ ಮಹಿಳಾ ಯಕ್ಷಗಾನದಿಂದ ತಾಳಮದ್ದಳೆ

0

ಪುತ್ತೂರು: ಶ್ರೀ ಜೈನ ಮಠ ಮೂಡುಬಿದಿರೆ, ಧವಳತ್ರಯ ಶ್ರೀ ಜೈನ ಕಾಶಿ ಟ್ರಸ್ಟ್ ,ಶ್ರೀ ಜೈನ ಮಠ ಟ್ರಸ್ಟ್ ಇವುಗಳ ಜಂಟಿ ಸಹಯೋಗದಲ್ಲಿ ಶ್ರೀ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ 2023ರ ಅಂಗವಾಗಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ “ಶರಸೇತು ಬಂಧ” ಎಂಬ ಯಕ್ಷಗಾನ ತಾಳಮದ್ದಳೆ ಅ.8ರಂದು ಮೂಡಬಿದಿರೆ ಜೈನಮಠದಲ್ಲಿರುವ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆಯಿತು.


ಮೂಡುಬಿದಿರೆ ಜೈನ ಕಾಶಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ, ಚೆಂಡೆ ಮದ್ದಳೆಗಳಲ್ಲಿ ದೇವಾನಂದ ಭಟ್ ಬೆಳ್ವಾಯಿ, ಮಾ.ದಿವಿಜೇಶ್ ಭಟ್ ಬೆಳ್ವಾಯಿ, ಮಾ.ಸುಮುಖ್ ತುಲ್ಪುಲೆ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಹರಿಣಾಕ್ಷಿ.ಜೆ.ಶೆಟ್ಟಿ(ವೃಧ್ಧ ಬ್ರಾಹ್ಮಣ ಮತ್ತು ಶ್ರೀ ರಾಮ) ಸಹಕರಿಸಿದರು. ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಿದ್ವಾನ್ ಡಾ.ವಿನಾಯಕ ಭಟ್ ಗಾಳಿಮನೆ ವಂದಿಸಿದರು. ಸ್ವಾಮೀಜಿ ಕಲಾವಿದರನ್ನು ಗೌರವಿಸಿದರು. ಮಠದ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here