ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಪದಾಧಿಕಾರಿಗಳ ಪದಗ್ರಹಣ

0

ಬದಲಾಗುವ ಚಿಂತನೆಯಲ್ಲಿ ನಾವು ಸಾಗಬೇಕಿದೆ: ಗಣೇಶ್ ಭಟ್ ವಾರಣಾಸಿ


ಪುತ್ತೂರು: ದೇಸೀ ಸೊಗಡು ಪುತ್ತೂರಿನಲ್ಲಿ ಇನ್ನೂ ಉಳಿದಿದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸ್ಪಷ್ಠ ಉದಾಹರಣೆಯಾಗಿದೆ. ನಗರೀಕರಣ ವ್ಯವಸ್ಥೆಯಲ್ಲಿ ಸಂಬಂಧಗಳು ದೂರವಾಗುತ್ತಿದೆ. ಕನಸುಗಳನ್ನು ಕಟ್ಟಡಗಳನ್ನಾಗಿಸುವ ಕೆಲಸ ನಿಮ್ಮದಾಗಲಿ. ಸಾವಿರಾರು ಮಂದಿಯ ಕನಸು, ನಿರೀಕ್ಷೆಯನ್ನು ಸಾಕಾರ ಮಾಡುವ ಕೆಲಸ ನಿಮ್ಮಿಂದ ಆಗುತ್ತಿರುವುದು ಸಂತಸ ತಂದಿದೆ ಎಂದು ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾದ ಗಣೇಶ್ ಭಟ್ ವಾರಣಾಸಿರವರು ಹೇಳಿದರು.
ಅವರು ಅ.8ರಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್( ಪೇಸ್) ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ನಿರ್ಗಮಿತ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನನ್ನು ಎರಡು ಭಾರಿಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಸಂಸ್ಥೆಯನ್ನು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸಲು ಸಹಕರಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಹಾಗೂ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದರು. ಬಳಿಕ ತನ್ನ ಅವಧಿಯಲ್ಲಿ ಪೇಸ್ ವತಿಯಿಂದ ಮಾಡಲಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಪೇಸ್‌ನ ಸದಸ್ಯರಾದ ರವೀಂದ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಹೆಮ್ಮೆ ನಮಗಿದೆ. ಸರಿ ತಪ್ಪು ಅವಲೋಕನ ಮಾಡುವ ಕೆಲಸ ನಮ್ಮಿಂದ ನಿರಂತರವಾಗಿ ನಡೆಯುತ್ತಿದೆ. ನಮ್ಮಲ್ಲಿರುವ ನ್ಯೂನ್ಯತೆಯನ್ನು ಸರಿಪಡಿಸಿಕೊಂಡರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಎಲ್ಲರ ಸಹಕಾರದಿಂದಾಗಿ ಸಂಸ್ಥೆ ಯಶಸ್ಸಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.


ನೂತನ ಕಾರ್ಯದರ್ಶಿ ಶ್ರೀದುರ್ಗಾ ಸ್ಟ್ರಕ್ಚರಲ್ ಕನ್ಸೆಲ್ಟೆನ್ಸಿಯ ಆಕರ್ಷ ಬಿ.ಎಸ್., ಉಪಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್.ಕೆ., ಜೊತೆಕಾರ್ಯದರ್ಶಿಯಾದ ಸೃಷ್ಠಿ
ಕನ್‌ಸ್ಟ್ರಕ್ಷನ್‌ನ ಶಿವಪ್ರಸಾದ್ ಟಿ., ಕೋಶಾಧಿಕಾರಿಯಾದ ಜಿಗಂಟಿಕ್ ಕನ್ಸ್ ಸ್ಟ್ರಕ್ಷನ್ ನ ಪ್ರವೀಣ್ ಆಚಾರ್ಯ, ನಿರ್ದೇಶಕರಾದ ರಾಮ್ ಪ್ರಕಾಶ್ ಟಿ.ಎಸ್., ಆಕಾಶ್ ಎಸ್.ಕೆ., ದಿನೇಶ್ ವಿ.ಭಟ್, ಸುದರ್ಶನ ಹಾರೆಕೆರೆ, ವಿನೋದ್ ಕುಮಾರ್ ಕೆ., ಶ್ರೀಕಾಂತ್ ಕೊಳತ್ತಾಯ, ಹೃಷಿಕೇಶ್ ಕೆ.ಎಸ್., ಕಾರ್ತಿಕ್ ಶಾನುಭೋಗ, ಸಂಜನ್ ರಾವ್ ವಿ,ರವರನ್ನು ಹೂ ನೀಡಿ ಬರಮಾಡಿಕೊಳ್ಳಲಾಯಿತು.


ಮಾಜಿ ಅಧ್ಯಕ್ಷರಾದ ಮಿತ್ತೂರು ಕನ್ಸ್ ಸ್ಟೆಕ್ಷನ್‌ನ ರಮೇಶ್ ಭಟ್ ಮಿತ್ತೂರು, ನೂತನ ಅಧ್ಯಕ್ಷರ ಪತ್ನಿ ಶಾಂತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ವೃತ್ತಿಗುರು ಡಿಸೈನ್ ಬಿಲ್ಡರ್ಸ್ ನ ಕೆ.ಕೇಶವ ಭಟ್‌ರವರನ್ನು ನೂತನ ಅಧ್ಯಕ್ಷರಾದ ಸತ್ಯಗಣೇಶ್ ಎಂ.ರವರು ಹಾಗೂ ಅತಿಥಿಗಳು ಸನ್ಮಾನಿಸಿದರು.
ತನಗೆ ವಿದ್ಯೆಕಲಿಸಿದ ಗುರುಗಳಾದ ರವಿರಾಮ್ ಎಸ್., ಶಿವರಾಮ್ ಎಮ್ ಎಸ್., ರವೀಂದ್ರರವರನ್ನು ನೂತನ ಅಧ್ಯಕ್ಷರು ಗೌರವಿಸಿದರು.ಇದೇ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ.ರವರ ಪುತ್ರಿ ಕಾತ್ಯ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯದರ್ಶಿ ರಾಮ್ ಪ್ರಕಾಶ್ ಟಿ.ಎಸ್.ರವರು ವಾರ್ಷಿಕ ವರದಿ ವಾಚಿಸಿದರು.
ವಸಂತ ಭಟ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸತ್ಯನಾರಾಯಣ ಭಟ್ ಸನ್ಮಾನಿತರ ಪರಿಚಯ ಮಾಡಿದರು.ಸಾಯಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ. ಸ್ವಾಗತಿಸಿದರು. ರವಿರಾಮ್ ಎಸ್., ಹೃಷಿಕೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆಕರ್ಷ ಬಿ.ಎಸ್. ವಂದಿಸಿದರು.


ಜೊತೆಯಾಗಿ ಸಾಗಿ ಸಮಾಜದ ಏಳಿಗೆಗೆ ಪ್ರಯತ್ನಿಸೋಣ
ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಾವು ಜೊತೆಯಾಗಿ ಸಾಗಿ ಸಮಾಜದ ಏಳಿಗೆಗಾಗಿ ಶ್ರಮಿಸೋಣ. ಮುಂದಿನ ದಿನಗಳಲ್ಲಿ ಜ್ಞಾನ ವೃದ್ಧಿಗೆ ಟೆಕ್ನಿಕಲ್ ಮೀಟ್, ಸದಸ್ಯರ ಸಲಹೆಗಳನ್ನು ಪಡೆದು ಸಮಾಜದ ಜನರ ಆಗುಹೋಗುಗಳಿಗೆ ಕೊಡುಗೆ ನೀಡುವ ಕೆಲಸವಾಗಲಿದೆ. ಕೆಲವೊಂದು ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಅದಕ್ಕೆ ಎಲ್ಲರ ಸಹಕಾರ ಅಗತ್ಯ.
ಸತ್ಯಗಣೇಶ್ ಎಂ., ಅಧ್ಯಕ್ಷರು
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್(ಪೇಸ್)

LEAVE A REPLY

Please enter your comment!
Please enter your name here